ರಾಯಚೂರು: ಕಂಕಣ ಸೂರ್ಯಗ್ರಹಣದಿಂದ ದೋಷವಿದೆ ಎಂಬ ವದಂತಿ ಹಿನ್ನೆಲೆ, ರಾಯಚೂರಿನ ಸಿರವಾರ ಪಟ್ಟಣದ ಜನತೆ ಪೂಜೆ ನೆರವೇರಿಸಿದ್ದಾರೆ.
ಒಬ್ಬ ಮಗನನ್ನು ಹೊಂದಿರುವ ತಾಯಿ, ಎಕ್ಕದ ಗಿಡಕ್ಕೆ ವೀಳ್ಯದೆಲೆ ಹಾಗೂ ಅರಿಶಿಣಕೊಂಬು ಕಟ್ಟಬೇಕೆಂದು ವದಂತಿ ಹಬ್ಬಿತ್ತು. ಹಾಗಾಗಿ, ಗ್ರಹಣ ಮುಗಿಯುತ್ತಿದ್ದಂತೆ ಓರ್ವ ಮಗನನ್ನು ಹೊಂದಿರುವ ತಾಯಂದಿರು ಎಕ್ಕದ ಗಿಡದ ಸರತಿ ಸಾಲಿನಲ್ಲಿ ನಿಂತು ಅರಿಶಿಣ ಹಾಗೂ ವೀಳ್ಯದೆಲೆ ಕಟ್ಟಿದರು.