ಲಿಂಗಸುಗೂರು(ರಾಯಚೂರು): ಇಂದು ಬೆಳಗ್ಗೆ ಮಸ್ಕಿ ನಾಲೆಗೆ ಇಬ್ಬರು ಯುವಕರು ಬಹಿರ್ದೆಸೆಗೆ ಹೋಗಿದ್ದ ವೇಳೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದು, ಅವರು ನಡುದಿಬ್ಬದಲ್ಲೇ ಸಿಲುಕಿಕೊಂಡಿದ್ದರು. ಯುವಕರ ರಕ್ಷಣೆ ಕಾರ್ಯಾಚರಣೆ ಸಂದರ್ಭದಲ್ಲಿ ಹಗ್ಗ ತುಂಡರಿಸಿದ ಪರಿಣಾಮ ನೀರಿನ ರಭಸಕ್ಕೆ ಚೆನ್ನಬಸವ ಕೊಚ್ಚಿ ಹೋಗಿದ್ದಾನೆ.
ಬಹಿರ್ದೆಸೆಗೆ ಹೋದಾಗ ರಭಸದಿಂದ ಹರಿದುಬಂದ ನೀರು: ನಾಲಾ ಮಧ್ಯೆ ಸಿಲುಕಿ ಇಬ್ಬರ ಪರದಾಟ
ಬಯಲು ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಯುವಕರ ಪೈಕಿ ಮೊದಲ ಹಂತವಾಗಿ ಅಗ್ನಿ ಶಾಮಕ ದಳ ಸಿಬ್ಬಂದಿ ಚೆನ್ನಬಸವನ ರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದರು. ಅಗ ಹಗ್ಗ ತುಂಡರಿಸುತ್ತಿದ್ದಂತೆ ಚೆನ್ನಬಸವ ಹಗ್ಗದಿಂದ ಬೇರೆ ಆದಾಗ ಅಗ್ನಿ ಶಾಮಕ ದಳ ಸಿಬ್ಬಂದಿ ಕೂಡ ಹಗ್ಗ ಬಿಟ್ಟು ರಕ್ಷಣೆಗೆ ಅರ್ಧ ಕಿಲೋ ಮೀಟರ್ನಷ್ಟು ದೂರ ಹೋಗಿ ಅಪಾಯಕ್ಕೆ ಸಿಲುಕಿದ್ದರು. ಆದರೆ ಚೆನ್ನಬಸವನ ರಕ್ಷಣಾ ಕಾರ್ಯ ವಿಫಲವಾಗಿದೆ.
ಕೆಲ ಸಮಯದ ನಂತರ ಅಗ್ನಿ ಶಾಮಕ ದಳ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆ ತರಲಾಯಿತು. ಆದರೆ ಚೆನ್ನಬಸವನನ್ನು ರಕ್ಷಣೆ ಮಾಡಲು ಸಾಧ್ಯವಾಗದ ಕಾರಣ ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಇದರಿಂದ ಆತಂಕಕ್ಕೊಳಗಾಗಿರುವ ಇನ್ನೋರ್ವ ವ್ಯಕ್ತಿ ಜಲೀಲ ತನ್ನ ರಕ್ಷಣೆ ಮಾಡಲು ಯಾರು ಬರದಂತೆ ಮನವಿ ಮಾಡಿದ್ದಾನೆ.