ETV Bharat / state

ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಮೊಸಳೆ ಸಂತತಿ ವೃದ್ಧಿ: ಜನರಲ್ಲಿ ಆತಂಕ

ರಾಜ್ಯದ ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಮೊಸಳೆಗಳ ಸಂತತಿ ಹೆಚ್ಚಾಗುತ್ತಿದೆ. ನದಿಪಾತ್ರದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Increase in the number of crocodiles
ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಮೊಸಳೆಗಳ ಸಂತತಿ ವೃದ್ಧಿ: ಆತಂಕದಲ್ಲಿ ಜನರು...
author img

By ETV Bharat Karnataka Team

Published : Sep 13, 2023, 11:00 AM IST

Updated : Sep 13, 2023, 1:26 PM IST

ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಮೊಸಳೆ ಸಂತತಿ ವೃದ್ಧಿ: ಜನರಲ್ಲಿ ಆತಂಕ

ರಾಯಚೂರು: ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ವಿಶಾಲ ಪ್ರದೇಶದಲ್ಲಿ ಹರಿಯುತ್ತಿವೆ. ನದಿಗಳ ಎರಡೂ ತೀರಗಳ ಸಮೀಪದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಈ ನದಿಗಳಲ್ಲಿ ಮೊಸಳೆಗಳ ಸಂತತಿ ಹೆಚ್ಚಾಗುತ್ತಿದೆ. ಜನರನ್ನು ಮೊಸಳೆ ಕಾಟದ ಭಯ ಆವರಿಸಿದೆ.

ಜಿಲ್ಲೆಯ ಬಲಭಾಗದಲ್ಲಿ ಕೃಷ್ಣಾ ಹಾಗೂ ಎಡ ಭಾಗದಲ್ಲಿ ತುಂಗಭದ್ರಾ ನದಿಗಳು ಹರಿಯುತ್ತವೆ. ಕೃಷ್ಣಾ ನೂರಕ್ಕೂ ಹೆಚ್ಚು ಕಿಲೋ‌‌ ಮೀಟರ್ ಮತ್ತು ತುಂಗಭದ್ರಾ 80 ಕಿಲೋ ಮೀಟರ್​ಗಳವರೆಗೆ ಜಿಲ್ಲೆಯಲ್ಲಿ ಹರಿಯುತ್ತದೆ. ಈಗ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನದಿ ದಡದಲ್ಲಿ ಮೊಸಳೆಗಳು ಗುಂಪು ಗುಂಪಾಗಿ ಕಂಡುಬರುತ್ತಿವೆ.

ಕಳೆದ ಬೇಸಿಗೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು. ಆಹಾರದ ಕೊರತೆ ಎದುರಾಗಿ ಮೊಸಳೆಗಳು ನದಿಪಾತ್ರದ ಗ್ರಾಮಗಳ ಜಮೀನು ಹಾಗೂ ಮನೆಗೆ ನುಗ್ಗಿದ ಘಟನೆಗಳೂ ನಡೆದಿದ್ದವು. ಕೆಲ ತಿಂಗಳ ಹಿಂದೆ ದೇವಸುಗೂರಿನ ಮನೆಯೊಂದಕ್ಕೆ ಮೊಸಳೆ ನುಗ್ಗಿತ್ತು. ಆಗ ನಿವಾಸಿಗಳು ಮೊಸಳೆ ಸೆರೆ ಹಿಡಿದು ಅರಣ್ಯ ಸಿಬ್ಬಂದಿಗೆ ಒಪ್ಪಿಸಿದ್ದರು. ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿತ್ತು.

ತಾಲೂಕಿನ ಕೊರ್ತಕುಂದ ಗ್ರಾಮದಲ್ಲಿ ಇತ್ತೀಚೆಗೆ ನದಿಗೆ ನೀರು ತರಲು ಹೋಗಿದ್ದ ಬಾಲಕನನ್ನು ಮೊಸಳೆ ಗಾಯಗೊಳಿಸಿದ ಘಟನೆ ವರದಿಯಾಗಿತ್ತು. ಇದೀಗ ನದಿಪಾತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ತುಂಗಭದ್ರಾ ದಡದಲ್ಲಿರುವ ಸಿಂಧನೂರು, ಮಾನವಿ ಮತ್ತು ರಾಯಚೂರು ತಾಲೂಕಿನ ಗ್ರಾಮಗಳಲ್ಲಿ ಹಾಗೂ ಕೃಷ್ಣಾ ನದಿ ತೀರದ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ಗ್ರಾಮಗಳಲ್ಲಿ ಮೊಸಳೆ ಹೆಚ್ಚಾಗಿ ಕಂಡು ಬರುತ್ತಿದ್ದು ರೈತರು ಒಂಟಿಯಾಗಿ ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ತಲೆದೋರಿದೆ.

ಬಲ ಭಾಗದಲ್ಲಿರುವ ಹರಿಯುವ ಕೃಷ್ಣಾ ನದಿಯಲ್ಲೂ ಮೊಸಳೆ ಸಂಖ್ಯೆ ವೃದ್ಧಿಸಿದೆ. ನಡುಗಡ್ಡೆಗಳಲ್ಲಿನ ಜನರು ಈ ಭಾಗದಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ. ನದಿ ತಟ ಮತ್ತು ನದಿ ಪಕ್ಕದ ಬಂಡೆಗಳ ಮೇಲೆ ಹತ್ತಾರು ಮೊಸಳೆಗಳು ಕಂಡು ಬರುತ್ತಿದ್ದು, ಜಾನುವಾರು ಬಲಿಯಾದ ನಿದರ್ಶನಗಳಿವೆ. ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜ್, ಆತ್ಕೂರು ಮತ್ತು ಜುರಾಲಾ ಹಿನ್ನೀರಿನ ಪ್ರದೇಶದಲ್ಲಿ ಹೆಚ್ಚಿನ ಮೊಸಳೆಗಳಿವೆ. ಇದರಿಂದಾಗಿ ಕುರ್ವಕಲಾ, ಕುರ್ವಕರ್ದಾ ನಡುಗಡ್ಡೆಗಳಿಗೆ ತೆಪ್ಪದಲ್ಲಿ ಹೋಗುವವರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ತುಂಗಭದ್ರಾ ನದಿಗಿಂತಲೂ ಕೃಷ್ಣಾ ನದಿಯಲ್ಲಿ ಹೆಚ್ಚು ಮೊಸಳೆಗಳು ಆಶ್ರಯ ಪಡೆದಿವೆ. ನದಿಯಲ್ಲಿ ದೊಡ್ಡ ಬಂಡೆಗಳು ಹಾಗೂ ನದಿ ತಟದ ಪ್ರದೇಶ ವಾಸಯೋಗ್ಯವಾಗಿರುವುದರಿಂದ ಮೊಸಳೆಗಳ ಸಂತತಿ ಹೆಚ್ಚಾಗುತ್ತಿದೆ. ಚಿರತೆಗಳ ಮತ್ತು ಬೀದಿ ನಾಯಿಗಳ ಸಂತತಿ ಕುಗ್ಗಿರುವುದು ಮೊಸಳೆಗಳ ಸಂತತಿ ಬೆಳವಣಿಗೆಗೆ ಅನುಕೂಲವಾಗಿದೆ.

ನದಿಯಲ್ಲಿ ಮೀನು ಹಿಡಿದು, ಜೀವನ ನಡೆಸುವ ಮೀನುಗಾರರು ಮೊಸಳೆ ಕಾಟದಿಂದ ಬೇಸತ್ತು ಹೋಗಿದ್ದಾರೆ. ಹೀಗಾಗಿ ರಕ್ಷಣೆ ಒದಗಿಸುವ ಜೊತೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಮೀನುಗಾರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಕೃಷ್ಣ ನದಿ ತೀರದಲ್ಲಿರುವ ಕುರ್ವಪುರ ನಡುಗಡೆಯಲ್ಲಿರುವ ದತ್ತಾತ್ರೇಯ ದೇಗುಲಕ್ಕೆ ದೇಶದ ನಾನಾ ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ದೇವಾಲಯಕ್ಕೆ ತೆರಳಲು ಜನರು ತೆಪ್ಪಗಳನ್ನು ಆಶ್ರಯಿಸಬೇಕು. ಆತ್ಕೂರು ಹತ್ತಿರದ ನದಿ ತಟದಿಂದ ಕುರ್ವಪುರ ನಡುಗಡ್ಡೆಗೆ ಹೋಗುವಾಗ ಬೃಹದಾಕಾರದ ಮೊಸಳೆಗಳು ಕಂಡುಬರುತ್ತಿದ್ದು ಭಕ್ತರು ಆತಂಕಪಡುತ್ತಿದ್ದಾರೆ. ತೆಪ್ಪದಲ್ಲಿ ಹೋಗುವಾಗ ಬಂಡೆಗಳಲ್ಲಿ ಆಶ್ರಯ ಪಡೆದ ಮೊಸಳೆಗಳನ್ನು ಕಂಡು ಭಯಗೊಳ್ಳುತ್ತಿದ್ದಾರೆ.

ನದಿಯಲ್ಲಿ ಮೊಸಳೆಗಳಿರುವ ಬಗ್ಗೆ ಅರಣ್ಯ ಇಲಾಖೆಯಿಂದ ಅಲ್ಲಲ್ಲಿ ಎಚ್ಚರಿಕೆ ಬೋರ್ಡ್‌ಗಳನ್ನು ಹಾಕಿ, ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ತಿಂಥಿಣಿ ಬ್ರಿಡ್ಜ್‌ನಿಂದ ಜುರಾಲಾ ಜಲಾಶಯದ ಸರಿಸುಮಾರು 140 ಕಿ.ಮೀ. ಕೃಷ್ಣಾ ನದಿ ತಟದಲ್ಲಿನ ರೈತರಿಗೆ ರಕ್ಷಣೆ ಮತ್ತು ಮೊಸಳೆಗಳಿಗೆ ಕೃತಕ ತಂಗುದಾಣ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಿ ಇಲಾಖೆ ಅನುಮೋದನೆಗೆ ಕಳುಹಿಸಲಾಗುತ್ತಿದೆ. ನದಿ ತೀರದ ಜನರಲ್ಲಿ ಎಚ್ಚರಿಕೆ ಕ್ರಮ ವಹಿಸಲಾಗುತ್ತಿದ್ದು, ಮೊಸಳೆ ಹೆಚ್ಚಾಗಿರುವ ಪ್ರದೇಶದಲ್ಲಿ ಜನರು ನದಿಗಿಳಿಯದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಯಚೂರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಚಂದ್ರಣ್ಣ ತಿಳಿಸಿದರು.

ಇದನ್ನೂ ಓದಿ: ಪಿಒಪಿ ಗಣೇಶ ಮೂರ್ತಿ ತಯಾರಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

Last Updated : Sep 13, 2023, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.