ರಾಯಚೂರು: ನಗರದ ಮಚ್ಚಿ ಬಜಾರ್ ರಸ್ತೆ ಅಗಲೀಕರಣ ವೇಳೆ ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ್, ನಗರಸಭೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.
ನಗರದ ತೀನ್ ಕಂದೀಲ್ ವೃತ್ತದಿಂದ ಅಶೋಕ ಡಿಪೋವರೆಗಿನ ಮಚ್ಚಿ ಬಜಾರ್ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಎರಡ್ಮೂರು ದಿನಗಳಿಂದ ನಡೆಯುತ್ತಿದೆ. ಜೆಸಿಬಿಯಿಂದ 60 ಫೀಟ್ ರಸ್ತೆ ಅಗಲೀಕರಣಕ್ಕೆ ಮಾರ್ಕ್ ಮಾಡಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಕಾರ್ಯಾಚರಣೆ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷ, ನಿಗದಿಯಂತೆ ಕಾರ್ಯಾಚರಣೆ ನಡೆಸುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಇನ್ಸ್ಪೆಕ್ಟರ್ ಮೇಲೆ ಗರಂ ಆಗಿದ್ದಾರೆ.
ಸದ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳದಿಂದ ತೆರಳಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ತೀನ್ ಕಂದಿಲ್ ವೃತ್ತದಿಂದ ಅಶೋಕ ಡಿಪೋದವರೆಗೆ 60 ಅಡಿಯವರೆಗೆ ರಸ್ತೆ ಅಗಲೀಕರಣ ಮಾಡಬೇಕು. ಆದ್ರೆ ರಸ್ತೆ ಅಗಲೀಕರಣದಲ್ಲಿ ಒಂದು ಕಡೆ 40 ಅಡಿ, 50, ಇನ್ನೊಂದು ಕಡೆ 60 ಅಡಿಯಂತೆ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ. ಅಲ್ಲದೇ ಸ್ಥಳೀಯರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.