ರಾಯಚೂರು: ಜಿಲ್ಲಾ ಉಸ್ತುವರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಶಾಸಕರೊಬ್ಬರು ಅಧಿಕಾರಿಗೆ ಧಮಕಿ ಹಾಕಿದ ಘಟನೆ ನಡೆದಿದೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ, ಮಾನ್ವಿ ಕ್ಷೇತ್ರದಲ್ಲಿ ಕುಡಿವ ನೀರಿನ ಯೋಜನೆಗೆ ಅನುಮೋದನೆ ದೊರೆತ್ತಿದ್ದು, ಅನುದಾನದ ಅವಶ್ಯಕತೆಯಿದೆ ಎಂದು ಚರ್ಚೆ ನಡೆಯುತ್ತಿತ್ತು. ಈ ವೇಳೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಶಿವಪ್ಪ ಮಾತನಾಡಿ ಕಾಮಗಾರಿ ನಡೆಸುತ್ತಿರುವವರು ಜೆಡಿಎಸ್ ಕಾರ್ಯಕರ್ತ ಎಂದು ಹೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಮಾನ್ವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪನಾಯಕ, ಕಾಮಗಾರಿ ಮಾಡುವವರು ಗುತ್ತಿಗೆದಾರರಾಗಿರುತ್ತಾರೆ, ಅವರೇಕೆ ಜೆಡಿಎಸ್ ಕಾರ್ಯಕರ್ತರಾಗುತ್ತಾರೆ ಎಂದು ಗರಂ ಆದರು. ಇಷ್ಟೇ ಅಲ್ಲದೇ, ಅಧಿಕಾರಿ ವಿರುದ್ಧ ಏಕವಚನದಲ್ಲಿ ಮಾತನಾಡಿ, ಕೈ ಸನ್ನೆ ಮೂಲಕ ಹುಷಾರ್ ಎಂದು ಎಚ್ಚರಿಕೆ ಕೂಡ ನೀಡಿದರು.