ಲಿಂಗಸುಗೂರು : ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಕೃಷಿ ಇಲಾಖೆ ಹೆಚ್ಚಿನ ಮುತುವರ್ಜಿವಹಿಸಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಶಾಸಕ ಡಿ ಎಸ್ ಹೂಲಗೇರಿ ಸೂಚಿಸಿದರು.
ರೈತ ಸಂಪರ್ಕ ಕೇಂದ್ರದಿಂದ ರಿಯಾಯಿತಿ ದರದಲ್ಲಿ ನೀಡಲಾಗುವ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ರೈತರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಮಣ್ಣಿನ ಫಲವತ್ತತೆ ಆಧರಿಸಿ ಬಿತ್ತನೆ ಬೀಜ ವಿತರಣೆಗೆ ಸೂಚನೆ ನೀಡಿದರು.
ರೈತರು ಕೂಡ ಅಗತ್ಯತೆ ಆಧರಿಸಿ ಬೀಜ ಖರೀದಿ ಮಾಡಬೇಕು. ಖಾಸಗಿ ಅಂಗಡಿಗಳು ರೈತರು ಖರೀದಿ ಮಾಡಿದ ಬೀಜ, ಗೊಬ್ಬರಕ್ಕೆ ರಸೀದಿ ನೀಡಬೇಕು. ಸರ್ಕಾರದಿಂದ ಸಿಗುವ ಸೌಲಭ್ಯ ನಿಯಮಾನುಸಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ವೇತಾ ವೆಂಕನಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರಿ ಸೇರಿದಂತೆ ಇತರರಿದ್ದರು.