ರಾಯಚೂರು: ಹುಬ್ಬಳ್ಳಿ ಹಾಗೂ ಬೀದರ್ ಸೇರಿದಂತೆ ಹಲವೆಡೆ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗುತ್ತಿದ್ದಾರೆ. ನಮ್ಮ ದೇಶದಲ್ಲಿ ಭಾರತ ಮಾತಾ ಕೀ ಜೈ ಅನ್ನಬೇಕೆ ಹೊರತು, ಪಾಕಿಸ್ತಾನಕ್ಕೆ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕುರಿತು ನಾವು ಕೈ ಕಟ್ಟಿ ಕೂರಲ್ಲ. ನಮ್ಮ ಸರ್ಕಾರ ಸುದೀರ್ಘ ಚರ್ಚೆ ನಡೆಸಿ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಪರ ಜೈಕಾರ ಹಾಕುವವರ ರಕ್ಷಣೆ ಮಾಡುವುದಲ್ಲಿ ತೊಡಗಿದೆ. ಭಯೋತ್ಪಾನೆಗೆ ಕಾಂಗ್ರೆಸ್ನವರು ಪ್ರೇರೇಪಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇನ್ನು ಕಾಂಗ್ರೆಸ್ನವರು ಭಾರತವನ್ನು ಪಾಕಿಸ್ತಾನಕ್ಕೆ ಒತ್ತೆಯಿಟ್ಟು, ಪಾಕಿಸ್ತಾನಕ್ಕೆ ಜಯವಾಗಲಿ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದರೂ ತಪ್ಪಿಲ್ಲ ಎಂಬ ಮಾತನ್ನು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಇದು ಬಹಳ ಶೋಚನೀಯ ಸಂಗತಿ. ಕಾಂಗ್ರೆಸ್ ದೇಶದಲ್ಲಿ ಧೂಳಿಪಟವಾಗಿದ್ದು, ಓಟ್ ಬ್ಯಾಂಕ್ಗಾಗಿ ಕಾಂಗ್ರೆಸ್ನವರು ಈ ರೀತಿ ವರ್ತಿಸುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಸಿದ್ಧವಾಗಿವೆ. ಕಾಂಗ್ರೆಸ್ ಸಭಾತ್ಯಾಗ ಮಾಡಿದ್ದು ಅವರ ಧೋರಣೆಯಾಗಿದೆ. ಕಾಂಗ್ರೆಸ್ ಪಕ್ಷ ಸದನದಲ್ಲಿ ಗದ್ದಲ ಮಾಡುತ್ತಿದೆ ಎಂದರು.