ರಾಯಚೂರು: ನಿಗೂಢವಾಗಿ ಸಾವಿಗೀಡಾದ ರಾಯಚೂರು ವಿದ್ಯಾರ್ಥಿನಿ ಮನೆಗೆ ಜಿಲ್ಲಾ ಉಸ್ತುವರಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ, ಪಾಲಕರಿಗೆ ಸ್ವಾಂತನ ಹೇಳಿದರು.
ವಿದ್ಯಾರ್ಥಿನಿ ತಂದೆ-ತಾಯಿಗೆ ಸ್ವಾಂತನ ಹೇಳಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದಾದ್ಯಂತ ಮಾಧ್ಯಮದ ಮೂಲಕ ಈ ವಿಷಯ ಪ್ರಚಾರ ಆಗ್ತಿದೆ. ಈ ಪ್ರಕರಣವನ್ನ ತನಿಖೆ ನಡೆಸಲು ಸರಕಾರ ಸಿಐಡಿಗೆ ವಹಿಸಲಾಗಿದೆ, ಸಿಐಡಿಯಿಂದಲೂ ತನಿಖೆ ನಡೆಸುತ್ತಿದ್ದಾರೆ. ಇಂದು ನಾವು ಪಾಲಕರನ್ನ ಭೇಟಿ ಮಾಡಿ, ಅವರಿಗೆ ಸ್ವಾಂತನ ಹೇಳಿದ್ದೇವೆ. ನಾವು ನಿಮ್ಮೊಟ್ಟಿಗೆ ಇರುವುದಾಗಿ ಹೇಳಿದ್ದೇವೆ. ಆರೋಪಿ ಯಾರೆ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ಆಗಲೆಬೇಕು, ಇದಕ್ಕೆ ನಮ್ಮ ಸರ್ಕಾರದಿಂದ ಯಾವುದೆ ಸಹಕಾರ ಬೇಕಿದ್ದರು ನಾವು ನೀಡುತ್ತೆವೆ.
ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ಈ ಘಟನೆ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ತನಿಖೆಯಿಂದ ಯಾರು ಆರೋಪಿಗಳಿದ್ದಾರೆ ಎಲ್ಲಾರಿಗೂ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮತ್ತೊಮ್ಮೆ ಇಂತಹ ಕೆಲಸಕ್ಕೆ ಮುಂದಾಗಬಾರುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಸದ್ಯ ತನಿಖೆ ನಮ್ಮ ರಾಜ್ಯದಿಂದ ಪೊಲೀಸ್ ರಿಂದ ನಡೆಯುತ್ತಿದ್ದು, ನಮಗೆ ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ.
ಇದೇ ವೇಳೆ ಮಾತನಾಡಿದ ವಿದ್ಯಾರ್ಥಿನಿ ತಂದೆ, ಮೂರು ದಿನದೊಳಗೆ ಸರ್ಕಾರ ಸಿಐಡಿಗೆ ತನಿಖೆ ನೀಡಿರುವುದಕ್ಕೆ ಧನ್ಯವಾದ ಹೇಳಿದ್ದು, ನಮಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ನಮ್ಮ ಮಗಳಿಗೆ ಆದ ಅನ್ಯಾಯ ಇನೊಬ್ಬರಿಗೆ ಆಗಬಾರದು ಜತೆಗೆ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದರು.