ರಾಯಚೂರು: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ.
ಚಿತ್ರರಂಗದಲ್ಲಿ ಯುವ ವಯಸ್ಸಿನಲ್ಲೇ ಸಾಧನೆ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದು, ಸೌಜನ್ಯಯುಳ್ಳ ವ್ಯಕ್ತಿಯಾಗಿದ್ದರು. ತಮ್ಮ ತಂದೆ ದಿ. ಡಾ. ರಾಜ್‌ಕುಮಾರ್ ಅವರಂತೆ ಪರಿಪೂರ್ಣ ನಟನಾ ಕಲೆ ಹೊಂದಿದ್ದರು. ಆದ್ರೆ ಅವರ ಈ ಅಕಾಲಿಕ ನಿಧನದ ಸುದ್ದಿ ಮನಸ್ಸಿಗೆ ಬಹಳ ನೋವು ತಂದಿದೆ ಎಂದಿದ್ದಾರೆ.
ಅವರು ಇತ್ತೀಚಿಗೆ ಶ್ರೀ ಮಠಕ್ಕೆ ಆಗಮಿಸಿ ಭಕ್ತಿ ಗೀತೆ ಹಾಡುವ ಮೂಲಕ ಭಾವುಕಾರಾಗಿದ್ದರು. ಅಲ್ಲದೇ 350ನೇ ಆರಾಧನಾ ಮಹೋತ್ಸವಕ್ಕೆ ತಮ್ಮ ಇಡೀ ಕುಟುಂಬದವರು ಬಂದು ಸಂಗೀತ ಸೇವೆಯನ್ನ ಸಲ್ಲಿಸುವುದಾಗಿ ಭರವಸೆ ನೀಡಿದ್ರು. ಆದ್ರೆ ಇದೀಗ ಅವರು ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ ಎಂದು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶ್ರೀಶೈಲ ಶ್ರೀಗಳಿಂದ ಸಂತಾಪ
ಉತ್ತುಂಗಕ್ಕೆ ಏರಬೇಕಾದ ಪುನೀತ್ ಇಲ್ಲ ಎನ್ನುವುದು ಚಿತ್ರರಂಗ, ಕರುನಾಡು, ಅಭಿಮಾನಿಗಳು ಸೇರಿ ಅವರ ಕುಟುಂಬಕ್ಕೂ ತುಂಬಲಾರದ ನಷ್ಟ. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದರು.