ರಾಯಚೂರು: ಮಗನಿಗೆ ಈಜು ಕಲಿಸಲು ಹೋಗಿದ್ದ ತಂದೆ ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಕ್ಯಾಂಪ್‌ನಲ್ಲಿ ಈ ಘಟನೆ 2 ದಿನಗಳ ಹಿಂದೆ ಸಂಭವಿಸಿದೆ. ಕೆ.ಲಿಂಗಣ್ಣ(38) ಮೃತ ವ್ಯಕ್ತಿ. ಬಿಸಿಲಿನ ಬೇಗೆ ಹಿನ್ನೆಲೆ ಗುರುವಾರದಂದು ಈಜಲು ಲಿಂಗಣ್ಣ ಮತ್ತು ಆತನ ಮಗ ಊರಿನ ಕೆರೆಗೆ ತೆರಳಿದ್ದರು.
ಲಿಂಗಣ್ಣ ಅವರು ಮಗನಿಗೆ ಈಜು ಕಲಿಸಿದ ಬಳಿಕ ಆತನನ್ನು ದಡದಲ್ಲಿ ಬಿಟ್ಟು ತಾವು ನೀರಿಗೆ ಧುಮುಕಿದ್ದಾರೆ. ಈ ವೇಳೆ, ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಲಿಂಗಣ್ಣ ಅವರ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದರು. 2 ದಿನಗಳ ಬಳಿಕ ಇಂದು ಕೆರೆಯಲ್ಲಿ ಶವ ತೇಲಿ ಬಂದಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಅಂತರ್ಜಾತಿ ವಿವಾಹ: ಪತಿ ಜೊತೆ ವಾಸವಿದ್ದ ಯುವತಿಯನ್ನ ಎಳೆದೊಯ್ದ ಕುಟುಂಬಸ್ಥರು!