ETV Bharat / state

ಎರಡು ಕೋಮುಗಳ ಮಧ್ಯೆ ಸಾಮರಸ್ಯ ಕೆಡಿಸುವ ಸ್ಟೇಟಸ್​: ವ್ಯಕ್ತಿಯ ಬಂಧನ

ಅನ್ಯಕೋಮಿನ ಮಹಿಳೆಯ ಬಗ್ಗೆ ಅವಹೇಳನಕಾರಿ ವಾಟ್ಸ್​ಆ್ಯಪ್​ ​ಸ್ಟೇಟಸ್ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಲಿಂಗಸುಗೂರು ಪೊಲೀಸರು ಬಂಧಿಸಿದ್ದಾರೆ.

man-arrested-for-destroys-harmony-between-two-communities
ಎರಡು ಕೋಮುಗಳ ಮಧ್ಯೆ ಸಾಮರಸ್ಯ ಕೆಡಿಸುವ ಸ್ಟೇಟಸ್​: ವ್ಯಕ್ತಿಯ ಬಂಧನ
author img

By

Published : Jun 2, 2023, 4:00 PM IST

ರಾಯಚೂರು: ಅನ್ಯಕೋಮಿನ ಮಹಿಳೆಯ ಬಗ್ಗೆ ಅವಹೇಳನಕಾರಿ ವಾಟ್ಸ್​ಆ್ಯಪ್​​ ​ ಸ್ಟೇಟಸ್ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಲಿಂಗಸುಗೂರು ಪೊಲೀಸರು ಬಂಧಿಸಿದ್ದಾರೆ. ಲಿಂಗಸುಗೂರು ಪಟ್ಟಣದಲ್ಲಿ ದಿನಾಂಕ 1/6/2023 ರಂದು ಒಬ್ಬ ವ್ಯಕ್ತಿ ಎರಡು ಕೋಮುಗಳ ನಡುವೆ ಸಾಮರಸ್ಯ ಕೆಡಿಸುವ ವಿಷಯವನ್ನು ತನ್ನ ವಾಟ್ಸ್​ಆ್ಯಪ್​ ​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದು, ಈ ವಿಚಾರವಾಗಿ ರಾತ್ರಿ 9 ಗಂಟೆಗೆ ಲಿಂಗಸುಗೂರು ಠಾಣೆಯಲ್ಲಿ ದೂರು ಸ್ವೀಕರಿಸಿ, ಕೂಡಲೇ ಗುನ್ನೆ ನಂ 117/2023 ಕಲಂ: (295)ಎ. 505(1)(ಸಿ) ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

man arrested for destroys harmony between two communities
ಜಿಲ್ಲಾ ಪೊಲೀಸ್​ ಅಧೀಕ್ಷಕರು ಹೊರಡಿಸಿರುವ ಪ್ರಕಟಣೆ

ಈ ಸಂಬಂಧ ಲಿಂಗಸುಗೂರು ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಎಸ್​ಪಿ ಲಿಂಗಸುಗೂರು ನೇತೃತ್ವದಲ್ಲಿ ಪೊಲೀಸ್​ ಸೂಕ್ತ ಬಂದೂಬಸ್ತ್​ ಕೈಗೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ವಿಚಾರವಾಗಿ ಯಾವುದೇ ವದಂತಿಗಳಿಗೆ, ಸುಳ್ಳು ಸುದ್ದಿಗಳಿಗೆ ಕಿವಿಗೊಡದೇ, ವದಂತಿಗಳನ್ನು ಬೇರೆಯವರಿಗೆ ಕಳುಹಿಸದೆ ಸಮಾಜ ಸ್ವಾಸ್ಥ್ಯ ಕಾಪಾಡಲು ಕೋರಲಾಗಿದೆ.

ಈ ವಿಚಾರವಾಗಿ ಯಾವುದೇ ಸ್ಪಷ್ಟತೆ ಬೇಕಾದಲ್ಲಿ ಸ್ಥಳೀಯ ಪೊಲೀಸ್​ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ಮತ್ತು ಜಿಲ್ಲೆಯಲ್ಲಿ ಶಾಂತಿ ಸೌಹರ್ದತೆಯನ್ನು ಕಾಪಾಡಲು ಪೊಲೀಸ್​ ಇಲಾಖೆಯೊಂದಿಗೆ ಸಹಕರಿಸುವಂತೆ ವಿನಂತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ಒಂಟಿ ವೃದ್ಧೆಯ ಕೊಲೆ, ಕಳ್ಳತನ: ಆರೋಪಿಗಳು ಸೆರೆ

ರಾಯಚೂರಲ್ಲಿ ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ-ಮಗ ಸಾವು: ಕರೆಯಲ್ಲಿ ಮುಳುಗಿ ಚಿಕಪ್ಪ ಹಾಗೂ ಮಗ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಕೊರ್ತಕುಂದಾ ಗ್ರಾಮದ ಹೊರವಲಯದಲ್ಲಿ ನಿನ್ನೆ(ಗುರುವಾರ) ನಡೆದಿತ್ತು.

ಕೊರ್ತಕುಂದಾ ಗ್ರಾಮದ ಹೊರ ವಲಯದಲ್ಲಿರುವ ಕೆರೆಯಲ್ಲಿ ಚಿಕ್ಕಪ್ಪ, ಮಗ ಮುಳುಗಿ ಮೃತಪಟ್ಟಿದ್ದರು. ಕೊರ್ತಕುಂದಾ ಗ್ರಾಮದ ಸಲಿಂ ಹುಸೇನಸಾಬ್ (32) ಹಾಗೂ ಅವರ ಅಣ್ಣನ ಮಗ ಯಾಸೀನ್ ರಫಿ (13) ಮೃತರಾಗಿದ್ದರು. ಮೃತ ಸಲಿಂ ನರೇಗಾ ಕೆಲಸಕ್ಕೆ ಹೋಗಿದ್ದರು. ಈ ವೇಳೆ, ಅವರ ಅಣ್ಣನ ಮಗ ಯಾಸೀನ್ ಕೂಡ ಜೊತೆಗೆ ಹೋಗಿದ್ದ. ತಮ್ಮ ಚಿಕ್ಕಪ್ಪ ಕೆಲಸದಲ್ಲಿ ತೊಡಗಿದ್ದ ವೇಳೆ ಯಾಸೀನ್ ಕುಡಿಯಲು ನೀರು ತೆಗೆದುಕೊಂಡು ಬರಲು ಕೆರೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಕಾಲು ಜಾರಿ ಯಾಸೀನ್ ಕೆರೆಯಲ್ಲಿ ಬಿದ್ದಿದ್ದನು.

ಈಜು ಬಾರದ ಬಾಲಕನ ಕೂಗಾಟ, ಚೀರಾಟ ಕೇಳಿ ಸಲೀಂ ಕೆರೆ ಬಳಿ ಓಡಿ ಬಂದು ರಕ್ಷಣೆಗೆ ಮುಂದಾಗಿದ್ದ. ಆದ್ರೆ ರಕ್ಷಣೆಗೆ ಧಾವಿಸಿದ ಚಿಕ್ಕಪ್ಪ ಹಾಗೂ ಬಾಲಕ ಇಬ್ಬರೂ ಮೃತಪಟ್ಟಿದ್ದರು ಎಂದು ತಿಳಿದು ಬಂದಿತ್ತು. ಘಟನೆ ವಿಷಯ ತಿಳಿದು ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಆಗಮಿಸಿ, ಶವಗಳನ್ನು ಕೆರೆಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿತ್ತು.

ಇದನ್ನೂ ಓದಿ:ಮದುವೆಗೆ ನಾಲ್ಕೇ ದಿನ ಬಾಕಿ ಇತ್ತು: ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.