ETV Bharat / state

ಸರ್ಕಾರದ ಹಣ ದುರುಪಯೋಗ, ನಕಲಿ ದಾಖಲೆ ಸೃಷ್ಟಿ ಪ್ರಕರಣ:  ಆರೋಪಿಗಳಿಗೆ ಜೈಲು ಶಿಕ್ಷೆ - ಲಿಂಗಸಗೂರು ಹೆಚ್ಚುವರಿ ಸಿಜೆ ಹಾಗೂ ಜೆಎಮ್ಎಫ್​ಸಿ ನ್ಯಾಯಾಲಯ

ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕಾಮಗಾರಿ ಕೈಗೊಳ್ಳದೇ ಹಣ ದುರುಪಯೋಗ ಪಡೆದುಕೊಳ್ಳಲಾಗಿದ್ದು, ಲಿಂಗಸುಗೂರು ನ್ಯಾಯಾಲಯದಿಂದ ಆರೋಪಿಗಳಿಗೆ ದಂಡ ವಿಧಿಸಲಾಗಿದೆ.

ಲಿಂಗಸಗೂರಿನಲ್ಲಿ ಆರೋಪಿಗಳಿಗೆ ದಂಡ
ಲಿಂಗಸಗೂರಿನಲ್ಲಿ ಆರೋಪಿಗಳಿಗೆ ದಂಡ
author img

By

Published : Dec 11, 2019, 2:20 PM IST

Updated : Dec 11, 2019, 2:46 PM IST

ರಾಯಚೂರು: ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕಾಮಗಾರಿ ಕೈಗೊಳ್ಳದೇ ಹಣ ದುರುಪಯೋಗ ಪಡೆದುಕೊಳ್ಳಲಾಗಿದೆ. ಈ ಆರೋಪದ ಮೇರೆಗೆ ದಾವಣಗೆರೆಯ ಇಬ್ಬರು ಪ್ರಥಮ ದರ್ಜೆ ಗುತ್ತಿಗೆದಾರರನ್ನು, ಲಿಂಗಸುಗೂರು ಹೆಚ್ಚುವರಿ ಸಿಜೆ ಹಾಗೂ ಜೆಎಮ್ಎಫ್​ಸಿ ನ್ಯಾಯಾಲಯ ದಂಡ ವಿಧಿಸಿ, ಮೂರು ವರ್ಷಗಳ ಕಾಲ ಜೈಲುಶಿಕ್ಷೆ ನೀಡಲಾಗಿದೆ.

ನಕಲಿ‌ ಬಿಲ್ಲುಗಳನ್ನು ಸೃಷ್ಟಿಸಿ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮದ ಗುತ್ತಿಗೆದಾರ ಬುಲ್ಲನಗೌಡ ₹ 8,40,180 ಹಾಗೂ ಹಗರಿಬೊಮ್ಮನಳ್ಳಿ ತಾಲೂಕಿನ ಕಡ್ಲಬಾಳ ಗ್ರಾಮದ ಹೆಚ್.ಕೆ. ಶ್ರೀನಿವಾಸ ಪೂಜಾರ ₹ 8,41,141 ದುರ್ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಮೇರೆಗೆ ಅಂದಿನ ಸಿಪಿಐ ಶಿವರಾಜ ಹೊಸಮನಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಬ್ಬರಿಗೆ ಅನುಕ್ರಮವಾಗಿ ₹ 50 ಸಾವಿರ ಹಾಗೂ ₹ 45 ಸಾವಿರ ದಂಡ ವಿಧಿಸಿ, ಈ‌ ಮೊತ್ತದಲ್ಲಿ ಇಬ್ಬರೂ ತಲಾ ರೂ.1,50,000 ಪರಿಹಾರದ ರೂಪದಲ್ಲಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ನೀಡಲು ಕೋರ್ಟ್ ಆದೇಶಿಸಿದೆ.

ನಕಲಿ ದಾಖಲೆ ಸೃಷ್ಟಿಸಿ 18 ತಿಂಗಳ ಕೆಲಸ ಮಾಡಿದ ಭೂಪರು

ಇನ್ನೊಂದು ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಪೌರಾಡಳಿತ ನಿರ್ದೇಶನಾಲಯದ ನಕಲಿ ವರ್ಗಾವಣೆ ಆದೇಶ ಸೃಷ್ಟಿಸಿ, ಹಟ್ಟಿಯ ಚಿನ್ನದ ಗಣಿ ಕಂಪನಿಯಲ್ಲಿ 18 ತಿಂಗಳ ಕಾಲ ಇಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ.

ಲಿಂಗಸಗೂರಿನಲ್ಲಿ ಆರೋಪಿಗಳಿಗೆ ದಂಡ
ಲಿಂಗಸಗೂರಿನಲ್ಲಿ ಆರೋಪಿಗಳಿಗೆ ದಂಡ

ಫಯಾಜುದ್ದೀನ್ ಮತ್ತು ನಾಸಿರ್ ಅಲಿ ಸುಳ್ಳು ದಾಖಲೆ ಸೃಷ್ಟಿಸಿದ್ದು, ವೇತನ ಸಹ ಪಡೆದಿದ್ದಾರೆ. ಆ ಮೂಲಕ ಕಂಪನಿಗೆ ನಷ್ಟ ಉಂಟು ಮಾಡಿದ್ದಾರೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಪಿಎಸ್ಐ ವರದರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Intro:ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ಮೋಸ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ಮೂರು ವರ್ಷ ಶಿಕ್ಷೆ ಹಾಗೂ ದಂಡ

ರಾಯಚೂರು. ಡಿ.10
ಜಿಲ್ಲೆಯ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕಾಮಗಾರಿ ಕೈಗೊಳ್ಳದೇ ಹಣ ದುರುಪಯೋಗ ಪಡೆದುಕೊಂಡ ಆರೋಪದ ಮೇರೆಗೆ ಇಬ್ಬರು ಗುತ್ತಿಗೆದಾರರನ್ನು ಲಿಂಗಸುಗೂರು ಹೆಚ್ಚುವರಿ ಸಿಜೆ ಹಾಗೂ ಜೆಎಮ್ಎಫ್ಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಘಟನೆ ನಡೆದಿದೆ.

Body:ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಬುಲ್ಲನಗೌಡ ನಕಲಿ‌ ಬಿಲ್ಲುಗಳನ್ನು ಸೃಷ್ಟಿಸಿ ರೂ.8,40,180 ದುರ್ಬಳಕೆ ಮಾಡಿಕೊಂಡಿದ್ದು ಹಾಗೂ ಹಗರಿಬೊಮ್ಮನಳ್ಳಿ ತಾಲೂಕಿನ ಕಡ್ಲಬಾಳ ಗ್ರಾಮದ ಹೆಚ್.ಕೆ.ಶ್ರೀನಿವಾಸ ಪೂಜಾರ ರೂ. 8,41,141 ದುರ್ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯ ದಾಖಲಾದ ದೂರಿನ ಮೇರೆಗೆ ಅಂದಿನ ಸಿಪಿಐ ಶಿವರಾಜ ಹೊಸಮನಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಬ್ಬರಿಗೆ ಅನುಕ್ರಮವಾಗಿ ರೂ.50,ಸಾವಿರ ಹಾಗೂ 45 ಸಾವಿರ ದಂಡ ವಿಧಿಸಿ ಈ‌ ಮೊತ್ತದಲ್ಲಿ ಇಬ್ಬರೂ ತಲಾ ರೂ.1,50,000 ಪರಿಹಾರದ ರೂಪದಲ್ಲಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ನೀಡಲು ಕೋರ್ಟ್ ಆದೇಶಿಸಿದೆ.
ಇಬ್ಬರು ಆರೋಪಿಗಳು ನಕಲು ಬಿಲ್ಲುಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡೆದುಕೊಂಡಿದ್ದರು.
ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದರು.

ನಕಲಿ ದಾಖಲೆ ಸೃಷ್ಟಿಸಿ 18 ತಿಂಗಳ ಕೆಲಸ ಮಾಡಿದ ಭೂಪರು:
ಮತ್ತೊಂದು ಪ್ರಕರಣದಲ್ಲಿ
ಫಯಾಜುದ್ದೀನ್ ಮತ್ತು ನಾಸಿರ್ ಅಲಿ ಸುಳ್ಳು ದಾಖಲೆ ಸೃಷ್ಟಿಸಿ ಪೌರಾಡಳಿತ ನಿರ್ದೇಶನಾಲಯದ ನಕಲಿ ವರ್ಗಾವಣೆ ಆದೇಶ ಸೃಷ್ಟಿಸಿ ರಾಜ್ಯದ ಏಕೈಕ ಚಿನ್ನದ ಗಣಿಯಾದ ಜಿಲ್ಲೆಯ ಹಟ್ಟಿ ಚಿನ್ನದ ಗಣಿಗೆ ವರ್ಗಾವಣೆ ಯಾಗಿದೆ ಎಂದು ನಂಬಿಸಿ ವರದಿ ನೀಡಿ 18 ತಿಂಗಳ ಕಾಲ ಕರ್ತವ್ಯ ನಿರ್ವಹಿಸಿ ವೇತನ ಪಡೆದಿದ್ದಾರೆ ಆ ಮೂಲಕ ಕಂಪನಿಗೆ ನಷ್ಟ ಉಂಟು ಮಾಡಿದ್ದಾರೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಂದಿನ ಪಿಎಸ್ಐ ವರದರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಇದೇ ನ್ಯಾಯಾಲಯ ಆರೋಪಿಗಳಿಗೆ ಮೂರು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಇಬ್ಬರಿಗೆ ತಲಾ ರೂ.30 ಸಾವಿರ ದಂಡ ವಿಧಿಸಲಾಗಿದೆ.Conclusion:ಹಟ್ಟಿ ಪೊಲೀಸರ ತನಿಖೆಯಿಂದ ಆರೋಪಿಗಳು ಕಂಬಿ ಎಣಿಸುವಂತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದ ಮೂರ್ತಿ ಅವರು ಶ್ಲಾಘಿಸಿದ್ದಾರೆ.

ಸೂಚನೆ: pres note ಮಾಹಿತಿಗಾಗಿ ಹಾಕಿದಿನಿ.

ಸರ್ ಈ ಸುದ್ದಿಗೆ ಫೋಟೋ ಕಾರ್ಟೂನ್ ಬಳಸಿಕೊಳ್ಳಿ.
Last Updated : Dec 11, 2019, 2:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.