ETV Bharat / state

ಮಾನ್ವಿಯ ಸರ್ಕಾರಿ ಶಾಲೆ ಬಳಿ ಚಿರತೆ ಪ್ರತ್ಯಕ್ಷ.. ಆತಂಕದಲ್ಲಿ ಸ್ಥಳೀಯರು

ಮಾನ್ವಿ ಪಟ್ಟಣದ ಬಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ಗುಡ್ಡದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ತಹಸೀಲ್ದಾರ್, ವಲಯ ಅರಣ್ಯಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತೊಂದೆಡೆ ಯಾದಗಿರಿಯ ಕೂಡ್ಲೂರು ಗ್ರಾಮದಲ್ಲಿ ಪತ್ತೆಯಾದ ಬೃಹತ್ ಗಾತ್ರದ ಮೊಸಳೆಯನ್ನು ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬಿಡಲಾಯಿತು.

ಶಾಲೆ ಬಳಿ ಚಿರತೆ ಪ್ರತ್ಯಕ್ಷ
ಮಾನವಿ ಮಲ್ಲಿಕಾರ್ಜುನ ಬೆಟ್ಟದಲ್ಲಿ ಚಿರತೆ ಪ್ರತ್ಯೇಕ್ಷ
author img

By ETV Bharat Karnataka Team

Published : Nov 10, 2023, 4:39 PM IST

Updated : Nov 10, 2023, 9:22 PM IST

ಶಾಲೆ ಬಳಿ ಪ್ರತ್ಯಕ್ಷಗೊಂಡ ಚಿರತೆ

ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟದಲ್ಲಿ ಚಿರತೆಯೊಂದು ತಿರುಗಾಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಆಗಾಗ್ಗೆ ಬೆಟ್ಟದಿಂದ ಹೊರಗಡೆ ಬಂದು ಹೋಗುತ್ತಿರುವ ಚಿರತೆ ಬಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೂಗಳತೆಯಲ್ಲೇ ಗುರುವಾರ ಬೆಳಗ್ಗೆ ಕಾಣಿಸಿಕೊಂಡಿದೆ. ಈಗಾಗಲೇ ಕೃಷ್ಣಮೃಗ, ಮೇಕೆಯನ್ನು ಚಿರತೆ ಬೇಟೆಯಾಡಿದ್ದು,ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

ಆಹಾರ ಅರಸಿ ಪಟ್ಟಣ ಪ್ರದೇಶಕ್ಕೆ ಚಿರತೆ ನುಗ್ಗುವ ಭೀತಿ ಜನರನ್ನು ಕಾಡುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ಚಿರತೆಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಆ ವೇಳೆ ಹಸು ಕರುವಿನ ಮೇಲೆ ದಾಳಿ ಮಾಡಿರುವ ಕುರಿತಾಗಿ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕೆಂದು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಪಟ್ಟಣದ ವಾರ್ಡ್ ನಂ 27 ರಲ್ಲಿ ಬಾಲನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ಗುಡ್ಡದಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಚಿರತೆ ಯೊಂದು ಕುಳಿತಿರುವುದನ್ನು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೋಡಿ ಭಯಭೀತರಾಗಿದ್ದಾರೆ. ಚಿರತೆ ಪ್ರತ್ಯೇಕ್ಷ ಆಗಿರುವ ಬಗ್ಗೆ ಮಾಹಿತಿ ದೊರೆಯುತ್ತಿರುವಂತೆ ತಹಸೀಲ್ದಾರ್ ಹಾಗೂ ಮಾನ್ವಿ ವಲಯ ಅರಣ್ಯಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೃಹತ್ ಗಾತ್ರದ ಮೊಸಳೆ ಸೆರೆ

ಕೂಡ್ಲೂರು ಗ್ರಾಮದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ: ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಮೀಪದ ಕೂಡ್ಲೂರು ಗ್ರಾಮದ ಹೊರವಲಯದ ಹತ್ತಿಯ ಹೊಲದಲ್ಲಿ ಅಂದಾಜು 150 ಕೆಜಿ ತೂಕದ ಬೃಹತ್ ಗಾತ್ರದ ಮೊಸಳೆಯೊಂದು ಗುರುವಾರ ಪ್ರತ್ಯಕ್ಷವಾಗಿದೆ.

ಗ್ರಾಮದ ರೈತರು ಎಂದಿನಂತೆ ಹತ್ತಿ ಬೆಳೆ ಬಿಡಿಸಲು ಬೆಳಗ್ಗೆ ಹೊಲಕ್ಕೆ ತೆರಳಿದ್ದರು. ಆದರೆ, ಸುಮಾರು ಅರ್ಧ ಕಿ. ಮೀ. ದೂರದ ಕೆರೆಯಿಂದ ಹೊಲದ ಕಡೆ ಚಲಿಸಿಕೊಂಡು ಹೋದ ವಿಭಿನ್ನವಾದ ಪ್ರಾಣಿಯ ಹೆಜ್ಜೆ ಗುರುತು ನೋಡಿ ವಿಚಲಿತಗೊಂಡ ರೈತರು, ಆ ಹೆಜ್ಜೆ ಗುರುತು ಹಿಂಬಾಲಿಸಿಕೊಂಡು ಹೋಗಿ ಹತ್ತಿ ಹೊಲದಲ್ಲಿ ಮೊಸಳೆ ಮಲಗಿರುವುದನ್ನು ನೋಡಿದ್ದಾರೆ. ಮೊಸಳೆ ಗಮನಿಸಿದ ರೈತರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ವಲಯಅರಣ್ಯಾಧಿಕಾರಿ ಎಂ. ಲಕ್ಷ್ಮಣ ಅವರ ನೇತೃತ್ವದ ತಂಡ ಆಗಮಿಸಿ ಗ್ರಾಮಸ್ಥರ ಸಹಾಯದಿಂದ ಮೊಸಳೆಯನ್ನು ಬಲಿಗೆ ಕೆಡವಿದ್ದಾರೆ. ನಂತರ ಅದನ್ನು ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬಿಡುವುದಾಗಿ ಅರಣ್ಯಾಧಿಕಾರಿ ರೈತರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿ ಚಂದ್ರೇಶ್ ನಿಲಕಟ್ಟಿ, ಗಸ್ತುವನ ಪಾಲಕ ಮಹ್ಮದ್ ರಿಜ್ವಾನ್ ಹಾಗೂ ಅಮರೇಶ ನಾಯಕ, ಸಂತೋಷ ಕುಮಾರ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

ಇದನ್ನೂ ಓದಿ:ಹಾಸನಾಂಬೆ ದೇವಾಲಯದಲ್ಲಿ ನೂಕುನುಗ್ಗಲು.. ಹಲವು ಭಕ್ತರಿಗೆ ಗಾಯ

Last Updated : Nov 10, 2023, 9:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.