ETV Bharat / state

ಶಕ್ತಿನಗರದಲ್ಲಿರುವ ಆರ್​ಟಿಪಿಎಸ್​​ನಲ್ಲಿ ಅವಘಡ : ಮೂವರು ಕಾರ್ಮಿಕರಿಗೆ ಗಾಯ - ಈಟಿವಿ ಭಾರತ ಕನ್ನಡ ನ್ಯೂಸ್

ಶಕ್ತಿನಗರದಲ್ಲಿರುವ ಆರ್​ಟಿಪಿಎಸ್ ಅವಘಡ - ಮೂವರು ಬಿಹಾರ ಮೂಲದ ಕಾರ್ಮಿಕರಿಗೆ ಗಾಯ - ಶಕ್ತಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ

labours-injured-in-rtps-in-shaktinagar
ಶಕ್ತಿನಗರದಲ್ಲಿರುವ ಆರ್​ಟಿಪಿಎಸ್​​ನಲ್ಲಿ ಅವಘಡ : ಮೂವರು ಕಾರ್ಮಿಕರಿಗೆ ಗಾಯ
author img

By

Published : Jan 4, 2023, 5:49 PM IST

Updated : Jan 4, 2023, 6:39 PM IST

ರಾಯಚೂರು : ಬೃಹತ್ ಶಾಖೋತ್ಪನ್ನ ಕೇಂದ್ರದಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ. ತಾಲೂಕಿನ ಶಕ್ತಿನಗರದಲ್ಲಿರುವ ಆರ್​ಟಿಪಿಎಸ್ ನಲ್ಲಿ ಕಲ್ಲಿದ್ದಲು ಬಂಕರ್ ಮೇಲೆ ಸ್ಕ್ರ್ಯಾಪ್ ನ್ನು ಕಟ್​ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬಿಹಾರ ಮೂಲದ ಸೋನು ಕುಮಾರ್​ ಪಾಸ್​, ರಾಮ್​ಪ್ರೀತ್​, ಮಹಾದೇವ ಎಂಬವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮಹಾದೇವ ಎಂಬವರಿಗೆ ಗಂಭೀರ ಗಾಯಗಳಾಗಿವೆ.

labours-injured-in-rtps-in-shaktinagar
ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು

ಆರ್​ಟಿಪಿಎಸ್​​ನ ಒಂದು ಘಟಕದ ಬಂಕರ್ ಮೇಲೆ ಕಾರ್ಮಿಕರು ಸ್ಕ್ರ್ಯಾಪ್ ಕಟ್ ಮಾಡುತ್ತಿದ್ದರು. ಈ ವೇಳೆ ಕಾರ್ಮಿಕರು ಆಯತಪ್ಪಿ ಬಿದ್ದಿರುವುದಾಗಿ ತಿಳಿದುಬಂದಿದೆ. ಇನ್ನು ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಆರ್ ಟಿಪಿಎಸ್ ಇಡಿ ದಿವಾಕರ್, ಕಾರ್ಖಾನೆಯಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಾಲು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಪ್ರಕರಣ ಬೆಳಕಿಗೆ ಬಂದ 9 ತಿಂಗಳ ಬಳಿಕ ಚಾರ್ಮಾಡಿ ಘಾಟ್​​ನಲ್ಲಿ ಪೊಲೀಸರಿಂದ ಶವ ಹುಡುಕಾಟ

Last Updated : Jan 4, 2023, 6:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.