ETV Bharat / state

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ... ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ - etv bharat

ರಾಯಚೂರಿನ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ 'ಕಾರ ಹುಣ್ಣಿಮೆ'ಗೆ ಇಂದು ವಿದ್ಯುಕ್ತ ಚಾಲನೆ ದೊರೆತಿದೆ. ಕಾರ ಹುಣ್ಣಿಮೆ ಅಂಗವಾಗಿ ನಡೆಯುತ್ತಿರುವ ಈ ಹಬ್ಬದಲ್ಲಿ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಎಲ್ಲರ ಗಮನ ಸೆಳೆಯುತ್ತಿದೆ.

ಕಾರ ಹುಣ್ಣಿಮೆಗೆ ಅಭೂತ ಪೂರ್ವ ಚಾಲನೆ
author img

By

Published : Jun 16, 2019, 7:19 PM IST

Updated : Jun 16, 2019, 9:55 PM IST

ರಾಯಚೂರು: ಬಿಸಿ ಬೇಸಿಗೆ ಕಳೆದು ಮುಂಗಾರು ಪ್ರಾರಂಭವಾಗಿದ್ದು, ರೈತ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಇಂದು ಸಂಸದ ರಾಜಾ ಅಮರೇಶ್ವರ ನಾಯಕ ಚಾಲನೆ ಕೊಟ್ಟರು.

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಸಂಭ್ರಮ

ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದ ಆಗಮಿಸುವ ರೈತಾಪಿ ವರ್ಗ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಕಳೆದ 19 ವರ್ಷಗಳಿಂದ ಕಾಪು ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಈ ಹಬ್ಬಕ್ಕೆ ಇಲ್ಲಿನ ಎಪಿಎಂಸಿ, ಹಟ್ಟಿ ಚಿನ್ನದ ಗಣಿ ಕಂಪನಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಅನುದಾನ ನೀಡಿ ಪೋಷಿಸುತ್ತಾ ಬಂದಿದೆ.

ಇಲ್ಲಿನ ಎಪಿಎಂಸಿಯಲ್ಲಿ ಪ್ರತೀ ವರ್ಷ 3 ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಈ ಹಬ್ಬದ ಪ್ರಮುಖ ಆಕರ್ಷಣೆ. ಇಂದು ರಾಜ್ಯದ ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ನಡೆದಿದೆ. 2ನೇ ದಿನವಾದ ನಾಳೆ ಅಂತಾರಾಜ್ಯ ಎತ್ತುಗಳಿಗೆ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. ಮೊದಲನೇ ದಿನ ರಾಜ್ಯದ ಎತ್ತುಗಳಿಂದ ಒಂದೂವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆದಿದ್ದು 9 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಮೊದಲನೇ ಸ್ಥಾನ ಪಡೆದ ಎತ್ತುಗಳಿಗೆ 45 ಸಾವಿರ, 2ನೇ ಸ್ಥಾನ ಪಡೆದ ಎತ್ತುಗಳಿಗೆ 35 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ 25 ಹಾಗೂ 4 ಮತ್ತು 5ನೇ ಸ್ಥಾನ ಪಡೆದ ಎತ್ತುಗಳಿಗೆ ತಲಾ 15 ಸಾವಿರ ಹಾಗೂ 10 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

Intro:ಗ್ರಾಮೀಣ ಕಲೆ ಹಾಗೂ ಸಾಂಸ್ಕೃತಿಕ ಕಲೆಯನ್ನು ಬಿಂಬಿಸುವ ಮುಂಗಾರು ಹಬ್ಬಕ್ಕೆ ಇಂದು ಚಾಲನೆ ನೀಡಲಾಯಿತು. ನಮ್ಮ ದೇಶ ಕಲೆ,ಸಂಸ್ಕೃತಿಯ ತವರೂರಾಗಿದ್ದು ಪ್ರತಿಯೊಂದು ಹಬ್ಬ ಕ್ಕೂ ತನ್ನದೇ ಆದ ಹಿನ್ನೆಲೆಯಿದ್ದು ಅದರ ಭಾಗವಾಗಿ ವಿಶಿಷ್ಟ ಆಚರಣೆ ಮಾಡಲಾಗುತ್ತದೆ. ಅದ್ರಲ್ಲಿ ಕಾರ ಹುಣ್ಣಿಮೆ ಒಂದಾಗಿದ್ದು ಈ ಹಬ್ಬದಲ್ಲಿ ರೈತರು ತಮ್ಮ ಎತ್ತು ಗಳಿಗೆ ಪೂಜೆ ಮಾಡಿ ಗ್ರಾಮೀಣ ಭಾಗದಲ್ಲಿ ಎತ್ತು ಓಡಿಸುವ ಸ್ಪರ್ಧೆ ಏರ್ಪಡಿಸಿ ಮನೊರಂಜನೆಯ ಜೊತೆಗೆ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಕಾರ ಹುಣ್ಣಿಮೆ ಜೂನ್ ತಿಂಗಳ ಮಳೆಗಾಲ ಸಂದರ್ಭದಲ್ಲಿ ಬರುವುದರಿಂದ ಮುಂಗಾರು ಪ್ರವೇಶ ಮಾಡುವ ಕಾರಣ ಈ ಸಂದರ್ಭದಲ್ಲಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ತಮ್ಮ ಎತ್ತುಗಳೊಂದಿಗೆ ಸಂಬ್ರಮಪಡುತ್ತಾರೆ ಈ ಭಾಗದ ರೈತರು. ಇದೇ ಹಿನ್ನೆಲೆಯಿಂದ ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಚರಣೆ ಮಾಡಲಾಗುತ್ತದೆ. ಆರಂಭದಲ್ಲಿ ರಾಯಚೂರಿಗೆ ವಲಸೆ ಬಂದ ಮುನ್ನೂರುಕಾಪು ಸಮಾಜ ಸಣ್ಣ ಪ್ರಮಾಣದಲ್ಲಿ ಎತ್ತು ಗಳಿಂದ ಕಲ್ಲು ಓಡಿಸುವ ಸ್ಪರ್ದೆ ಓಡಿಸಿ ಹಬ್ಬ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತಿತ್ತು. ನಂತರ ಕಾಲನುಕ್ರಮೇಣ ಜಿಲ್ಲಾ ಮಟ್ಟದಿಂದ ಸ್ಪರ್ಧೆ ಏರ್ಪಡಿಸಿ ಈಗ ರಾಜ್ಯ ಮಟ್ಟದಲ್ಲಿ ಈ ಮುಂಗಾರು ಹಬ್ಬ ಆಚರಣೆ ಮಾಡಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದ ರೈತಾಪಿ ವರ್ಗ ಹಾಗೂ ಜನರು ಅಗಮಿಸಿ ಇದ್ರಲ್ಲಿ ಪಾಲ್ಗೊಳ್ಳುತ್ತಾರೆ. ಕಳೆದ 19 ವರ್ಷಗಳಿಂದ ಮುನ್ನೂರು ಕಾಪು ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಈ ಹಬ್ಬಕ್ಕೆ ರಾಯಚೂರಿನ ಎಪಿಎಂಸಿ,ಹಟ್ಟಿ ಚಿನ್ನದ ಗಣಿ ಕಂಪನಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಅನುದಾನ ನೀಡಿ ಪೋಶಿಸುತ್ತಾ ಬಂದಿದೆ. ರಾಯಚೂರಿನ ಎಪಿಎಂಸಿ ಅವರಣದಲ್ಲಿ ಪ್ರತಿ ವರ್ಷ ದಂತೆ ಈ ವರ್ಷ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಅಭೂತ ಪೂರ್ವ ಚಾಲನೆ ದೊರೆಯಿತು. ಈ ಸ್ಪರ್ಧೆಯಲ್ಲಿ ವಿಜೇತ ಎತ್ತುಗಳ ಮಾಲೀಕ ಮುದಿ ನರಸಪ್ಪ ಮಾತನಾಡಿದರು. 1)ಬೈಟ್.

Body:ಪ್ರತಿ ವರ್ಷ ಕಾರ ಹುಣ್ಣಿಮೆಯ ಅಂಗವಾಗಿ ಮೂರು ದಿನಗಳ ಕಾಲ ರಾಯಚೂರಿನ ಎಪಿಎಂಸಿಯಲ್ಲಿ ನಡೆಯುವ ಮುಂಗಾರು ಸಾಂಸ್ಕ್ರತಿಕ ರಾಯಚೂರು ಹಬ್ಬಕ್ಕೆ ಇಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಚಾಲನೆ ನೀಡಿದರು. ಈ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಆಕರ್ಷಣೆ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಇದಕ್ಕೆ ಮೊದಲನೇ ದಿನ ಕರ್ನಾಟಕ ರಾಜ್ಯಗಳ ಎತ್ತುಗಳಿಂದ ಒಂದುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆದಿದೆ. ಎರಡನೇ ದಿನ ಅಂತರ್ ರಾಜ್ಯ ಎತ್ತುಗಳ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. ಇಂದು ಮೊದಲನೆ ದಿನದ ರಾಜ್ಯದ ಎತ್ತುಗಳಿಂದ ಒಂದುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ನಡೆದಿದ್ದು ಒಂಬತ್ತು ಜೋಡಿ ಎತ್ತುಗಳು ಭಾಗ ವಹಿಸಿದ್ದವು. ಎತ್ತುಗಳ ಭಾರಿ ಪ್ರದರ್ಶನ: ಇಂದು ನಡೆದ ಮೊದಲನೇ ದಿನದ ಸ್ಪರ್ಧೆಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ,ರಾಯಚೂರು,ಮಕ್ತಲ್ ಹಾಗೂ ವಿವಿಧ ಭಾಗಗಳಿಂದ ರೈತರು ತಮ್ಮ ಎತ್ತುಗಳಿಂದ ಸ್ಪರ್ಧೆಗಿಳಿಸಿದರು. ನಿಗದಿತ 20 ನಿಮಿಷದ ಅವಧಿಯಲ್ಲಿ ಎತ್ತುಗಳ ಕಲ್ಲು ಎಳೆಯಬೇಕಿದ್ದು ಎತ್ತುಗಳಿಗೆ ಬಾರಕೋಲಿನಿಂದ ಹೊಡೆಯುತ್ತಾ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ವಿಜೇತರಾಗಲು ಹಪಹಪಿಸಿದರು.ಇದರಿಂದ ಮೂಕ ಜಾನುವಾರುಗಳು ತಮ್ಮ ಮಾಲಿಕರ ಬಾರಿಕೋಲಿನ ಹೊಡೆತಕ್ಕೆ ತಮ್ಮ ಶಕ್ತ ಸಾಮರ್ಥ್ಯ ತೋರಿಸಲು ಮುಂದಾದರು. ಈ ಹಬ್ಬಕ್ಕೆ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದ ಬಂದ ಪ್ರೇಕ್ಷಕರು ಹಾಗೂ ರೈತರು ಸಿಳ್ಳೆ ಕೇಕೆ ಹಾಕಿ ಎತ್ತುಗಳಿಗೆ ಹುರುದುಂಬಿಸಿದರು. ಒಂಬತ್ತು ಜೋಡಿಗಳ ಎತ್ತರಗಳಲ್ಲಿ ಸುರಪುರ ತಾಲೂಕಿನ ಮಂಜಲಾಪುರದ ಅಯ್ಯಳಪ್ಪನ ರೈತನ ಎತ್ತುಗಳು ನಿಗದಿತ 20 ನಿಮಿಷದಲ್ಲಿ 2717 ಫೀಟ್ ಕ್ರಮಿಸಿ ಮೊದಲನೆ ಮೊದಲನೇ ಬಹುಮಾನವಾಗಿ 45ಸಾವಿರ ಪಡೆದವು. ಇದಲ್ಲದೇ ದ್ವಿತಿಯ ಬಹುಮಾನವಾಗಿ 35 ಸಾವಿರ, ತೃತಿಯ ಬಹುಮಾನವಾಗಿ 25,ನಾಲ್ಕನೇ ಬಹುಮಾನ 15, ಐದನೇಸಾಗಿ 10 ಸಾವಿರ ಬಹುಮಾನ ಪಡೆದವು. ಮೂರು ದಿನಗಳ ಕಾಲ ಸಂಜೆ ಕುಸ್ತಿ,ಮಹಿಳೆಯರಿಂದ ನೃತ್ಯ ರೂಪಕ‌ ಉಸುಕಿನ ಚೀಲ ಎತ್ತುವ ಸ್ಪರ್ಧೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಬ್ಬಕ್ಕೆ ಚಾಲನೆ ನೀಡಿದ ನಂತರ ಸಂಸದ ರಾಜಾ ಅಮರೇಶ ನಾಯಕ ಅವರು ಮಾತನಾಡಿ ಮುನ್ನೂರು ಕಾಪು ಸಮಾಜದ ನೇತೃತ್ವದಲ್ಲಿ ನಡೆಯುವ ಇದು ಮೈಸೂರು ದಸರದ ನಂತರ ಪ್ರಖ್ಯಾತಿ ಪಡೆದಿದ್ದು ಹೀಗೆ ಮುಂದುವರೆಯಲಿ ಎಂದರು.

Conclusion:
Last Updated : Jun 16, 2019, 9:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.