ರಾಯಚೂರು: ಮದುವೆ ನಿಶ್ಚಯವಾಗಿದ್ದ ಯುವತಿ ಅನ್ಯಕೋಮಿನ ಯುವಕನೊಂದಿಗೆ ಮದುವೆಯಾಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ಬಾಳಪ್ಪ ಹಾಗೂ ನಾಗಮ್ಮ ದಂಪತಿಗಳ ಪುತ್ರಿ ಭಾರತಿ ಅನ್ಯಕೋಮಿನ ಯುವಕನೊಂದಿಗೆ ಮದುವೆಯಾಗಿರುವ ಯುವತಿಯಾಗಿದ್ದು, ರೆಹಾನ್ ಎನ್ನುವ ಮುಸ್ಲಿಂ ಯುವಕನೊಂದಿಗೆ ವಿವಾಹವಾಗಿದ್ದಾಳೆ.
ಭಾರತಿಗೆ ಬರುವ ತಿಂಗಳು ಬಳ್ಳಾರಿ ಜಿಲ್ಲೆಯ ಮೂಲದ ಯುವಕನೊಂದಿಗೆ ಮದುವೆ ಫಿಕ್ಸ್ ಮಾಡಲಾಗಿತ್ತು. ಆದರೆ, ಭಾರತಿ ಮಾತ್ರ ಮನೆಯಿಂದ ಪರಾರಿಯಾಗಿ ರೆಹಾನ್ ಎನ್ನುವ ಯುವಕನೊಂದಿಗೆ ಹೈದರಾಬಾದ್ನಲ್ಲಿ ಮದುವೆಯಾಗಿದ್ದಾಳೆ. ಇವರಿಬ್ಬರು ಪ್ರೀತಿಸಿ, ಪರಸ್ಪರ ಇಬ್ಬರು ಒಪ್ಪಿ ರಿಜಿಸ್ಟರ್ ಮದುವೆಯಾಗಿರುವುದಾಗಿ ಯುವತಿ ಪೊಲೀಸರ ಮುಂದೆ ಹೇಳಿದ್ದಾಳೆ. ಆದರೆ, ಯುವತಿಯ ಪಾಲಕರು ನಮ್ಮ ಮಗಳಿಗೆ ಮೈಂಡ್ ವಾಷ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಮುಂದಿನ ತಿಂಗಳು ವಿವಾಹ ನಿಶ್ಚಯವಾಗಿದ್ದ ಭಾರತಿ ಕಳೆದ ತಿಂಗಳ 7ನೇ ತಾರೀಖಿನಂದು ಮನೆ ಬಿಟ್ಟು ರಾತ್ರೋರಾತ್ರಿ ಪರಾರಿಯಾಗಿದ್ದಳು. ಈ ಘಟನೆಗೆ ಸಂಬಂಧಿಸಿದ್ದಂತೆ ಯುವತಿ ಪೋಷಕರು ನೇತಾಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯಿಂದ ಹೋಗಿ ರಾಯಚೂರಿಗೆ ಬಂದಿರುವ ಯುವತಿ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಪೊಲೀಸರು ವಿಚಾರಣೆ ಮಾಡಿದಾಗ, ಇಬ್ಬರು ಪರಸ್ಪರ ಪ್ರೀತಿಸಿ, ಮದುವೆಯಾಗಿರುವುದಾಗಿ ಹೇಳಿದ್ದಾಳೆ ಎಂಬುದು ತಿಳಿದುಬಂದಿದೆ.
ಇನ್ನು ರೆಹಾನ್ ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದಾಗ್ಯೂ ರೆಹಾನ್ ಭಾರತಿಗೆ ಪರಿಚಯವಾಗಿ ಪರಸ್ಪರ ಸಲುಗೆ ಬೆಳೆದು ಪ್ರೀತಿಯಾಗಿದೆ. ನಂತರ ಅವರಿಬ್ಬರು ಮದುವೆಯಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಓದಿ: ಹಿಂದೂ ಹುಡುಗನನ್ನು ವಿವಾಹವಾದ ಮುಸ್ಲಿಂ ಯುವತಿ: ಕುಟುಂಬಸ್ಥರಿಂದ ಕೊಲೆ ಬೆದರಿಕೆ