ETV Bharat / state

ಹೆದ್ದಾರಿಗಳಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಸ್ಕೈವಾಕ್​ ಕೊರತೆ : ಅಪಘಾತ ಸಂಖ್ಯೆ ಹೆಚ್ಚಳ - Increase in Accidents Number on National Highways

ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಅನೇಕ ಗ್ರಾಮಗಳಲ್ಲಿ ಪಾದಚಾರಿ ಮೇಲ್ಸೇತುವೆಗಳ ಸೌಲಭ್ಯಗಳಿಲ್ಲ. ಇದರಿಂದಾಗಿ ಗ್ರಾಮಸ್ಥರು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ..

national-highways
ರಾಷ್ಟ್ರೀಯ ಹೆದ್ದಾರಿ
author img

By

Published : Jan 9, 2021, 7:55 PM IST

ರಾಯಚೂರು : ಹೆದ್ದಾರಿಗಳು, ರಿಂಗ್​ ರಸ್ತೆ, ದಟ್ಟಣೆ ಉಂಟಾಗುವ ರಸ್ತೆಗಳಲ್ಲಿ ಎಷ್ಟೇ ಜಾಗೃತವಾಗಿದ್ದರೂ ಅಪಘಾತ ಖಚಿತ. ಚಳಿಗಾಲದಲ್ಲಿ ಮುಂಜಾನೆ ಸಮಯದಲ್ಲಿ ಆವರಿಸುವ ದಟ್ಟ ಮಂಜಿನಿಂದ ವಾಹನಗಳು ಕಾಣಿಸುವುದಿಲ್ಲ.

ವಾಹನಗಳು ಬರುತ್ತಿಲ್ಲವೆಂದುಕೊಂಡು ಜನರು ರಸ್ತೆ ದಾಟುವಾಗ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಿದ್ರೆ ಉಂಟಾಗುವ ಅಪಘಾತಗಳನ್ನು ತಡೆಯಬಹುದು.

ಇದನ್ನೂ ಓದಿ...ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ರಾಷ್ಟ್ರೀಯ ಹೆದ್ದಾರಿ-167 ಜಿಲ್ಲೆಯ ಮಧ್ಯ ಭಾಗದಲ್ಲಿರುವ ಲಿಂಗಸಗೂರು ಪಟ್ಟಣ ಸೇರಿದಂತೆ ಹಲವು ಜಿಲ್ಲೆಗಳ ಸಂಪರ್ಕ ಹೊಂದಿದೆ. ಅಲ್ಲದೆ ಲಿಂಗಸಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ-105 ಹಾದು ಹೋಗಿದೆ.

ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಅನೇಕ ಗ್ರಾಮಗಳಲ್ಲಿ ಪಾದಚಾರಿ ಮೇಲ್ಸೇತುವೆಗಳ ಸೌಲಭ್ಯಗಳಿಲ್ಲ. ಇದರಿಂದಾಗಿ ಗ್ರಾಮಸ್ಥರು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿ

ಎಲ್ಲೋ ಕೆಲವೆಡೆ ಕೆಳಸೇತುವೆ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಿರುವ ಪರಿಣಾಮ ಉಳಿದೆಡೆ ಸರುಕು ಸಾಗಾಟ ಮಾಡಲು ಜನರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ರಸ್ತೆ ಸುರಕ್ಷತೆ ನಿಮಯ ಅನುಸರಿಸಿಲ್ಲ.

ಶಾಲೆಗಳ ಸಮೀಪ ಮತ್ತು ಹಳ್ಳಿಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸಬೇಕು. ಆದರೆ, ನಿಗದಿತ ವೇಗಕ್ಕಿಂತಲೂ ಹೆಚ್ಚು ವೇಗದಲ್ಲಿ ಅಡ್ಡಾದಿಡ್ಡಿಯಾಗಿ ಹೋಗುತ್ತವೆ. ಇದರಿಂದ ರಸ್ತೆಗಿಳಿಯಲು ಭಯವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.