ರಾಯಚೂರು: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಅವರು ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದು, ನಗರದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ''ನಾನು ಯಾವುದೇ ಆತುರ ನಿರ್ಧಾರ ತೆಗೆದುಕೊಳ್ಳುವುದಿಲ್ಲ'' ಎಂದರು.
ಇದನ್ನೂ ಓದಿ: ದಾವಣಗೆರೆ ಉತ್ತರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹೇಳಿದ್ದೇನು?
''ಅಧಿಕೃತವಾಗಿ ನಾನು ಬಿಜೆಪಿ ಮುಖಂಡರ ಜೊತೆಗೆ ಸಂಪರ್ಕ ಮಾಡಿಲ್ಲ. ಮಾನ್ವಿ ಟಿಕೆಟ್ ಘೋಷಣೆ ಮುನ್ನವೇ ಈ ಸುದ್ದಿ ಹರಿದಾಡುತ್ತಿದೆ. ನಾನು ಮಾತ್ರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಟಿಕೆಟ್ ನೀಡುವ ವಿಚಾರಕ್ಕೆ ಕಾಂಗ್ರೆಸ್ ನಮ್ಮನ್ನು ಪರಿಗಣಿಸಬೇಕಾಗಿತ್ತು. ಪಕ್ಷದಲ್ಲಿದ್ದ ಮೇಲೆ ಪಕ್ಷದ ತೀರ್ಮಾನಕ್ಕೆ ಒಪ್ಪಬೇಕಾಗುತ್ತೆ. ನಾನು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಜೊತೆಗೆ ಇದ್ದೆ. ಬೆಂಗಳೂರಿನಲ್ಲಿ ಒಂಟಿಯಾಗಿ ಇರಲಿಲ್ಲ. ಎಲ್ಲರ ಜೊತೆಗಿದ್ದೆ. ಎಲ್ಲರ ಸಂಪರ್ಕದಲ್ಲಿ ಇದ್ದೇನೆ'' ಎಂದು ತಿಳಿಸಿದರು.
ಇದನ್ನೂ ಓದಿ: ನಟ ಸುದೀಪ್ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಡಿ: ನಾಯಕ ಸಮಾಜದ ಮುಖಂಡರ ಆಕ್ಷೇಪ
ಕಾಂಗ್ರೆಸ್ ಟಿಕೆಟ್ ಯಾವ ಕಾರಣಕ್ಕೆ ಮಿಸ್ ಆಗಿದೆಯೋ ಗೊತ್ತಿಲ್ಲ: ''ಯಾವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದೆಯೋ ಎಂಬುದರ ಬಗ್ಗೆಯೇ ನನಗೆ ಮಾಹಿತಿಯಿಲ್ಲ. ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಟಿಕೆಟ್ ನೀಡಬೇಕಾಗಿತ್ತು. ಆದ್ರೆ ಪರಿಗಣಿಸಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಪಕ್ಷ ಒಳಗಡೆಗೆ ಗುಂಪುಗಾರಿಕೆ ಇದ್ದೇ ಇರುತ್ತದೆ. ಅದೇ ರೀತಿ ನಮ್ಮ ಜಿಲ್ಲೆಯೂ ಗುಂಪುಗಾರಿಕೆ ಇದೆ. ಹತ್ತಾರು ಜನ ಆಕಾಂಕ್ಷಿಗಳು ಇದ್ದಾರೆ. ಅದಕ್ಕೆ ಕಾರಣಕ್ಕೆ ನಾವು ಬಲಿಯಾಗಿದ್ದೇವೆ'' ಎಂದು ಅವರು ಹೇಳಿದರು.
ಇದನ್ನೂ ಓದಿ: ಮೈಸೂರು: ಮೊಮ್ಮಗನ ಜೊತೆ ಬಂದ ಸಿದ್ದರಾಮಯ್ಯ
ಬಿಜೆಪಿಗೆ ಹೋಗುವ ನಿರ್ಧಾರ ಮಾಡಿಲ್ಲ: ಬಿಜೆಪಿಗೆ ಹೋಗುವ ನಿರ್ಧಾರ ಇನ್ನೂ ನನ್ನ ಮುಂದೆ ಇಲ್ಲ. ಆತುರದ ನಿರ್ಧಾರ ತೆಗೆದುಕೊಳ್ಳುವ ಮನುಷ್ಯನು ನಾನು ಅಲ್ಲ. ನಾನು ಸದ್ಯ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ, ಇರುತ್ತೇನೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ಪಾರುಪತ್ಯ: ಗತವೈಭವ ಮೆರೆಯುತ್ತಾ ಕಾಂಗ್ರೆಸ್?
ಮಾನವಿ ಮೀಸಲು ಕ್ಷೇತ್ರವಾಗಿದ್ದು, ಕಾಂಗ್ರೆಸ್ನಿಂದ ಸ್ಪರ್ಧಿಸಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದರು ಬಿ.ವಿ. ನಾಯಕ. ಆ ನಿಟ್ಟಿನಲ್ಲಿ, ಮಾನವಿ ಕ್ಷೇತ್ರದ ಟಿಕೆಟ್‌ಗಾಗಿ ಹೈಕಮಾಂಡ್ ಮೇಲೆ, ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿದ್ದರು. ಜೊತೆ ಅವರು ಭಾರೀ ಪ್ರಯತ್ನಪಟ್ಟಿದ್ದರು. ಆದರೆ, ಅಂತಿಮವಾಗಿ ಟಿಕೆಟ್ ಕೈ ತಪ್ಪಿದೆ. ಇದರಿಂದಾಗಿ ಟಿಕೆಟ್ ವಂಚಿತ ನಾಯಕರ ಪಟ್ಟಿಯಲ್ಲಿದ್ದು, ಬಿಜೆಪಿ ಸೇರ್ಪಡೆಯಾಗಿ, ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿಯು ಮಾನವಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಇದನ್ನೂ ಓದಿ: ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮವಿಲ್ಲ: ಆರಗ ಜ್ಞಾನೇಂದ್ರ
ಕರ್ನಾಟಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಹಿಮಾಚಲದ ಕಥೆಯೇ ಪುನರಾವರ್ತನೆ