ETV Bharat / state

ಮನೆ ಬಳಕೆ ಸಿಲಿಂಡರ್​ ವಾಣಿಜ್ಯ ಉದ್ದೇಶಕ್ಕೆ: ಆಹಾರ ಇಲಾಖೆಯಿಂದ 35 ಸಿಲಿಂಡರ್​​​​ ಜಪ್ತಿ​

author img

By

Published : Jul 3, 2020, 7:58 PM IST

ಬೀದಿ ಬದಿ ವ್ಯಾಪಾರಿಗಳು, ಡಾಬಾ, ಹೋಟೆಲ್​​ಗಳ ಮೇಲೆ ದಾಳಿ ನಡೆಸಿ 35ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್​​​ಗಳನ್ನು ಆಹಾರ ಇಲಾಖೆ ಜಪ್ತಿ ಮಾಡಿದೆ. ಗೃಹ ಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುವುದು ಅಪರಾಧವಾಗಿರುವ ಹಿನ್ನೆಲೆ ಈ ದಾಳಿ ನಡೆಸಲಾಗಿದೆ.

Home use cylinder used for commercial purpose:  seized by Food Department
ಮನೆ ಬಳಕೆ ಸಿಲಿಂಡರ್​ ವಾಣಿಜ್ಯ ಉದ್ದೇಶಕ್ಕೆ ಬಳಕೆ: ಆಹಾರ ಇಲಾಖೆಯಿಂದ 35 ಸಿಲಿಂಡರ್​​​​ ಜಪ್ತಿ​

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ಲ ಮತ್ತು ಲಿಂಗಸುಗೂರಲ್ಲಿ ಮನೆ ಬಳಕೆ ಸಿಲಿಂಡರ್​​​ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಆರೋಪ ಹಿನ್ನೆಲೆ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಕಾಯ್ದೆ ಅಡಿ ಮನೆ ಬಳಕೆ ಗ್ಯಾಸ್ ಸಿಲಿಂಡರ್​​ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಅಪರಾಧ. ಅಂತೆಯೇ ಬೀದಿ ಬದಿ ವ್ಯಾಪಾರಿಗಳು, ಡಾಬಾ, ಹೋಟೆಲ್​​ಗಳ ಮೇಲೆ ದಾಳಿ ನಡೆಸಿ 35ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಜಪ್ತಿ ಮಾಡಿದ್ದಾರೆ.

ಆಹಾರ ಇಲಾಖೆ ಶಿರಸ್ತೆದಾರ ಬಸವಂತಸಿಂಗ್, ಆಹಾರ ನಿರೀಕ್ಷಕರಾದ ತಿಪ್ಪಣ್ಣ ತಳವಾರ, ಹನುಮೇಶ ನೇತೃತ್ವ ತಂಡ ಲಿಂಗಸುಗೂರಲ್ಲಿ 12 ಹಾಗೂ ಮುದಗಲ್ಲನಲ್ಲಿ 13 ಗ್ಯಾಸ್ ಸಿಲೆಂಡರ್ ಜಪ್ತಿ ಮಾಡಿ ಗ್ಯಾಸ್ ಕಂಪನಿಗೆ ಒಪ್ಪಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಗೃಹ ಬಳಕೆ ಗ್ಯಾಸ್ ಸಿಲಿಂಡರ್​ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಆರೋಪಗಳು ಬಹಳಷ್ಟಿದ್ದು ಇದೇ ರೀತಿ ದಾಳಿ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.