ರಾಯಚೂರು: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆ ಹಲವು ಕಡೆ ಜನ-ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ತಾಲೂಕಿನ ಯದ್ಲಾಪುರ ಗ್ರಾಮದ ಬಳಿಯ ಟಿನ್ ಶೆಡ್ ಮನೆಗಳ ಟಿನ್ಗಳು ಗಾಳಿಯ ರಭಸಕ್ಕೆ ವಿದ್ಯುತ್ ಕಂಬದ ಸರ್ವಿಸ್ ವೈರ್ ಮೇಲೇರಿವೆ. 9 ಟಿನ್ ಶೆಡ್ಗಳ ಮನೆಗಳಿಗೆ ಹಾನಿ ಸಂಭವಿಸಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿವೆ. ಇನ್ನು ಮನೆಯಲ್ಲಿದ್ದ ಓರ್ವ ವ್ಯಕ್ತಿಯು ಗಾಯಗೊಂಡಿದ್ದಾನೆ.
ಇನ್ನು ನಗರದ ಇಂಜಿನಿಯರ್ಸ್ ಬಡವಣೆಯಲ್ಲಿ ವಿದ್ಯುತ್ ವೈರ್ಗಳ ಸ್ಪರ್ಶದಿಂದ ವಿದ್ಯುತ್ ಸ್ಪಾರ್ಕ್ ಆಗಿ ಬೆಂಕಿ ಕಿಡಿಗಳು ಬೀಳುತ್ತಿರುವುದು ಕಂಡು ಬಂದಿದೆ. ಅದೃಷ್ಟವಾಶಾತ್ ಯಾರಿಗೆ ಜೀವ ಹಾನಿ ಸಂಭವಿಸಿಲ್ಲ. ವಿದ್ಯುತ್ ಕಂಬದ ಮೇಲೆ ಟಿನ್ ಶೆಡ್ ಬಿದ್ದಿರುವ ಪರಿಣಾಮ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.