ETV Bharat / state

ರಾಯಚೂರಿನಲ್ಲಿ ಧಾರಾಕಾರ ಮಳೆ.. ಸಂಪೂರ್ಣ ಜಲಾವೃತಗೊಂಡ ಗ್ರಾಮ.. - ಹೆಗ್ಗಸನಳ್ಳಿ ಗ್ರಾಮ

ರಾಯಚೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹೆಗ್ಗಸನಳ್ಳಿ ಗ್ರಾಮವೊಂದು ಜಲಾವೃತಗೊಂಡಿದೆ.

ಸಂಪೂರ್ಣ ಜಾಲವೃತಗೊಂಡ ಗ್ರಾಮ
author img

By

Published : Sep 25, 2019, 5:18 PM IST

ರಾಯಚೂರು: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹೆಗ್ಗಸನಳ್ಳಿ ಗ್ರಾಮವೊಂದು ಜಲಾವೃತಗೊಂಡಿದೆ.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹೆಗ್ಗಸನಳ್ಳಿ ಗ್ರಾಮ ಸಂಪೂರ್ಣ ಜಲಾವೃತ..

ತಾಲೂಕಿನ ಹೆಗ್ಗಸನಳ್ಳಿ ಗ್ರಾಮ ಬಹುತೇಕ ಮಳೆ ನೀರಿನಿಂದ ಜಲಾವೃತ್ತಗೊಂಡು ಮನೆಗಳಿಗೆ, ಶಾಲೆಗೆ, ದೇವಾಲಯಗಳಲ್ಲಿ ನೀರು ನುಗ್ಗಿ ಜನ-ಜೀವನ ಸಂಪೂರ್ಣ ಹದಗೆಟ್ಟಿದೆ. ಗ್ರಾಮದಲ್ಲಿನ ಹಲವು ಮನೆಯೊಳಗೆ ನೀರು ನುಗ್ಗಿ ಆಹಾರ, ಧವಸ-ಧಾನ್ಯಗಳು, ಬಟ್ಟೆಗಳು ಹಾಗೂ ಮನೆಯ ಬಳಕೆ ವಸ್ತುಗಳು ನೀರು ಪಾಲಾಗಿ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಮನೆಯಿಂದ ನೀರು ಹೊರಹಾಕಲು ಹರಸಹಾಸ ಪಡುವಂತಾಗಿದೆ. ಗ್ರಾಮದಲ್ಲಿನ ಶಾಲೆ ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ಶಾಲಾ ಮಕ್ಕಳು ಸಹ ಶಾಲೆಗೆ ತೆರಳಲು ತೊಂದರೆ ಉಂಟಾಗಿದೆ.

ಇನ್ನು, ಜಲಾವೃತ್ತಗೊಂಡು ಸಂಕಷ್ಟ ಎದುರಿಸುತ್ತಿರುವ ಗ್ರಾಮಕ್ಕೆ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಗ್ರಾಮಕ್ಕೆ ತಹಶೀಲ್ದಾರ್ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಭೇಟಿ ನೀಡಿದರು.

Intro:ಸ್ಲಗ್: ಗ್ರಾಮ ಜಲಾವೃತ್ತ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 25-೦9-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯ ಸುರಿದ ಧಾರಾಕಾರ ಮಳೆಗೆ ಗ್ರಾಮವೊಂದು ಜಾಲವೃತ್ತಗೊಂಡಿದೆ. Body:ತಾಲೂಕಿನ ಹೆಗ್ಗಸನಳ್ಳಿ ಗ್ರಾಮ ಬಹುತೇಕ ಮಳೆ ನೀರಿನಿಂದ ಜಲಾವೃತ್ತಗೊಂಡು ಮನೆಗಳಿಗೆ, ಶಾಲೆಗೆ, ದೇವಾಲಯಗಳಲ್ಲಿ ನೀರು ನುಗ್ಗಿ ಜನ-ಜೀವನ ಸಂಪೂರ್ಣ ಹದ್ದಗೆಟ್ಟಿದೆ. ಗ್ರಾಮದಲ್ಲಿನ ಹಲವು ಮನೆಯೊಳಗೆ ನೀರು ನುಗ್ಗಿ ಆಹಾರ, ಧವಸ-ಧಾನ್ಯಗಳು, ಬಟ್ಟೆಗಳು ಹಾಗೂ ಮನೆಯ ಬಳಕೆ ನೀರು ಪಾಲಾಗಿ ಗ್ರಾಮಸ್ಥರು ಸಂಕಷ್ಟ ಎದುರಿಸುವಂತೆ ಮಾಡಿ, ಮನೆಯಿಂದ ನೀರು ಹೊರಹಾಕಲು ಹರಸಹಾಸ ಪಡುವಂತೆ ಆಯಿತು. ಗ್ರಾಮದಲ್ಲಿನ ಶಾಲೆ ಆವರಣದಲ್ಲಿ ಬಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ಶಾಲಾ ಮಕ್ಕಳು ಶಾಲೆಗೆ ತೆರಳು ತೊಂದರೆ ಉಂಟಾಗಿ, ಶಾಲೆಯ ಮಕ್ಕಳು ಮಳೆಯ ನೀರಿನ್ನ ಹೊರ ಹಾಕಿದರು. ಗ್ರಾಮದ ಪಕ್ಕದಲ್ಲಿ ಹಳ್ಳ ಹರಿಯುತ್ತಿರುವುದರಿಂದ ಹಳ್ಳದ ನೀರು ಸಹ ಗ್ರಾಮಕ್ಕೆ ತೊಂದರೆ ಉಂಟು ಮಾಡಿತ್ತು. Conclusion:ಇನ್ನೂ ಜಲಾವೃತ್ತಗೊಂಡ ಸಂಕಷ್ಟ ಎದುರಿಸುತ್ತಿರುವ ಗ್ರಾಮಕ್ಕೆ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಭೇಟಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ರು. ಗ್ರಾಮಕ್ಕೆ ತಹಸೀಲ್ದಾರ್ ಅಧಿಕಾರಿಗಳು ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ ಐ ಸಾಬಯ್ಯ ಭೇಟಿ ನೀಡಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.