ETV Bharat / state

ಮಂತ್ರಾಲಯಕ್ಕೆ ಹೆಚ್​ಡಿಕೆ ದಂಪತಿ ಭೇಟಿ: ಬೃಂದಾವನದಲ್ಲಿ ವಿಶೇಷ ಪೂಜೆ - ಪಂಚರತ್ನ ಯಾತ್ರೆ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪತ್ನಿಸಮೇತ ಭೇಟಿ ನೀಡಿ ರಾಯರ ದರ್ಶನ ಪಡೆದರು.

HD Kumaraswamy with wife Visits Mantralaya
ಮಂತ್ರಾಲಯಕ್ಕೆ ಭೇಟಿ ನೀಡಿದ ಹೆಚ್​ಡಿಕೆ ದಂಪತಿ
author img

By

Published : Jan 29, 2023, 1:34 PM IST

ಮಂತ್ರಾಲಯಕ್ಕೆ ಭೇಟಿ ನೀಡಿದ ಹೆಚ್​ಡಿಕೆ ದಂಪತಿ

ರಾಯಚೂರು: ಮಾಜಿ ಮುಖ್ಯಮಂತ್ರಿ ಹೆಚ್.​ಡಿ.ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಮಂತ್ರಾಲಯಕ್ಕೆ ಭೇೆಟಿ ನೀಡಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು. ಇದಕ್ಕೂ ಮುನ್ನ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಯ ಮೂಲಸ್ಥಳ ಬೃಂದಾವನದಲ್ಲಿ ಪೂಜೆ ಸಲ್ಲಿಸಿದರು.

6ನೇ ದಿನದ ಪಂಚರತ್ನ ಯಾತ್ರೆ: ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಇಂದು 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಹೆಚ್​ಡಿಕೆ ದಂಪತಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಶ್ರೀಗಳು ಮಠದ ವತಿಯಿಂದ ದಂಪತಿಯನ್ನು ಸನ್ಮಾನಿಸಿದರು. ಮಾಜಿ ಸಿಎಂ ಬರುತ್ತಿರುವ ಹಿನ್ನೆಲೆಯಲ್ಲಿ ಮಠದ ಅಧಿಕಾರಿಗಳು ಸಂಪ್ರದಾಯದಂತೆ ಬರಮಾಡಿಕೊಂಡರು. ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಿಕೊಟ್ಟರು. ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಜತೆಗಿದ್ದರು.

"ಹಲವು ವರ್ಷಗಳಾದರೂ ಮಂತ್ರಾಲಯಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಕೋವಿಡ್, ಮಳೆಯ ಅನಾಹುತಗಳಿಂದ ಈ ಭಾಗದಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿರಲ್ಲ. ಕಳೆದ ಐದು ದಿನಗಳಿಂದ ರಾಯಚೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಈ ಯಾತ್ರೆ ಆಗಮಿಸಿದಾಗ ಆಶೀರ್ವಾದ ಮಾಡಲು ಗುರುರಾಘವೇಂದ್ರ ಸ್ವಾಮಿಗಳು ಪ್ರೇರಿಪಿಸಿಕೊಂಡು ಕರೆಸಿಕೊಂಡಿದ್ದಾರೆ" ಎಂದು ಹೆಚ್‌ಡಿಕೆ ಹೇಳಿದರು.

"ನಾಡಿನ ಜನತೆಯ ಕಷ್ಟಗಳನ್ನು ಬಗೆಹರಿಸಿ, ಪ್ರತಿ ಕುಟುಂಬಗಳ ನೆಮ್ಮದಿಯ ಬದುಕು ಕಾಣಬೇಕು ಎನ್ನುವುದು ಅಭಿಲಾಶೆ ಇಟ್ಟುಕೊಂಡು ಹೊರಟಿದ್ದೇವೆ. ಆ ಗುರಿಯನ್ನು ಇರಿಸಿಕೊಂಡು ಹೋಗುತ್ತಿರುವುದಕ್ಕೆ ಅನುಗ್ರಹ ನೀಡಬೇಕೆಂದು ದಂಪತಿ ಸಮೇತ ರಾಯರನ್ನು ಬೇಡಿಕೆಕೊಂಡಿದ್ದೇವೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ನಿಮ್ಮ ಪಾರ್ಟಿ ಅವರನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ: ಸಿದ್ದರಾಮಯ್ಯಗೆ ಹೆಚ್​ಡಿಕೆ ಟಾಂಗ್

"ಸ್ವತಂತ್ರ ಸರ್ಕಾರವನ್ನು ಕೊಡಿ. ಇಡೀ ರಾಜ್ಯದಲ್ಲಿ ಕುಟುಂಬಗಳಿಗೆ 15 ಸಾವಿರ ರೂ ಆದಾಯ ತರುವುದಕ್ಕೆ ಹಾಗೂ ನೆಮ್ಮದಿಯ ಬದುಕು ಕಲ್ಪಿಸಿಕೊಡಲು ಹೊರಟಿದ್ದೇನೆ. ಇದಕ್ಕೆ ಆಶೀರ್ವಾದ ನೀಡಬೇಕು ಎಂದು ಕೇಳಿರುವೆ. ಅನಿತಾ ಕುಮಾರಸ್ವಾಮಿ ಸಹ ರಾಘವೇಂದ್ರ ಸ್ವಾಮಿಗಳು ಭಕ್ತರು" ಎಂದರು.

ರಾಯರಿಂದ ಒಳ್ಳೆಯದಾಗಿದೆ: ಶ್ರೀರಾಘವೇಂದ್ರ ಸ್ವಾಮಿಗಳಿಗೆ ನಮ್ಮನ್ನು ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂದು ಬೇಡಿಕೊಂಡಿದ್ದೇನೆ. ನಾನು ರಾಯರ ಭಕ್ತೆ. ಮಂತ್ರಾಲಯಕ್ಕೆ ಬರಲು ಸಾಧ್ಯವಾಗದಿದ್ದರೂ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ರಾಯರ ಮಠಕ್ಕೆ ಹೋಗುತ್ತೇನೆ. ನನಗೆ ಅನಾದರೂ ಒಳ್ಳೆಯದಾಗಿದೆ ಎಂದರೆ ಅದು ರಾಯರಿಂದಲೇ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ: ಹಳೆ ಮೈಸೂರು ಭಾಗದಲ್ಲಿ ಹೋದ ಕಡೆಯೆಲ್ಲ ಕಾಂಗ್ರೆಸ್​ನವರು ತಮ್ಮ ಪ್ರಜಾಧ್ವನಿ ಯಾತ್ರೆಯಲ್ಲಿ ಹೆಚ್ಚು ಮಾತನಾಡಿದ್ದೇ ಜೆಡಿಎಸ್​ ಬಗ್ಗೆ. ಹಾಗಾಗಿ ಕಾಂಗ್ರೆಸ್​ನಿಂದ ನಡೆಯುತ್ತಿರುವುದು ಪ್ರಜಾಧ್ವನಿ ಯಾತ್ರೆ ಅಲ್ಲ, ಅದು ಜನತಾಧ್ವನಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿನ್ನೆ(ಶನಿವಾರ) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ನವರದ್ದು ಪ್ರಜಾಧ್ವನಿಯಲ್ಲ ಅದು ’ಕುಮಾರ’ಧ್ವನಿ ಆಗಿದೆ: ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.