ETV Bharat / state

ಲಾಕ್​ಡೌನ್​ನಲ್ಲಿ ಅದ್ಧೂರಿ ವಿವಾಹಕ್ಕೆ ಬ್ರೇಕ್.. ಸಾವಿರಕ್ಕೂ ಹೆಚ್ಚು ಸರಳ ಮದುವೆಗೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್​

ಜಿಲ್ಲೆಯಲ್ಲಿ ಅದ್ಧೂರಿ ವಿವಾಹ ನಡೆಯಬಾರದು ಎಂಬ ಕಾರಣಕ್ಕೆ ಮೇ.23ರಿಂದ ವಿವಾಹ ಮಹೋತ್ಸವಕ್ಕೆ ಬ್ರೇಕ್​ ಹಾಕಲಾಗಿತ್ತು. ಇಷ್ಟಾದರೂ ಜಿಲ್ಲೆಯಲ್ಲಿ ಒಟ್ಟು 1,804 ವಿವಾಹಕ್ಕಾಗಿ ಅರ್ಜಿ ಸಲ್ಲಿಕೆಯಾಗಿದೆ.

Grand marriages are declined in wake of covid at Raichur
ಲಾಕ್​ಡೌನ್​ನಲ್ಲಿ ಅದ್ಧೂರಿ ವಿವಾಹಕ್ಕೆ ಬ್ರೇಕ್
author img

By

Published : Jun 10, 2021, 2:48 PM IST

ರಾಯಚೂರು: ಕೊರೊನಾ ಹಾಗೂ ಲಾಕ್​​ಡೌನ್​ ಎಫೆಕ್ಟ್​ನಿಂದಾಗಿ ಶುಭ ಸಮಾರಂಭಗಳಿಗೆ ಅಡ್ಡಿಯಾಗಿತ್ತು. ಲಾಕ್​​ಡೌನ್​ ನಿಯಾಮವಳಿಯಂತೆ ಕೆಲವೇ ಮಂದಿಗಷ್ಟೇ ವಿವಾಹ ಸಮಾರಂಭಗಳಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಈ ಎಲ್ಲ ಕಾರಣದಿಂದಾಗಿ ಮನೆ ಮಂದಿ ಸರಳ ವಿವಾಹದ ಮೊರೆ ಹೋಗಿದ್ದರು.

ಇಷ್ಟಾದರೂ ರಾಯಚೂರು ಜಿಲ್ಲೆಯಲ್ಲಿ ಲಾಕ್​ಡೌನ್ ವೇಳೆ ಸಾವಿರಾರು ವಿವಾಹಗಳು ಜರುಗಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ಕಲ್ಯಾಣ ಮಹೋತ್ಸವಕ್ಕೆ ಅನುಮತಿ ನೀಡುವಂತೆ ಒಟ್ಟು 1,804 ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯ ಒಟ್ಟು 7 ತಾಲೂಕುಗಳ ಪೈಕಿ ರಾಯಚೂರು ನಗರ ಹಾಗೂ ತಾಲೂಕಿನಲ್ಲಿ 878 ವಿವಾಹಗಳು ನಡೆದಿವೆ.

ಇನ್ನು ದೇವದುರ್ಗ ತಾಲೂಕಿನಲ್ಲಿ 213, ಸಿಂಧನೂರು-411, ಮಸ್ಕಿ-98, ಮಾನವಿ-163, ಸಿರವಾರ-41 ವಿವಾಹ ನಡೆಸುವುದಕ್ಕೆ ಆಯಾ ತಾಲೂಕು ಆಡಳಿತ ಅನುಮತಿ ನೀಡಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಶುಭ ಸಮಾರಂಭ ನಡೆಸದಂತೆ ಮೇ.23ರಿಂದ ನಿಷೇಧ ಹೇರಿ ಆದೇಶ ಮಾಡಿತ್ತು.

ಆದರೆ ಈ ನಿಷೇಧದ ನಡುವೆಯೂ ಕೆಲವು ಕಡೆ ಸರಳ ವಿವಾಹ ಸಮಾರಂಭ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಲಿಂಗಸೂಗೂರು ತಾಲೂಕಿನ ಹೊನ್ನಾಳಿ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆಸಿದ್ದ ಕಾರಣ ಕುಟುಂಬಸ್ಥರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.

ಓದಿ: ಬೆಂಗಳೂರು ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ - ಚೇತರಿಕೆ ಪ್ರಮಾಣ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.