ರಾಯಚೂರು: ಧಾರವಾಡ ಮೂಲದ ವಿಜಯಕುಮಾರಿ ಎಸ್. ಎಲಕಪಾಟಿ ಎಂಬಾಕೆ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಗ್ರಾಮೀಣ ಹಾಗೂ ಕೃಷಿ ಅಭಿವೃದ್ದಿ ಸಂಘದ ಹೆಸರಿನಲ್ಲಿ ಎನ್ ಜಿಒ ಸ್ಥಾಪಿಸಿ ಹಲವು ಜನರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಪರಾರಿಯಾಗಿದ್ದಾಳೆ.
ವಿಜಯಕುಮಾರಿ ಲಿಂಗಸುಗೂರು ಪಟ್ಟಣದಲ್ಲಿ ಗ್ರಾಮೀಣ ಹಾಗೂ ಕೃಷಿ ಅಭಿವೃದ್ದಿ ಸಂಘದ ಎನ್ ಜಿಒ ಸ್ಥಾಪನೆ ಮಾಡಿಕೊಂಡು, ಗ್ರಾಮೀಣ ಭಾಗದ ಯುವಕರನ್ನ ಟಾರ್ಗೇಟ್ ಮಾಡಿಕೊಂಡು ಹಾಸ್ಟೇಲ್ ವಾರ್ಡನ್, ಇಂಜಿನಿಯರಿಂಗ್, ಬ್ಯಾಂಕ್ ಕ್ಲರ್ಕ್, ಪಂಚಾಯಿತಿ ಕಾರ್ಯದರ್ಶಿ ಸೇರಿದಂತೆ ನಾನಾ ಹುದ್ದೆಗಳನ್ನು ಕೊಡಿಸುವುದಾಗಿ ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ಎಂಟು-ಹತ್ತು ಯುವಕರಿಂದ 14.10 ಲಕ್ಷ ರೂಪಾಯಿ ನಗದು ಹಣ ಪಡೆದು ಪರಾರಿಯಾಗಿದ್ದಾಳೆ.
ಹಣ ಕಳೆದುಕೊಂಡವರು ಇದೀಗ ಲಿಂಗಸುಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ನಮ್ಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.