ETV Bharat / state

ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರುತ್ತದೆ: ಸಿದ್ದರಾಮಯ್ಯ - former cm siddaramaiah slams bjp govt

ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಬೇಕೆಂದು ಎಲ್ಲಿಯೂ ಹೇಳಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಕೊಟ್ಟಿದ್ದಾರೆ. ಚುನಾವಣಾ ಉದ್ದೇಶದಿಂದ ಬಿಜೆಪಿಯವರು ಮೀಸಲಾತಿಯನ್ನು ಅಪ್ರಸ್ತುತಗೊಳಿಸಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

siddaramaiah
ಸಿದ್ದರಾಮಯ್ಯ
author img

By

Published : Jan 13, 2023, 9:41 AM IST

ಹಾಲುಮತ ವೈಭವೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ರಾಯಚೂರು: ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಬೇಕು ಅಂತ ಎಲ್ಲಿಯೂ ಹೇಳಿಲ್ಲ. ಅವರೂ ಸಹ ಕೇಳಿಲ್ಲ. ಆದ್ರೂ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೆ ಈ ಮೀಸಲಾತಿಯೂ ಇರುತ್ತದೆ. ಬಿಜೆಪಿಯವರು ಮೀಸಲಾತಿ ಅಪ್ರಸ್ತುತಗೊಳಿಸಲು ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಾಗಿನೆಲೆ ಪೀಠದಲ್ಲಿ ಆಯೋಜಿಸಿದ್ದ ಹಾಲುಮತ ವೈಭವೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಕೊಟ್ಟಿದ್ದಾರೆ. ಇದೇ ವೇಳೆ ಈಗ ಎಲ್ಲವನ್ನೂ ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಔಟ್‌ಸೋರ್ಸ್​ನಲ್ಲಿ ನೇಮಕಾತಿ ‌ಮಾಡಲು ಆರಂಭಿಸಿದ್ದಾರೆ. ಹಿಂದುಳಿದ ಜನರಲ್ಲಿ ಈ ಜಾಗೃತಿ ‌ಬರದೇ ಹೋದರೆ, ನಿಮಗೆ ಆಗುತ್ತಿರುವ ಅನ್ಯಾಯ ಅರ್ಥವಾಗುವುದಿಲ್ಲ. ಬಹುಸಂಖ್ಯಾತರಾದ ಹಿಂದುಳಿದವರು, ದಲಿತರಿಗೆ ಧ್ವನಿಯೇ ಇಲ್ಲದಂತಾಗಿದೆ ಎಂದು ಹೇಳಿದರು.

ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ: ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಇದ್ದರೂ ಕೂಡ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಕುರುಬರಿಗೆ ಎಸ್​ಟಿ ಮೀಸಲಾತಿ ಕೊಡಿಸಲು ಸಾಧ್ಯವಾಗಿಲ್ಲ. ಹೋರಾಟದ ಹೆಸರಿನಲ್ಲಿ ಡೋಂಗಿತನ ಪ್ರದರ್ಶಿಸಿ, ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಕುರುಬ ಸಮುದಾಯವನ್ನು ಸಂತಸಪಡಿಸಲು ಎಸ್​ಟಿಗೆ ಸೇರಿಸುತ್ತೇವೆ ಅಂತಾರೆ. ಈಶ್ವರಪ್ಪ ಅವರಿಗೆ ಧಮ್‌ ಇಲ್ಲ. ತಾಕತಿದ್ದರೆ ಕುರುಬರಿಗೆ ಎಸ್​ಟಿ ಮೀಸಲು ಒದಗಿಸಲಿ ನಾನೂ ಸಂತೋಷ ಪಡುತ್ತೇನೆ ಎಂದರು.

ಇದನ್ನೂ ಓದಿ: ಹಾಲುಮತ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ : ಸಿಎಂ ಬಿಎಸ್​ವೈ

'ಜಾತಿ ಸಮಾಜದಲ್ಲಿ ಆಳವಾಗಿ ಬೇರೂರಿದೆ': ನಾವು ಮೂಲತಃ ಕುರಿ ಕಾಯುವವರು. ಕುರುಬರಲ್ಲಿಯೂ ಅನೇಕ ಒಳ ಪಂಗಡಗಳಿವೆ. ಎಲ್ಲಾ ಜಾತಿಗಳು ಅವರ ವೃತ್ತಿಯಿಂದ ಆಗಿವೆ. ಧರ್ಮದ ಚೌಕಟ್ಟು ಸೇರಿ ಜಾತಿಗಳು ಗಟ್ಟಿ ಆಗಿವೆ. ಜಾತಿ ವ್ಯವಸ್ಥೆ ಹೋಗಲಾಡಿಸಬೇಕು ಅಂತ ಅನೇಕ ಪ್ರಯತ್ನಗಳು ‌ನಡೆದಿವೆ. ಜಾತಿ ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ. ಜಾತಿಗಳು ಸಮಾಜದಲ್ಲಿ ಆಳವಾಗಿ ಬೇರೂರಿವೆ. ಯಾವಾಗ ಜಡತ್ವ ಇರುತ್ತದೋ ಆಗ ಸಾಮಾಜಿಕ, ಆರ್ಥಿಕ ಬದಲಾವಣೆ ಆಗಲ್ಲ. ನಮ್ಮದು ಚಲನೆರಹಿತವಾದ ಸಮಾಜ. ಜಾತಿ ವ್ಯವಸ್ಥೆ ಕಾರಣದಿಂದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ ಎಂದ ಅವರು ಶಿಕ್ಷಣ, ಸಂಘಟನೆ, ಹೋರಾಟ ಮಾಡಿದಾಗ ನ್ಯಾಯಯುತ ಹಕ್ಕು ಸಿಗುತ್ತವೆ ಎಂದು ತಿಳಿಸಿದರು.

'2 ವರ್ಷದಲ್ಲಿ ವೀರಮಕ್ಕಳ ಕುಣಿತ ಕಲಿತೆ': ಕುರುಬ ಜನಾಂಗದ ಕಲಾವೈಭವ ಬೇರೆ ಜನಾಂಗದಲ್ಲಿ ಇರುವುದು ಕಷ್ಟ. ನಾನು ಹುಡುಗನಾಗಿದ್ದಾಗ ವೀರಮಕ್ಕಳ ಕುಣಿತ ಕಲಿತಿದ್ದೆ. ಎರಡು ವರ್ಷದಲ್ಲಿ ವೀರಮಕ್ಕಳ ಕುಣಿತ ಕಲಿತೆ ಎಂದು ವೇದಿಕೆ ಮೇಲೆ ಬಾಲ್ಯ ಜೀವನದ ಘಟನೆಗಳನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, ನಂಜೇಗೌಡ, ರಾಜಪ್ಪ, ನಂಜುಂಡಸ್ವಾಮಿ ಇರಲಿಲ್ಲ ಅಂದಿದ್ರೆ ನಾನು ಎಂಎಲ್​ಎ ಆಗುತ್ತಿರಲಿಲ್ಲ, ಸಿಎಂ ಕೂಡ ಆಗುತ್ತಿರಲ್ಲಿಲ್ಲ ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಕುರುಬ ಸಮುದಾಯದ ಎಸ್‌ಟಿ ಮೀಸಲಾತಿಗಾಗಿ ಸಿಎಂ ಕೇಂದ್ರಕ್ಕೆ ಶಿಫಾರಸು ಮಾಡಬೇಕು.. ಕಾಗಿನೆಲೆ ಶ್ರೀಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.