ರಾಯಚೂರು: ಲೋಕಸಭೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ ನಾಯಕ ಅವರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ.
ಎರಡನೇ ಹಂತದಲ್ಲಿ ನಡೆಯುವ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ಮತ್ತು ರಾಜಾ ಅಮರೇಶ ನಾಯಕ ಸೇರಿದಂತೆ ಹಲವರ ಮಧ್ಯೆ ಟಿಕೆಟ್ಗಾಗಿ ಫೈಟ್ ನಡೆದಿತ್ತು.
ಇದರಿಂದ ಬಿಜೆಪಿ ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವ ಕುತೂಹಲ ಮೂಡಿಸಿತ್ತು. ಆದ್ರೆ ಅಂತಿಮವಾಗಿ ಬಿಜೆಪಿ ರಾಜಾ ಅಮರೇಶ ನಾಯಕರನ್ನ ಕಣಕ್ಕೆ ಇಳಿಸುವ ಮೂಲಕ ರಾಯಚೂರು ಲೋಕ ಕಣ ರಂಗೇರುವಂತೆ ಆಗಿದೆ.