ETV Bharat / state

ರಾಯಚೂರಲ್ಲಿ ಪ್ರವಾಹ ಭೀತಿ: ಜಿಲ್ಲೆಗೆ ಆಗಮಿಸಿದ ಎನ್​ಡಿಆರ್​ಎಫ್​​ ರಕ್ಷಣಾ ತಂಡ - NDRF

ಕೃಷ್ಣಾ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮುಂಜಾಗೃವಾಗಿ ಎನ್​ಡಿಆರ್​ಎಫ್​ನ  ರಕ್ಷಣಾ ತಂಡ ಜಿಲ್ಲೆಗೆ ಆಗಮಿಸಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಲ್ಲದೇ, ಪ್ರವಾಹ ಹಿನ್ನೆಲೆಯಲ್ಲಿ ರಾಯಚೂರು ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

Flooding in Raichur district: NDRF rescue team arrived to district, ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ: ಜಿಲ್ಲೆಗೆ ಆಗಮಿಸಿದ ಎನ್​ಡಿಆರ್​ಎಫ್ ರಕ್ಷಣಾ ತಂಡ
author img

By

Published : Aug 4, 2019, 9:58 AM IST

ರಾಯಚೂರು: ಕೃಷ್ಣಾ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಮುಂಜಾಗೃತೆಗಾಗಿ ಎನ್​ಡಿಆರ್​ಎಫ್​​ನ ರಕ್ಷಣಾ ತಂಡ ಜಿಲ್ಲೆಗೆ ಆಗಮಿಸಿದೆ.

25 ಜನರನ್ನೊಳಗೊಂಡ ಈ ತಂಡ ಜನರನ್ನು ರಕ್ಷಿಸಲು ಎಲ್ಲಾ ಸಿದ್ಧತೆಗಳನನ್ನು ಮಾಡಿಕೊಂಡಿದೆ. 25 ಜನರ ಈ ತಂಡ ಪುನಃ ಎರಡು ಗುಂಪುಗಳಾಗಿ, ಒಂದು ಗುಂಪು ಲಿಂಗಸೂಗೂರು ತಾಲೂಕು, ಇನ್ನೊಂದು ಗುಂಪು ರಾಯಚೂರು ತಾಲೂಕಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ ಕಡೆ ಹೆಚ್ಚಿನ ರಕ್ಷಣೆ ಅಗತ್ಯವಿದೆಯೋ ಅಲ್ಲಿ ಈ ತಂಡ ಕಾರ್ಯಾಚರಣೆ ನಡೆಸಲಿದೆ.

ಸದ್ಯ ನಾರಾಯರಣಪುರ ಜಲಾಶಯದಿಂದ 2.55 ಲಕ್ಷ ಕ್ಯೂಸೆಕ್​​ ನೀರನ್ನು ನದಿಗೆ ಹರಿಬಿಟ್ಟಿದ್ದು, ಶೀಲಹಳ್ಳಿ ಬ್ರಿಡ್ಜ್ ಮುಳಗಡೆಗೊಂಡಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಹಾಗೂ ಯರಗೋಡಿ ಬ್ರಿಡ್ಜ್ ಬಳಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.

ಇನ್ನು ಜಿಲ್ಲಾಡಳಿತ ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದು, ಈಗಾಗಲೇ ನಡುಗಡ್ಡೆ ಪ್ರದೇಶ ನಿವಾಸಿಗಳಿಗೆ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ. ಮತ್ತು ಪ್ರವಾಹ ಹಿನ್ನೆಲೆಯಲ್ಲಿ ರಾಯಚೂರು ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

Intro:ಸ್ಲಗ್: ರಕ್ಷಣೆ ತಂಡ ಜಿಲ್ಲೆಗೆ ಆಗಮನ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 04-೦8-2019
ಸ್ಥಳ: ರಾಯಚೂರು
ಆಂಕರ್: ಕೃಷ್ಣ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದ ರಾಯಚೂರು ಜಿಲ್ಲೆ ಪ್ರವಾಹ ಎದುರಾಗಿರುವುದರಿಂದ ಎನ್ ಡಿಆರ್ ಎಫ್ನ ರಕ್ಷಣಾ ತಂಡ ಜಿಲ್ಲೆಗೆ ಆಗಮಿಸಿದೆ.Body: 25 ಜನರ ತಂಡ ಜಿಲ್ಲೆಗೆ ಆಗಮಿಸಿದೆ. ಪ್ರವಾಹವನ್ನ ನಿಲುಕಿರುವ ಜನರನ್ನ ರಕ್ಷಣೆ ಮಾಡಲು ಸಿದ್ದತೆ ಮಾಡಿಕೊಂಡಿದೆ. 25 ಜನರ ತಂಡ ಎರಡು ತಂಡಗಳಾಗಿ ಒಂದು ತಂಡ ಲಿಂಗಸೂಗೂರು ತಾಲೂಕು, ಇನ್ನೊಂದು ತಂಡ ರಾಯಚೂರು ತಾಲೂಕಿನ ಇರಲಿದೆ ಎಂದು ಹೇಳಲಾಗುತ್ತಿದೆ. ಯಾವ ಕಡೆ ರಕ್ಷಣೆ ಅವಶ್ಯಕತೆಯಿದೆಯೋ ಅಲ್ಲಿ ರಕ್ಷಣೆ ನಡೆಸಲಿದೆ. ಸದ್ಯ ನಾರಾಯರಣಪುರ ಜಲಾಶಯದಿಂದ 2.55 ಲಕ್ಷ ಕ್ಯೂಸೆಕ್ಸ್ ನದಿಗೆ ಹರಿದು ಬಿಟ್ಟಿದ್ದು, ಶೀಲಹಳ್ಳಿ ಬ್ರಿಡ್ಜ್ ಮುಳಗಡೆಗೊಂಡರೆ, ದೇವದುರ್ಗ ತಾಲೂಕಿನ ಹೂವಿನಹೆಡಗಿ ಹಾಗೂ ಯರಗೋಡಿ ಬ್ರೀಡ್ಜ್ ಬಳಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿವೆ. Conclusion:ಇನ್ನು ಜಿಲ್ಲಾಡಳಿತ ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಸಿದ್ದತೆ ನಡೆಸಿದ್ದು, ಈಗಾಗಲೇ ನಡುಗಡ್ಡೆ ಪ್ರದೇಶ ನಿವಾಸಿಗಳಿಗೆ ಆಹಾರ ಧಾನ್ಯಗಳು, ಮತ್ತು ನದಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ನೀಡಲಾಗಿದ್ದು, ಪ್ರವಾಹ ಹಿನ್ನಲೆಯಲ್ಲಿ ರಾಯಚೂರು ಕೃಷ್ಣ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.