ರಾಯಚೂರು : ಕೃಷ್ಣ ನದಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ ಬ್ರಿಡ್ಜ್ ಪಕ್ಕದ ಹಿಂದೂಪುರ ಹಾಗೂ ಇತರೆ ಗ್ರಾಮಕ್ಕೆ ನೀರು ನುಗ್ಗಿದೆ. ಅಲ್ಲದೇ ನದಿ ಪಕ್ಕದಲ್ಲಿ ಇರುವ ಜೋಪಡಿ, ಮನೆಗಳು ಕೊಚ್ಚಿ ಹೋಗಿವೆ.
ನೀರು ಹೆಚ್ಚಾಗಿರುವ ಕಾರಣ ಶಕ್ತಿನಗರದ ಬಗ್ರಾಮಕ್ಕೆ ನೀರು ನುಗ್ಗಿದೆ. ನೀರು ಗ್ರಾಮಕ್ಕೆ ಬಂದ ಕಾರಣ ಜನರಲ್ಲಿ ಆತಂಕ ಎದುರಾಗಿದೆ. ಇನ್ನು ಅಲ್ಲಿರುವ ಪ್ರೀತಮ್ ಆಕ್ವಾ ಶಾಲೆಗೂ ನೀರು ನುಗ್ಗಿನ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ನಾರಾಯಣ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ ನೀರು ಹಾಗೂ ಭೀಮಾ ನದಿಯಿಂದ 2.80 ಕ್ಯೂಸೆಕ್ ನೀರು ಹರಿ ಬಿಟ್ಟ ಪರಿಣಾಮ ಈ ಘಟನೆ ಸಂಭವಿಸಿದೆ.
ಇನ್ನು ಸಂತ್ರಸ್ತರಿಗೆ ದೇವದುರ್ಗದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಶಾಸಕರಾದ ಕೆ.ಶಿವನಗೌಡ ನಾಯಕರು ಭೇಟಿ ಕೊಟ್ಟು ನೆರೆ ಸಂತ್ರಸ್ತರಿಗೆ ಅಭಯ ನೀಡಿದರು. ಅಲ್ಲದೆ ಪ್ರವಾಹದ ಪೀಡಿತ ಪ್ರತಿ ಹಳ್ಳಿಗಳಿಗೂ ಮಾನ್ಯ ಶಾಸಕರು ಭೇಟಿ ನೀಡಲಿದ್ದಾರೆ.