ರಾಯಚೂರು : ಜಿಲ್ಲೆಗೆ ನೆರೆ ಸಂತ್ರಸ್ತರನ್ನ ರಕ್ಷಣೆ ಮಾಡಲು ಹೆಲಿಕಾಪ್ಟರ್ ಆಗಮಿಸಿದ್ದು, ನಡುಗಡ್ಡೆಯಲ್ಲಿ ಗರ್ಭಿಣಿ ಸೇರಿದಂತೆ ಸಿಲುಕಿಕೊಂಡಿದ್ದ 6 ಜನರನ್ನು ರಕ್ಷಿಸಲಾಗಿದೆ.
ಪ್ರವಾಹದ ಹಿನ್ನೆಲೆ ಲಿಂಗಸುಗೂರು ತಾಲೂಕಿನ ಕರಕಲ್ ಗಡ್ಡಿಯಲ್ಲಿ ಓರ್ವ ಗರ್ಭಿಣಿ ಸೇರಿದಂತೆ ಆರು ಜನ ಸಿಲುಕಿಕೊಂಡಿದ್ದರು. ಸದ್ಯ ವಾಯುನೆಲೆ ಹೆಲಿಕ್ಯಾಪ್ಟರ್ ಮೂಲಕ ಆರು ಜನರನ್ನ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಕೃಷ್ಣಾ ನದಿಯಿಂದ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಿಟ್ಟ ಪರಿಣಾಮ ಕರಕಲ್ ಗಡ್ಡಿ ಗ್ರಾಮದಲ್ಲಿ 6 ಜನ ಸೇರಿದಂತೆ ಜಾನುವಾರು ಸಿಲುಕಿಕೊಂಡಿದ್ದವು. ಇಂದು ಸಂಜೆ ಹೆಲಿಕ್ಯಾಪ್ಟರ್ ನೆರವಿನಿಂದ ಸಂತ್ರಸ್ತರನ್ನು ರಕ್ಷಣೆ ಮಾಡಲಾಯಿತು. ರಕ್ಷಣೆ ಬಳಿಕ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸಮಸ್ಯೆಯಾದ ಪರಿಣಾಮ ಅವರನ್ನು ಬೆಳಗಾವಿಗೆ ಕರೆದುಕೊಂಡು ಹೋಗಲಾಗಿದೆ.
ಇದಕ್ಕೂ ಮುನ್ನ ಎನ್ ಡಿಆರ್ ಎಫ್ ತಂಡ ಹಾಗೂ ಯೋಧರು ರಕ್ಷಣೆಗೆ ಮುಂದಾಗಿದ್ರು. ಆದರೆ, ನೀರಿನ ರಭಸಕ್ಕೆ ರಕ್ಷಣೆ ಮಾಡಲು ಬೋಟ್ ಸಾಥ್ ನೀಡದಿದ್ದರಿಂದ ರಕ್ಷಣೆ ಕಾರ್ಯ ನಿಂತಿತ್ತು. ಇದೀಗ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನರಲ್ಲಿ ಜೀವ ಭಯ ಶುರುವಾಗಿತ್ತು. ಹೀಗಾಗಿ ಜಿಲ್ಲಾಡಳಿತ ನಡುಗಡ್ಡೆಯಲ್ಲಿ ಸಿಲುಕಿದವರ ರಕ್ಷಣೆಗಾಗಿ ಹೆಲಿಕಾ ಪ್ಟರ್ ಬಳಕೆ ಮಾಡಲಾಯಿತು. ಆದರೆ, ಜನರ ಜತೆಯಲ್ಲಿದ್ದ ಮೇಕೆಗಳು, ದನಗಳ ಪ್ರವಾಹಕ್ಕೆ ಸಿಲುಕಿಗೊಂಡಿವೆ.