ರಾಯಚೂರು: ಜಿಲ್ಲೆಯ ಭೀಮಾ ಹಾಗೂ ಕೃಷ್ಣ ನದಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ರಾಯಚೂರು ತಾಲೂಕಿನ 17 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ನದಿ ತೀರದ ಹೊಲ-ಗದ್ದೆಗಳು ನೀರು ನುಗ್ಗಿ ಜಲಾವೃತವಾಗಿವೆ. ಕೆಲ ರೈತರ ಪಂಪ್‌ಸೆಟ್‌ಗಳು ನೀರು ಪಾಲಾಗಿವೆ. ಭೀಮಾ ನದಿಯಿಂದ ಸರಿಸುಮಾರು 3.60 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದರೆ, ನಾರಾಯಣಪುರ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ಕೃಷ್ಣಾ ನದಿ ನೀರನ್ನು ಹೊರಬಿಡಲಾಗ್ತಿದೆ. ಕೃಷ್ಣಾ ಹಾಗೂ ಭೀಮಾ ನದಿ ರಾಯಚೂರು ತಾಲೂಕಿನ ಗುರ್ಜಾಪುರದ ಬ್ರಿಡ್ಜ್ ಮತ್ತು ಬ್ಯಾರೇಜ್ ಬಳಿ ಸಂಗಮವಾಗಿ ಆಂದಾಜು 7 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ.
ಈಗಾಗಲೇ ಪ್ರವಾಹ ಎದುರಿಸಲು ಜಿಲ್ಲಾಡಳಿತ ತಯಾರಿ ನಡೆಸಿದ್ದು, ನದಿ ತೀರದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಅಗತ್ಯ ಸಿದ್ಧತೆಗಳನ್ನ ಮಾಡಿಕೊಂಡು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.