ರಾಯಚೂರು: ಮಗಳು ಅತ್ಯಾಚಾರಕ್ಕೊಳಗಾಗಲು ತಾನೇ ಕಾರಣ ಎಂದು ಬಾಲಕಿಯ ತಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸಿಂಧನೂರು ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಆಂಜಿನೇಯ(40) ಎಂಬಾತ ವಿಷ ಸೇವಿಸಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಸಿಂಧನೂರು ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳನ್ನು ಕುಡಿದ ಮತ್ತಿನಲ್ಲಿ ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದ. ಬೈಕ್ ಕೈಕೊಟ್ಟಿದ್ರಿಂದ ಅನಾಮಧೇಯ ವ್ಯಕ್ತಿಯ ವಾಹನದ ಮೇಲೆ ಮಗಳನ್ನು ಕಳುಹಿಸಿಕೊಟ್ಟಿದ್ದಾನೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರವಾಗಿದೆ. ಹೀಗಾಗಿ ತನ್ನ ತಪ್ಪಿನಿಂದಲೇ ಮಗಳ ಮೇಲೆ ದೌರ್ಜನ್ಯ ಆಯಿತು ಎನ್ನುವ ಕೊರಗಿನಿಂದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಈತನ ಸಾವಿನ ಕುರಿತು ಗ್ರಾಮದಲ್ಲಿ ಬೇರೆ ಬೇರೆ ಮಾತುಗಳು ಸಹ ಹರಿದಾಡುತ್ತಿವೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.