ETV Bharat / state

ರಾಯಚೂರು: ರೈಸ್​ ಮಿಲ್​ ಮಾಲೀಕರಿಂದ ರೈತರಿಗೆ ಅನ್ಯಾಯ ಆರೋಪ - Raichur

ರೈತರಿಂದ ಭತ್ತವನ್ನ ಖರೀದಿಸುತ್ತಿರುವ ರೈಸ್ ಮಿಲ್​​ ಮಾಲೀಕರು, ಖಾಲಿ ಚೀಲ ಹಾಗೂ ಅನ್ ಲೋಡ್ ಚಾರ್ಜ್​ಅನ್ನು ರೈತರ ಮೇಲೆ ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ಒಂದು ಖಾಲಿ ಚೀಲಕ್ಕೆ 30ರಿಂದ 40 ರೂ. ನಷ್ಟವಾಗುತ್ತಿದೆ ಎಂದು ರೈತರು ದೂರಿದ್ದಾರೆ.

farmers alleges against Rice Mill owners
ರಾಯಚೂರು
author img

By

Published : Jun 3, 2021, 9:23 AM IST

ರಾಯಚೂರು: ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಭತ್ತದ ಬೆಳೆಗಾರರಿಗೆ ರೈಸ್​ ಮಿಲ್​ ಮಾಲೀಕರಿಂದ ಮೋಸವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.

ಹಗಲು-ಇರುಳು ಶ್ರಮವಹಿಸಿ ಅನ್ನದಾತ ಬೆಳೆದ ಬೆಳೆಯನ್ನ ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡುವಾಗ ಮಾರುಕಟ್ಟೆಯಲ್ಲಿ ರೈತನಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಆದ್ರೆ ಸೂಕ್ತವಾದ ಬೆಲೆ ಸಿಗದೆ ರೈತ ತೊಂದರೆ ಅನುಭವಿಸುತ್ತಿದ್ದಾನೆ. ಸದ್ಯ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ರಾಯಚೂರಿನಲ್ಲಿ ಅಕ್ಕಿ ಗಿರಿಣಿ ಮಾಲೀಕರಿಂದ ಮೋಸ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ರೈಸ್​ ಮಿಲ್​ ಮಾಲೀಕರಿಂದ ಅನ್ಯಾಯ ಆರೋಪ

ಕೊರೊನಾ ಲಾಕ್​ಡೌನ್​ ಹಿನ್ನೆಲೆ ಎಪಿಎಂಸಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ರೈತರು ರೈಸ್ ಮಿಲ್​​ಗಳಿಗೆ ನೇರವಾಗಿ ಭತ್ತ ಮಾರಾಟ ಮಾಡುತ್ತಿದ್ದಾರೆ. ರೈತರಿಂದ ಭತ್ತವನ್ನ ಖರೀದಿಸುತ್ತಿರುವ ರೈಸ್ ಮಿಲ್​​ ಮಾಲೀಕರು, ಖಾಲಿ ಚೀಲ ಹಾಗೂ ಅನ್ ಲೋಡ್ ಚಾರ್ಜ್ಅನ್ನು ರೈತರ ಮೇಲೆ ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ಒಂದು ಖಾಲಿ ಚೀಲಕ್ಕೆ 30ರಿಂದ 40 ರೂ. ನಷ್ಟವಾಗುತ್ತಿದೆ ಎಂದು ರೈತರು ದೂರಿದ್ದಾರೆ.

ಖಾಲಿಚೀಲ, ಅನಲೋಡ್ ಚಾರ್ಜ್ಅ​ನ್ನು ರೈಸ್​​ ಮಿಲ್​​ ಮಾಲೀಕರು ಭರಿಸಬೇಕು. ಆದ್ರೆ ರೈತರ ಮೇಲೆ ಹಾಕುತ್ತಿದ್ದಾರೆ. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ರೈಸ್ ಮೀಲ್ ಮಾಲೀಕರ ಸಭೆ ಕರೆದು ಭತ್ತದ ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆಯನ್ನ ತ್ವರಿತವಾಗಿ ಬಗೆಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.