ರಾಯಚೂರು: ಬ್ಯಾಂಕ್ನಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿರುವ ಪ್ರಸಂಗ ರಾಯಚೂರು ಜಿಲ್ಲೆಯ ನಡೆದಿದೆ.
ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಎಸ್ಬಿಐ ಬ್ಯಾಂಕ್ನಲ್ಲಿ ಈ ಘಟನೆ ಸಂಭವಿಸಿದೆ.
ಹಾಲಾಪುರ ಗ್ರಾಮದ ಹಲುಗಪ್ಪ ಆತ್ಮಹತ್ಯೆ ರೈತ. ಹುಲಗಪ್ಪ ತನ್ನ ಹೊಲದ ಮೇಲೆ ಮಾಡಿದ ಸಾಲ ರಿನಿವಲ್ ಮಾಡಲು ಹಣ ಪಾವತಿ ಮಾಡಿದ್ದ. ಆದ್ರೆ ಬ್ಯಾಂಕ್ನ ಅಧಿಕಾರಿಗಳು ಸಾಲ ರಿನಿವಲ್ ಮಾಡಲು ನಿರಾಕರಿಸಿದ್ದರಿಂದ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದು, ಮದ್ಯವರ್ತಿಗಳ ಹಾವಳಿ ಮತ್ತು ಬ್ಯಾಂಕಿನ ದಿನಗೂಲಿ ನೌಕರ ಹಾಗೂ ಮ್ಯಾನೇಜರ್ ಕಾರಣವೆಂದು ದೂರದಿದ್ದಾನೆ.
ವಿಷಸೇವಿಸಿದ ರೈತನನ್ನು ಕೂಡಲೇ ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.