ETV Bharat / state

ಅಪ್ರಾಪ್ತೆಯೊಂದಿಗೆ ವಿವಾಹಿತನ ಸಂಬಂಧ.. ವಿಷ ಸೇವಿಸಿದ ಇಬ್ಬರಲ್ಲಿ ಒಬ್ಬರು ಸಾವು, ಇನ್ನೊಬ್ಬರ ಸ್ಥಿತಿ ಗಂಭೀರ

author img

By

Published : Dec 12, 2020, 12:35 PM IST

ಈ ಇಬ್ಬರು ಕೈಮೇಲೆ ಒಬ್ಬರ ಹೆಸರನ್ನು ಇನ್ನೊಬ್ಬರು ಬರೆದುಕೊಂಡಿದ್ದಾರೆ. ವಿಷ ಸೇವಿಸಿದ ಬಾಲಕಿ ಸಾವನ್ನಪ್ಪಿದ್ದು, ನರಸಪ್ಪನ ಸ್ಥಿತಿ ಗಂಭೀರವಾಗಿದೆ. ಸದ್ಯ ನರಸಪ್ಪನನ್ನು ಚಿಕಿತ್ಸೆಗಾಗಿ ಲಿಂಗಸಗೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ..

extra-marital-affair-with-minor-both-committed-suicide-in-raichur
ಅಪ್ರಾಪ್ತೆಯೊಂದಿಗೆ ವಿವಾಹಿತನ ಸಂಬಂಧ: ವಿಷ ಸೇವಿಸಿದ ಇಬ್ಬರಲ್ಲಿ ಒಬ್ಬರು ಸಾವು, ಇನ್ನೊಬ್ಬರ ಸ್ಥಿತಿ ಗಂಭೀರ

ರಾಯಚೂರು : ಅಪ್ರಾಪ್ತೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ಮನೆಯವರು ಅವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಇಬ್ಬರೂ ವಿಷ ಸೇವಿಸಿದ್ದಾರೆ. ಈ ವೇಳೆ ಬಾಲಕಿ ಸ್ವಾನ್ನಪ್ಪಿದ್ದರೆ, ವಿವಾಹಿತನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪೈದೊಡ್ಡಿ ಗ್ರಾಮದ ಕ್ರಾಸ್ ಬಳಿ ನಡೆದಿದೆ.

17 ವರ್ಷದ ಅಪ್ರಾಪ್ತೆಗೆ ಯರಜಂತಿ ಗ್ರಾಮದ ನರಸಪ್ಪ ಎಂಬ ವಿವಾಹಿತನೊಂದಿಗೆ ವಿವಾಹೇತರ ಸಂಬಂಧವಿತ್ತು. ನರಸಪ್ಪನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಹೀಗಾಗಿ ಇವರಿಬ್ಬರ ಸಂಬಂಧಕ್ಕೆ ಮನೆಯವರ ವಿರೋಧ ವ್ಯಕ್ತವಾಗಿದೆ. ಇದರಿಂದ ಬೇಸತ್ತ ಈ ಇಬ್ಬರು ಪೈದೊಡ್ಡಿ ಕ್ರಾಸ್ ಬಳಿ ವಿಷ ಸೇವಿಸಿದ್ದಾರೆ.

ಓದಿ:ಚಿಕ್ಕೋಡಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಕೈದಿ ಮಹಾರಾಷ್ಟ್ರದಲ್ಲಿ ಸೆರೆ

ಇನ್ನೂ ಈ ಇಬ್ಬರು ಕೈಮೇಲೆ ಒಬ್ಬರ ಹೆಸರನ್ನು ಇನ್ನೊಬ್ಬರು ಬರೆದುಕೊಂಡಿದ್ದಾರೆ. ವಿಷ ಸೇವಿಸಿದ ಬಾಲಕಿ ಸಾವನ್ನಪ್ಪಿದ್ದು, ನರಸಪ್ಪನ ಸ್ಥಿತಿ ಗಂಭೀರವಾಗಿದೆ. ಸದ್ಯ ನರಸಪ್ಪನನ್ನು ಚಿಕಿತ್ಸೆಗಾಗಿ ಲಿಂಗಸಗೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಬಾಲಕಿ ಸಾವಿಗೂ ಮುನ್ನ ಚೀಟಿ ಬರೆದಿದ್ದು, ನಮ್ಮ ಸಾವಿಗೆ ನಾವೇ ಕಾರಣ. ನಮ್ಮ ಶವಗಳನ್ನು ಯರಜಂತಿಯ ಮಾವಿನ ಗುಡಿಯ ಬಳಿ ಹೂಳಿ. ನಮ್ಮಲ್ಲಿಯ ಹಣ, ಚಿನ್ನಾಭರಣವನ್ನ ನರಸಪ್ಪನ ಮಕ್ಕಳಿಗೆ ನೀಡಿ ಎಂದು ಬರೆದು ವಿಷ ಸೇವಿಸಿದ್ದಾರೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.