ETV Bharat / state

ರಾಯಚೂರು ವಿವಿ ಸ್ಥಾಪಿಸಲು ಕೊನೆಗೂ ರಾಜ್ಯ ಸರ್ಕಾರ ಅಸ್ತು.. ವಿದ್ಯಾರ್ಥಿಗಳಲ್ಲಿ ಮೂಡಿದ ಸಂತಸ - undefined

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನೊಳಗೊಂಡಂತೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿ ಈ ಭಾಗದ ಪ್ರಗತಿಪರ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ವಿವಿ ಸ್ಥಾಪನೆಗೆ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗಿದೆ.

ರಾಯಚೂರು ವಿಶ್ವವಿದ್ಯಾಲಯ
author img

By

Published : May 29, 2019, 10:23 AM IST

ರಾಯಚೂರು : ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಜಿಲ್ಲೆ ರಾಯಚೂರು. ಇಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂಬ ಬಹುದಿನದ ಬೇಡಿಕೆ ಕೊನೆಗೂ ಈಡೇರುವ ಕಾಲ ಬಂದಿದೆ.

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನೊಳಗೊಂಡಂತೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿ, ಈ ಭಾಗದ ಪ್ರಗತಿಪರ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಹೋರಾಟ ಮಾಡಿದ್ದರು. ಇದಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ವಿವಿ ಸ್ಥಾಪನೆಗೆ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗಿದೆ. ಉದ್ದೇಶಿತ ವಿವಿ ಸ್ಥಾಪನೆ ಕುರಿತು ರಾಯಚೂರಿನ ಯರಗೇರಾ ಪಿಜಿ ಸೆಂಟರ್‌ನಲ್ಲಿ ಅನೇಕ ವಿಷಯಗಳ ಸ್ನಾತಕೋತ್ತರ ಪದವಿ ಕಾರ್ಸ್‌ಗಳು ಲಭ್ಯವಿದ್ದು, ಬಾಲಕರ ಹಾಗೂ ಬಾಲಕಿಯರ ಮೈನಾರಿಟಿ, ಒಬಿಸಿ ಪ್ರತ್ಯೇಕ ವಸತಿ ನಿಲಯ, ವಿಶಾಲ ಜಾಗವಿದ್ದು ಇದನ್ನು ವಿಶ್ವವಿದ್ಯಾಲಯವನ್ನಾಗಿ ಮಾಡುವುದು ಉಚಿತ. ಇದರಿಂದ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅನೇಕ ಹೋರಾಟ ನಡೆದಿದೆ.

ವಿವಿ ಸ್ಥಾಪನೆಯ ಬೆಳವಣಿಗೆ ಹಂತ :

ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತು ವಿವಿಧ ಹಂತಗಳ ಪರಿಣಾಮ ಇದರ ಸಾಧಕ ಬಾಧಕಗಳ ಪರಿಶೀಲನೆ ನಡೆಸಲು, ಗುಲ್ಬರ್ಗಾ ವಿಶ್ವವಿದ್ಯಾಲಯದ ಶಿಕ್ಷಣ ತಂಡ ನಿವೃತ್ತ ಕುಲಪತಿ ಡಾ.ಕುಟಿನೋ ಅವರ ಯರಗೇರಾ ಪಿಜಿ ಸೆಂಟರ್‌ಗೆ ಭೇಟಿ ನೀಡಿ ವರದಿ ಸಲ್ಲಿಸಿತ್ತು. ನಂತರ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಅವಧಿಯಲ್ಲಿಯೇ ವರದಿ ಸಲ್ಲಿಸಿದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇವೆಲ್ಲ ಬೆಳವಣಿಗೆಗಳ ಮಧ್ಯೆ ಈಗ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದು ಪ್ರಸಕ್ತ ಸಾಲಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರಲಿದೆ.

ರಾಯಚೂರು ವಿವಿ ವ್ಯಾಪ್ತಿಯಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ 200 ಕಾಲೇಜುಗಳು ಬರಲಿವೆ. ಇವು ಹಿಂದೆ ಗುಲ್ಬರ್ಗ ವಿವಿಯ ವ್ಯಾಪ್ತಿಯಲ್ಲಿದ್ದವು. ನೂತನ ವಿವಿಗೆ ರೂ.6.99 ಕೋಟಿ ಅನುಮೋದನೆ ನೀಡಿದ್ದು, ಇನ್ನೇನು ವಿವಿ ಕಾರ್ಯರಂಭವಾಗಬೇಕಿದೆ. ನಿನ್ನೆ ವಿವಿ ಸ್ಥಾಪನೆಯ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಈ ಭಾಗದ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಕಂದರೆ, ಗುಲ್ಬರ್ಗಾ ವಿವಿ, ವ್ಯಾಪ್ತಿಯಲ್ಲಿ ಹಲವಾರು ಕಾಲೇಜು ಇದ್ದ ಕಾರಣ ಕಾರ್ಯಭಾರ ಹೆಚ್ಚಾಗಿ ಅನೇಕ ಸಮಸ್ಯೆಯಾಗುತ್ತಿತ್ತು. ಅಲ್ಲದೇ ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.

ರಾಯಚೂರು ವಿಶ್ವವಿದ್ಯಾಲಯ

'ಬಹುದಿನದ ಬೇಡಿಕೆ ರಾಯಚೂರು ವಿವಿ ಸ್ಥಾಪನೆಗೆ ಕೊನೆಗೆ ಸಮ್ಮಿಶ್ರ ಸರಕಾರ ಮುಂದಾಗಿದ್ದು ಸ್ವಾಗತಾರ್ಹ. ಗುಲ್ಬರ್ಗಾ, ಬಳ್ಳಾರಿ ವಿವಿಯ ಹಾಗೆ ಈ ವಿಶ್ವವಿದ್ಯಾಲಯ ಬೆಳೆಯಬೇಕು. ಇದಕ್ಕೆ ಎರಡು ಜಿಲ್ಲೆಗಳ ಜನಪ್ರತಿನಿಧಿಗಳು ಕಾಳಜಿವಹಿಸಿ ಹೆಚ್‌ಕೆಆರ್‌ಡಿಬಿಯಿಂದ ಹೆಚ್ಚಿನ ಅನುದಾನ ಒದಗಿಸಲು ಮುಂದಾಗಬೇಕು. ಅಂದಾಗ ಮಾತ್ರ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಉದ್ದೇಶಿತ ವಿ.ವಿ.ಯ ಸ್ಥಾಪನೆಯ ಧ್ಯೇಯ ಈಡೇರಲು ಸಾಧ್ಯವಾಗಲಿದೆ' ಎನ್ನುತ್ತಾರೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ಡಾ.ರಜಾಕ್ ಉಸ್ತಾದ್.

ರಾಯಚೂರು ವಿಶ್ವವಿದ್ಯಾಲಯದ ಕುರಿತು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಹೆಮ್ಮೆಯ ವಿಷಯ , ರಾಜ್ಯದ ಇತರೆಡೆ ಒಂದು ಕಾಲೇಜು ಸ್ಥಾಪನೆಗೆ ರೂ.7-8 ಕೋಟಿ ನೀಡುತ್ತೆ ಸರಕಾರ. ಆದರೆ, ವಿವಿ ಸ್ಥಾಪನೆಗೆ ಕೇವಲ 6.99 ಕೋಟಿ ಬಿಡುಗಡೆ ಮಾಡಿದ್ದು ಸರಿಯಲ್ಲ. ಇಷ್ಟರಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಸಲು ಅಗಲ್ಲ. ಹಿಂದುಳಿದ ಜಿಲ್ಲೆಗೆ ತಾರತಮ್ಯ ಮಾಡದೇ ಹೆಚ್ಷಿನ ಅನುದಾನ ಒದಗಿಸಿ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಜ್ಞಾನ ವಿಜ್ಞಾನ ಸಮೀತಿಯ ಅಧ್ಯಕ್ಷ ಸೈಯದ್ ಹಫೀಜುಲ್ಲಾ.

Intro:ರಾಯಚೂರು ಜಿಲ್ಲೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು ಈ ಭಾಗದ ಬಹುದಿನದ ಬೇಡಿಕೆಯಾಗಿದ್ದ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಕೊನೆಗೆ ಈಡೇರುವ ಕಾಲ ಬಂದಿದೆ.
ಹೌದು,ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನು ಒಳಗೊಂಡಂತೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿ ಈ ಭಾಗದ ಪ್ರಗತಿಪರ ಸಂಘಟನೆಗಳು,ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ.

Body:ಇದಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ವಿ.ವಿ.ಸ್ಥಾಪನೆಗೆ ಸುಗ್ರಿವಾಜ್ಞೆಯನ್ನು ರಾಜ್ಯ ಪಾಲರಿಗೆ ಕಳುಹಿಸಿ ಕೊಡಲಾಗಿದೆ.
ಉದ್ದೇಶಿತ ವಿ.ವಿ.ಸ್ಥಾಪನೆ ಕುರಿತು ರಾಯಚೂರಿನ ಯರಗೇರಾ ಪಿಜಿ ಸೆಂಟರ್ನಲ್ಲಿ ಅನೇಕ ವಿಷಯಗಳ ಸ್ನಾತಕೋತ್ತರ ಪದವಿ ಕಾರ್ಸ್ ಗಳು ಲಭ್ಯವಿದ್ದು, ಬಾಲಕರ ಹಾಗೂ ಬಾಲಕಿಯರ ಮೈನಾರಿಟಿ,ಒಬಿಸಿ ಪ್ರತ್ಯೇಕ ವಸತಿ ನಿಲಯ,ವಿಶಾಲವಾದ ಜಾಗವಿದ್ದು ಇದನ್ನು ವಿಶ್ವವಿದ್ಯಾಲಯ ವನ್ನಾಗಿ ಮಾಡುವುದು ಉಚಿತ ಇದರಿಂದ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅನೇಕ ಹೋರಾಟ ನಡೆದಿದೆ.
ವಿ.ವಿ.ಸ್ಥಾಪನೆಯ ಬೆಳವಣಿಗೆ ಹಂತ: ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತು ವಿವಿಧ ಹಂತಗಳ ಪರಿಣಾಮ ಇದರ ಸಾದಕ ಬಾದಕಗಳ ಪರಿಶೀಲನೆ ನಡೆಸಲು ಗುಲ್ಬರ್ಗಾ ವಿಶ್ವವಿದ್ಯಾಲಯದ ಶಿಕ್ಷಣ ತಂಡ ನಿವೃತ್ತ ಕುಲಪತಿ ಡಾ.ಕುಟಿನೋ ಅವರ ಯರಗೆರಾ ಪಿಜಿ ಸೆಂಟರ್ಗೆ ಭೇಟಿ ನೀಡಿ ವರದಿ ಸಲ್ಲಿಸಿತ್ತು.
ನಂತರ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಅವಧಿಯಲ್ಲಿಯೇ ವರದಿ ಸಲ್ಲಿಸಿದರೂ ಕಾರ್ಯ ರೂಪಕ್ಕೆ ಬಂದಿರಲಿಲ್ಲ,ಇವೆಲ್ಲ ಬೆಳವಣಿಗೆಗಳ ಮಧ್ಯೆ ಈಗ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದು ಪ್ರಸಕ್ತ ಸಾಲಿನಲ್ಲಿ ಪ್ರತ್ಯಯ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರಲಿದೆ.
ಈ ರಾಯಚೂರು ವಿವಿ ವ್ಯಾಪ್ತಿಯಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ 200 ಕಾಲೇಜುಗಳು ಬರಲಿದೆ ಇವು ಹಿಂದೆ ಗುಲ್ಬರ್ಗ ವಿ.ವಿ.ಯ ವ್ಯಾಪ್ತಿಯಲ್ಲಿದ್ದವು.
ನೂತನ ವಿವಿಗೆ ರೂ.6.99 ಕೋಟಿ ಅನುಮೋದನೆ ನೀಡಿದ್ದು ಇನ್ನೇನು ವಿವಿ ಕಾರ್ಯರಂಭವಾಗಬೇಕಿದೆ.
ನಿನ್ನೆ ವಿವಿ ಸ್ಥಾಪನೆಯ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಈ ಭಾಗದ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ ಏಕೆಂದರೆ ಗುಲ್ಬರ್ಗಾ ವಿವಿ.ವ್ಯಾಪ್ತಿಯಲ್ಲಿ ಹಲವಾರು ಕಾಲೇಜು ಇದ್ದ ಕಾರಣ ಕಾರ್ಯಭಾರ ಹೆಚ್ಚಾಗಿ ಅನೇಕ ಸಮಸ್ಯೆಯಾಗುತ್ತಿತ್ತು ಅಲ್ಲದೇ ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.
" ಬಹುದಿನದ ಬೇಡಿಕೆಯಾದ ರಾಯಚೂರು ವಿ.ವಿ.ಸ್ಥಾಪನೆಗೆ ಕೊನೆಗೆ ಸಮ್ಮಿಶ್ರ ಸರಕಾರ ಮುಂದಾಗಿದ್ದು ಸ್ವಾಗತಾರ್ಹ, ಗುಲ್ಬರ್ಗಾ,ಬಳ್ಳಾರಿ ವಿವಿಯ ಹಾಗೆ ಈ ವಿಶ್ವವಿದ್ಯಾಲಯ ಬೆಳೆಯಬೇಕು ಇದಕ್ಕೆ ಎರಡು ಜಿಲ್ಲೆಗಳ ಜನಪ್ರತಿನಿಧಿಗಳು ಕಾಳಜಿ ವಹಿಸಿ ಹೆಚ್ ಕೆ ಆರ್ ಡಿ ಬಿ ಯಿಂದ ಹೆಚ್ಚಿನ ಅನುದಾನ ಒದಗಿಸಲು ಮುಂದಾಗಬೇಕು ಅಂದಾಗ ಮಾತ್ರ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಉದ್ದೇಶಿತ ವಿ.ವಿ.ಯ ಸ್ಥಾಪನೆಯ ಧ್ಯೆಯ ಸಾಧ್ಯವಾಗಲಿದೆ ಎನ್ನುತ್ತಾರೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ಡಾ.ರಜಾಕ್ ಉಸ್ತಾದ್ ಅವರು.
ರಾಯಚೂರು ವಿಶ್ವವಿದ್ಯಾಲಯದ ಕುರಿತು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಹೆಮ್ಮೆಯ ವಿಷಯ , ರಾಜ್ಯದ ಇತರೆಡೆ ಒಂದು ಕಾಲೇಜು ಸ್ಥಾಪನೆಗೆ ರೂ.7-8 ಕೋಟಿ ನೀಡುತ್ತೆ ಸರಕಾರ ಅದ್ರೆ ವಿವಿ ಸ್ಥಾಪನೆ ಗೆ ಕೇವಲ 6.99 ಕೋಟಿ ಬಿಡುಗಡೆ ಮಾಡಿದ್ದು ಸರಿಯಲ್ಲ ಇಷ್ಟರಲ್ಲಿ ಯಾವುದೇ ಶೈಕ್ಷಣಿಕ ವಟುವಟಿಕೆ ನಡೆಸಲು ಅಗಲ್ಲ ಹಿಂದುಳಿದ ಜಿಲ್ಲೆಗೆ ತಾರತಮ್ಯ ಮಾಡದೇ ಹೆಚ್ಷಿನ ಅನುದಾನ ಒದಗಿಸಿ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಜ್ಞಾನ ವಿಜ್ಞಾನ ಸಮೀತಿಯ ಅಧ್ಯಕ್ಷ ಸೈಯದ್ ಹಫೀಜುಲ್ಲಾ ಅವರು.

bite_1) ಡಾ.ರಝಾಕ್ ಉಸ್ತಾದ್, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕರು.

bite -2) ಸೈಯದ್ ಹಫೀಜುಲ್ಲಾ, ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರು ( ಗಡ್ಡ ,ಮೀಸೆ ಉಳ್ಳವರು)

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.