ETV Bharat / state

ಕೊರೊನಾ ಎಫೆಕ್ಟ್​​: ಹೈದರಾಬಾದ್​ ಗೆ ಹೋಗ್ತಿಲ್ಲ ಗಡಿ ಜಿಲ್ಲೆಯ ಜನರು - ಚೀನಾ ದೇಶವನ್ನೇ ನಡುಗಿಸಿದ ಕೊರೊನಾ ವೈರಸ್​

ಹೈದರಾಬಾದ್ ಟೆಕ್ಕಿಯೊಬ್ಬನಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ, ರಾಯಚೂರುನಿಂದ ಹೈದರಾಬಾದ್‌ಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡಿದೆ.

Effect of Corona
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ
author img

By

Published : Mar 4, 2020, 3:32 PM IST

ರಾಯಚೂರು: ಹೈದರಾಬಾದ್ ಟೆಕ್ಕಿಯೊಬ್ಬನಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ, ರಾಯಚೂರುನಿಂದ ಹೈದರಾಬಾದ್‌ಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡಿದೆ.

ಹೈದರಾಬಾದ್​​ಗೆ ತೆರಳುವ ಪ್ರಯಾಣಿಕರ ಸಂಖ್ಯೆ ಇಳಿಮುಖ

ರಾಯಚೂರು ನಗರ ಕೇಂದ್ರೀಯ ಬಸ್ ನಿಲ್ದಾಣದಿಂದ ಹೈದರಾಬಾದ್‌ಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದರು, ಆದರೆ ಹೈದರಾಬಾದ್​​ನಲ್ಲಿ ಕೊರೊನಾ ವೈರಸ್​​ ಹಬ್ಬಿದ್ದರಿಂದ ಮುತ್ತಿನ ನಗರಿ ತಲುಪುವ ಬಸ್‌ಗಳು ಖಾಲಿ ಖಾಲಿಯಾಗಿ ತೆರಳುತ್ತಿರುವ ದೃಶ್ಯ ಕಂಡು ಬರುತ್ತಿವೆ.

ಪ್ರತಿನಿತ್ಯ ಬಸ್‌ ಗಳಲ್ಲಿ 40ರಿಂದ 50 ಪ್ರಯಾಣಿಕರು ಸಂಚರಿಸುತ್ತಿದ್ದರು ಆದರೆ ಈಗ 15ರಿಂದ 20 ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದಾರೆ. ಕೊರೊನಾ ವೈರಸ್​ನಿಂದಾಗಿ ಜನರಲ್ಲಿ ತೀವ್ರ ಭಯ ಉಂಟಾಗಿದ್ದು, ಪ್ರತಿನಿತ್ಯದ ಜೀವನಕ್ಕೂ ತೊಡಕನ್ನುಂಟು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.