ETV Bharat / state

ಪತ್ನಿ ಮೇಲೆ ಮುನಿಸು... ಮದ್ಯದ ನಶೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿ ಸೇತುವೆಯನ್ನೇ ದಾಟಿದ ಭೂಪ!

ಕುಡಿದ ಅಮಲಿನಲ್ಲಿ ಪ್ರಾಣಾಪಾಯವನ್ನು ಲೆಕ್ಕಿಸದೇ ವ್ಯಕ್ತಿಯೊಬ್ಬ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯನ್ನು ದಾಟಿರುವ ವಿಚಿತ್ರ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

drunkned man crossed bridge which is filled with water
ಉಕ್ಕಿ ಹರಿಯುತ್ತಿರುವ ನದಿಯ ಸೇತುವೆಯನ್ನೇ ದಾಟಿದ ಭೂಪ
author img

By

Published : Aug 18, 2020, 6:33 PM IST

Updated : Aug 18, 2020, 7:59 PM IST

ರಾಯಚೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಯ ಸೇತುವೆಯನ್ನ ದಾಟಿರುವ ಘಟನೆ ದೇವದುರ್ಗ ತಾಲೂಕಿನ ಹೂವಿನಹಡಗಲಿಯಲ್ಲಿ ನಡೆದಿದೆ.

ಅಪಾಯವನ್ನು ಲೆಕ್ಕಿಸದೆ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಚಂದ್ರಶೇಖರ ಎಂಬ ವ್ಯಕ್ತಿ ಸೇತುವೆ ದಾಟಿ ದುಸ್ಸಾಹಸ ಮೆರೆದಿದ್ದಾನೆ. ಕೃಷ್ಣಾ ನದಿಯಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿಬಿಡಲಾಗಿರುವುದರಿಂದ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹಾಗಾಗಿ ಸೇತುವೆ ಬಳಿ ಯಾರೂ ಸುಳಿಯದಂತೆ ನಿರ್ಬಂಧ ಹೇರಲಾಗಿತ್ತು. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಚಂದ್ರಶೇಖರ್​ ನಿರ್ಭಯದಿಂದ ನದಿ ದಾಟಿದ್ದಾನೆ. ಘಟನೆ ನಡೆದ ಕೂಡಲೇ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಉಕ್ಕಿ ಹರಿಯುತ್ತಿರುವ ನದಿಯ ಸೇತುವೆಯನ್ನೇ ದಾಟಿದ ಭೂಪ

ಈ ವೇಳೆ ಪತ್ನಿ ತವರು ಮನೆಗೆ ಹೋಗಿದ್ದು, ಅವಳನ್ನು ಕರೆಯಲು ಹೋಗಿದ್ದೆ. ಅವಳು ಬರುವುದಿಲ್ಲ ಎಂದಿದ್ದಕ್ಕೆ ಬೇಸರವಾಯಿತು. ಹಾಗಾಗಿ ಸೇತುವೆ ದಾಟಿ ಬಂದಿರುವುದಾಗಿ ಚಂದ್ರಶೇಖರ್​ ಹೇಳಿದ್ದಾನೆ.

Last Updated : Aug 18, 2020, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.