ETV Bharat / state

Water problem: 'ದೋ ಅಬ್ ನಗರ' ಖ್ಯಾತಿಯ ರಾಯಚೂರಿನಲ್ಲಿ ಶುದ್ಧ ಕುಡಿಯುವ ನೀರಿನ ಬವಣೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ರಾಯಚೂರಿನಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ ನೀರಿನ ಸಮಸ್ಯೆ ಎದುರಾಗಿದೆ.

ನೀರಿನ ಸಮಸ್ಯೆ
ನೀರಿನ ಸಮಸ್ಯೆ
author img

By

Published : Jun 15, 2023, 6:19 PM IST

Updated : Jun 15, 2023, 9:56 PM IST

ನೀರಿನ ಸಮಸ್ಯೆ ಬಗ್ಗೆ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಪ್ರತಿಕ್ರಿಯೆ

ರಾಯಚೂರು : ಕೃಷ್ಣ ಮತ್ತು ತುಂಗಭದ್ರಾ ಎಂಬ ಎರಡು ನದಿಗಳ ಮಧ್ಯದಲ್ಲಿರುವ ದೋ ಅಬ್ ನಗರ ಎಂದು ಹೆಸರು ಪಡೆದಿರುವ ರಾಯಚೂರಿಗೆ ಕುಡಿಯುವ ನೀರಿನ ಸರಬರಾಜು ಸಮಸ್ಯೆ ಎದುರಾಗಿದೆ. ಹೀಗಾಗಿ ಎರಡು ದಿನಗಳಿಗೊಮ್ಮೆ ಬಿಡಲಾಗುತ್ತಿದ್ದ ನೀರನ್ನು ಈಗ ಮೂರು ದಿನಕ್ಕೊಮ್ಮೆ ಪೂರೈಕೆ ಮಾಡುವ ಪರಿಸ್ಥಿತಿ ತಲೆದೋರಿದೆ.

ನಗರದಲ್ಲಿ ಒಟ್ಟು 35 ವಾರ್ಡ್​ಗಳಿವೆ. ಈ ವಾರ್ಡ್​ಗಳಿಗೆ ಪ್ರತಿನಿತ್ಯ ನೀರು ಸರಬರಾಜನ್ನು ನಗರಸಭೆಯಿಂದ ಮಾಡಲಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ನೀರು ಕೊರತೆಯಿಂದ ಡ್ಯಾಂನಿಂದ ಕಾಲುವೆ ಮೂಲಕ ಬರಬೇಕಾದ ನೀರು ಬರದೆ ಜನರು ಪರದಾಡುವಂತಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಕಾಲುವೆ ಮುಖಾಂತರ ನಗರದ ಹೊರವಲಯದಲ್ಲಿ ನಿರ್ಮಿಸಲಾಗಿರುವ ರಾಂಪುರ ಕೆರೆ ಭರ್ತಿ ಮಾಡಿಕೊಂಡು ಅಲ್ಲಿಂದ ನಗರದ 14 ವಾರ್ಡ್​ಗಳಿಗೆ ನೀರು ಪೂರೈಸಲಾಗುತ್ತಿದೆ. ಶಕ್ತಿನಗರ ಬಳಿ ಇರುವ ಕೃಷ್ಣ ನದಿಯಿಂದ 21 ವಾರ್ಡ್​ಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ರಾಯಚೂರು ನಗರಸಭೆಯಿಂದ ಮಾಡಲಾಗುತ್ತಿತ್ತು.

ಆದರೆ, ವಿಪರೀತ ಬೇಸಿಗೆ ಇರುವುದರಿಂದ ನೀರಿನ ಲಭ್ಯತೆ ಕಡಿಮೆ ಇದ್ದು, ನಗರದ ಜನತೆಗೆ ಪ್ರತಿನಿತ್ಯ ನೀರು ಪೂರೈಕೆ ಮಾಡುವ ಬದಲಾಗಿ ಎರಡು ದಿನಗಳಿಗೊಮ್ಮೆ ನೀರು ಹರಿಸಲಾಗುತ್ತಿತ್ತು. ನೀರಿನ ಲಭ್ಯತೆ ಮತ್ತಷ್ಟು ಕಡಿಮೆಯಾಗುತ್ತಿದ್ದು ಈಗ ಮೂರು ದಿನಗಳಿಗೊಮ್ಮೆ ನೀಡಲು ನಗರಸಭೆ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಜನರಿಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ.

ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕುಗ್ಗಿ ಹೋಗಿದ್ದು ಕುಡಿಯುವ ನೀರಿನ ಸಂಪರ್ಕ ಇರುವುದರಿಂದ ಕೃಷ್ಣ ನದಿಯಿಂದಲೇ ನೀರು ಪೂರೈಸಲಾಗುತ್ತಿದೆ. ಜಲಾಶಯ ಹಾಗೂ ನದಿಗೆ ನೀರು ಹರಿದುಬರಬೇಕು. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಾಡಿಸುವ ಸಾಧ್ಯತೆ ಗೋಚರಿಸಿದೆ. ಸಮಸ್ಯೆ ಬಗ್ಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತುಂಗಭದ್ರಾ ಜಲಾಶಯದಿಂದ ಕುಡಿಯುವುದಕ್ಕೆ ರಾಯಚೂರಿಗೆ ನೀರು ಪೂರೈಸುವಂತೆ ಪತ್ರ ಬರೆದಿದ್ದಾರೆ.

ನೀರಿನ ಸಮಸ್ಯೆ ಬಗ್ಗೆ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಅವರನ್ನು ಕೇಳಿದಾಗ, "ರಾಯಚೂರಿಗೆ ರಾಂಪುರ ಕರೆ ಹಾಗೂ ಕೃಷ್ಣ ನದಿಯಿಂದ ಇದುವರೆಗೆ ಎರಡು ದಿನಗಳಿಗೊಮ್ಮೆ 35 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೀಗ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಎರಡು ದಿನಗಳಿಗೆ ಒಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯ ರಾಂಪುರ ಕರೆಯಿಂದ ನೀರು ಸರಬರಾಜು ಮಾಡುತ್ತಿಲ್ಲ. ಕೃಷ್ಣ ನದಿಯಿಂದಲೇ ನೀರು ಪೂರೈಕೆಯಾಗುತ್ತಿದೆ. ತುಂಗಭದ್ರಾ ಜಲಾಶಯದಿಂದ ಸದ್ಯದಲ್ಲೇ ನೀರು ಹರಿದು ಬರಲಿದ್ದು, ನಂತರ ರಾಂಪುರ ಕರೆಗೆ ನೀರು ಲಭ್ಯವಾಗಲಿದೆ. ಆಗ ಮತ್ತೆ ಯಥವಾತ್ತಾಗಿ ಎರಡು ದಿನಕ್ಕೆ ಒಮ್ಮೆ ನೀರನ್ನು ಜಿಲ್ಲಾಧಿಕಾರಿಗಳ ನಿರ್ದೇಶನಂತೆ ಬೀಡಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ : CM Siddaramaiah warns: ಕಲುಷಿತ ನೀರು ಸೇವಿಸಿ ಸಾವು: ಪ್ರಕರಣ ಮರುಕಳಿಸಿದರೆ ಜಿ.ಪಂ ಸಿಇಒ ಹೊಣೆ ಮಾಡಿ ಅಮಾನತ್ತಿಗೆ ಸೂಚಿಸಿ: ಸಿಎಂ ಎಚ್ಚರಿಕೆ

Last Updated : Jun 15, 2023, 9:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.