ರಾಯಚೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಪತ್ನಿಯು ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಮರ್ಚೇಟಾಳ್ ಗ್ರಾಮದ ತಾಯಪ್ಪ, ತನ್ನ ಪತ್ನಿ ತಿಮಲಮ್ಮ ಮೇಲೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ಬೇಸತ್ತ ಆಕೆ ಗಂಡನ ವಿರುದ್ಧ ದೂರು ನೀಡಲು ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಕಳೆದ 2019 ಜುಲೈ ತಿಂಗಳಲ್ಲಿ ಬೊಳಮಾನದೊಡ್ಡಿ ಗ್ರಾಮದ ತಿಮಲಮ್ಮ, ಮರ್ಚೇಟಾಳ್ ಗ್ರಾಮದ ತಾಯಪ್ಪನನ್ನು ವಿವಾಹವಾಗಿದ್ದಳು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಬಂಗಾರ ಹಾಗೂ ಬಟ್ಟೆ-ಬರೆ ಎಲ್ಲವನ್ನೂ ನೀಡಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಗಲಾಟೆ ನಡೆಸಿ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಣೆ ಕಿರುಕುಳ ದೂರು ದಾಖಲಿಸಿಕೊಳ್ಳಲಾಗಿದೆ.