ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದಾಗಿ ನಡುಗಡ್ಡೆಯಲ್ಲಿ ಸಿಲುಕಿದ್ದ ರೋಗಿಗೆ ಔಷಧಿ ತಲುಪಿಸುವ ಮೂಲಕ ವೈದ್ಯರ ತಂಡ ಸಾಹಸ ಮಾಡಿ ಮಾನವೀಯತೆ ತೋರಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಲಿಂಗಸುಗೂರು ತಾಲೂಕಿನ ಕರಕಲಗಡ್ಡೆಯಲ್ಲಿ ಈ ಘಟನೆ ನಡೆಯಿತು. ಭೋರ್ಗರೆಯುವ ನದಿಯಲ್ಲಿ ತೆಪ್ಪದಲ್ಲಿ ಸಾಗಿದ 6 ಜನರ ವೈದ್ಯರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತಗೊಂಡು ಕುಸಿದ ವೃದ್ಧ ಮಹಿಳೆ.. ಕ್ಷಣಮಾತ್ರದಲ್ಲಿ ಜೀವ ಉಳಿಸಿದ ವೈದ್ಯ
ಕರಕಲಗಡ್ಡಿ ನಿವಾಸಿ ತಿಪ್ಪಣ್ಣ ಪಾರ್ಶ್ಚವಾಯುನಿಂದ ಬಳಲುತ್ತಿದ್ದರು. ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ತಿಪ್ಪಣ್ಣ ಕುಟುಂಬಸ್ಥರು ವಾಸಿಸುತ್ತಿದ್ದು, ಕಳೆದ ಕೆಲವು ದಿನಗಳಿಂದ ಔಷಧಿ ಖಾಲಿಯಾಗಿ ಸಂಕಷ್ಟದಲ್ಲಿದ್ದರು. ಈ ಮಾಹಿತಿ ಪಡೆದ ವೈದ್ಯರು, ಕೂಡಲೇ ಔಷಧಿ ಪೂರೈಕೆಗೆ ಮುಂದಾಗಿದ್ದಾರೆ. ಮುಳುಗು ತಜ್ಞರ ಜೊತೆ ಸೇರಿ ಜೀವದ ಹಂಗು ತೊರೆದು ಔಷಧಿ ತಲುಪಿಸಿ ಸುರಕ್ಷಿತವಾಗಿ ವಾಪಸ್ ಮರಳಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಟ, 3 ಕಿ.ಮೀ ಓಡಿ ಬಂದು ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯ!