ETV Bharat / state

ಸ್ವಕ್ಷೇತ್ರಕ್ಕೆ ಮರಳಿದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್

ಕಾಂಗ್ರೆಸ್ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ಶಾಸಕ ಪ್ರತಾಪ್‌ಗೌಡ ಪಾಟೀಲ್​ ತಿಂಗಳ ಬಳಿಕ ಸ್ವಕ್ಷೇತ್ರಕ್ಕೆ ತೆರಳಿದ್ದಾರೆ.

ಸ್ವಕ್ಷೇತ್ರಕ್ಕೆ ಮರಳಿದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್
author img

By

Published : Aug 3, 2019, 11:36 AM IST

ರಾಯಚೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್​ ಸ್ವಕ್ಷೇತ್ರಕ್ಕೆ ಆಗಮಿಸಿದ್ದು, ಮನೆಯ ದೇವರಿಗೆ ಪೂಜೆ ಸಲ್ಲಿಸಿ, ಕುಟುಂಬದ ‌ಸದಸ್ಯ ಹಾಗು ತಮ್ಮ ಬೆಂಬಲಿಗರ ಕುಶಲೋಪರಿ ವಿಚಾರಿಸಿದ್ದಾರೆ.

ಸ್ವಕ್ಷೇತ್ರಕ್ಕೆ ಮರಳಿದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳು ಕ್ಷೇತ್ರದಲ್ಲಿ ಇರದಿದ್ದರೂ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಗರು ಹಾಗೂ ಮಕ್ಕಳು ನೋಡಿಕೊಂಡಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗು. ಮುಂದಿನ ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂದು ನಿರ್ಧಾರ ಮಾಡಿಲ್ಲ. ಅನರ್ಹತೆ ಕುರಿತು ಸುಪ್ರೀಂ ಕೋರ್ಟಿನಲ್ಲಿ ದಾವೆ ಹಾಕಿದ್ದೇವೆ. ಶೀಘ್ರದಲ್ಲಿ ತೀರ್ಪು ಬರಲಿದೆ. ನಾನೇ ಮತ್ತೆ ಸ್ಪರ್ಧೆಸುತ್ತೇನೆ. ನನ್ನ ಮಕ್ಕಳ ಬಗ್ಗೆ ಅಭಿಮಾನದಿಂದ ಕೆಲವರು ಪ್ರಸನ್ನ ಪಾಟೀಲ್ ಸ್ಪರ್ಧಿಸುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ ಅದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

ಅನರ್ಹಗೊಂಡ ನಂತರ ಬಿಜೆಪಿ ತಮ್ಮ ಬಗ್ಗೆ ಗಮನ ಕೊಡುತ್ತಿಲ್ಲ ಎನ್ನುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ನಿರ್ಧಾರ ಮಾಡಲಾಗುತ್ತದೆ. ಎಲ್ಲಾ ನಿರ್ಧಾರಗಳು ಕ್ಷೇತ್ರದ ಜನತೆ ಮೇಲೆ ನಿಂತಿದೆ ಎಂದರು.

Intro:ಸ್ಲಗ್: ಪ್ರತಾಪ್‌ಗೌಡ ಪಾಟೀಲ್ ಹೇಳಿಕೆ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್:ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೩-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ಕಾಂಗ್ರೆಸ್ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡು ಶಾಸನ ಸ್ಥಾನದಿಂದ ಅನರ್ಹಗೊಂಡ ಶಾಸಕ ಪ್ರತಾಪ್‌ಗೌಡ ಶಾಸಕ ತಿಂಗಳ ಬಳಿಕ ಸ್ವಕ್ಷೇತ್ರಕ್ಕೆ ಆಗಮಿಸಿದ್ದಾರೆ. Body:ಜಿಲ್ಲೆಯ ಮಸ್ಕಿಗೆ ಆಗಮಿಸಿದ ಶಾಸಕ ಪ್ರತಾಪ್‌ಗೌಡ ಪಾಟೀಲ್ ಮನೆಯ ದೇವರಿಗೆ ಸಲ್ಲಿಸಿ, ಕುಟುಂಬದ ‌ಸದಸ್ಯರೋಡನೆ ತಮ್ಮ ಬೆಂಬಲಿಗರು ಕುಶಲೋಪರಿ ವಿಚಾರಿಸಿದ್ರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳ ಕ್ಷೇತ್ರದಲ್ಲಿ ಇರದಿದ್ದರೂ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಗರು ಮಕ್ಕಳು ನೋಡಿಕೊಂಡಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗು.
ಮುಂದಿನ ದಿನಗಳಲ್ಲಿ ಯಾವ ಪಕ್ಷದಿಂದ ನಿಲ್ಲಬೇಕೆನ್ನುವ ನಿರ್ಧಾರ ಮಾಡಿಲ್ಲ. ಅನರ್ಹತೆ ಕುರಿತು ಸುಪ್ರೀಂ ಕೋರ್ಟಿನಲ್ಲಿ ದಾವೆ ಹಾಕಿದ್ದೇವೆ. ಬೇಗ ತೀರ್ಪು ಬರಲಿದೆ. ನಾನೇ ಮತ್ತೆ ಸ್ಪರ್ಧೆಸುತ್ತೇನೆ. ನನ್ನ ಮಕ್ಕಳ ಬಗ್ಗೆ ಅಭಿಮಾನದಿಂದ ಕೆಲವರು ಪ್ರಸನ್ನ ಪಾಟೀಲ್ ಸ್ಪರ್ಧಿಸುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ.
ಹಾಕದಂತೆ ಆತನ ಗೆಳೆಯರಿಗೆ ಸೂಚಿಸಿದ್ದೇನೆ.
ಅನರ್ಹಗೊಂಡ ನಂತರ ಬಿಜೆಪಿ ತಮ್ಮ ಬಗ್ಗೆ ಗಮನ ಕೊಡುತ್ತಿಲ್ಲ ಎನ್ನುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ನಿರ್ಧಾರ ಮಾಡಲಾಗುತ್ತದೆ.
ಎಲ್ಲಾ ನಿರ್ಧಾರಗಳು ಕ್ಷೇತ್ರದ ಜನತೆ ಮೇಲೆ ನಿಂತಿದೆ ಎಂದು ಹೇಳಿದ್ರು.

Conclusion:ಬೈಟ್.೧: ಪ್ರತಾಪ್‌ಗೌಡ ಪಾಟೀಲ್, ಅನರ್ಹಗೊಂಡ ಶಾಸಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.