ಲಿಂಗಸುಗೂರು: ಸರ್ಕಾರದ ವತಿಯಿಂದ ನೀಡಲ್ಪಡುವ ಉಚಿತ ಹಾಲನ್ನು ಪುರಸಭೆ ಸಿಬ್ಬಂದಿ ಮನಸೋ ಇಚ್ಚೆ ವಿತರಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಲಿಂಗಸುಗೂರು ಪುರಸಭೆ ವ್ಯಾಪ್ತಿಯ್ಲಿ ನಾಲ್ಕು ದಿನಗಳಿಂದ ನಿತ್ಯ ಸಾವಿರ ಲೀಟರ್ ಹಾಲು ವಿತರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಇಡೀ ಪಟ್ಟಣಕ್ಕೆ ಹಾಲು ಹಂಚಿವುದಾಗಿ ತಿಳಿಸಿದ್ದ ಪುರಸಭೆ ಸಿಬ್ಬಂದಿಗಳು. ಬಳಿಕ ಗೌಳಿಪುರ ಪ್ರದೇಶಕ್ಕೆ ಮಾತ್ರ ವಿತರಿಸಿದ್ದರು. ಇದೀಗ ಸ್ಲಂ ನಿವಾಸಿಗಳಿಗೆ ಮಾತ್ರ ಹಾಲು ಹಂಚುವುದಾಗಿ ತಿಳಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಗೌಳಿಪುರ, ಸಂತೆ ಬಜಾರ್, ಜನತಾ ಕಾಲೋನಿ, ಪಿಂಚಣಿಪುರ ಪ್ರದೇಶಗಳಲ್ಲಿ ಪುರಸಭೆ ಸಿಬ್ಬಂದಿಗಳು ಜನರ ಮುಖ ನೋಡಿ ಹಾಲು ವಿತರಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ಪುರಸಭೆ ಸದಸ್ಯೆ, ಸಿಬ್ಬಂದಿ ಹಾಗೂ ನಾಗರಿಕ ಮಧ್ಯೆ ವಾಗ್ವಾದ ನಡೆದಿದೆ. ಉಚಿತ ಹಾಲು ವಾಸ್ತವವಾಗಿ ಫಲಾನುಭವಿಗಳಿಗೆ ತಲಪುತ್ತಿಲ್ಲ. ಪುರಸಭೆ ಅಧಿಕಾರಿಗಳು ಮರುಪರಿಶೀಲನೆ ಮಾಡಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.