ರಾಯಚೂರು: ಯುಪಿಯ ಹಥ್ರಾಸ್ ನಲ್ಲಿ ಯುವತಿ ಮೇಲಿನ ಅತ್ಯಾಚಾರ ಹಾಗೂ ಕಾಂಗ್ರೆಸ್ ಯುವ ನೇತಾರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಮೃತ ಯುವತಿಯ ಮನೆಗೆ ತೆರಳಲು ಅವಕಾಶ ನೀಡದೆ ಎಳೆದಾಡಿರುವುದನ್ನು ಖಂಡಿಸಿ ದೇವದುರ್ಗ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ದೇವದುರ್ಗ ಪಟ್ಟಣದ ಉಪ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದ ಪದಾಧಿಕಾರಿಗಳು,
ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಕೃತ್ಯ ಅಮಾನವೀಯವಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಅಷ್ಟೇ ಅಲ್ಲದೇ ಕುಟುಂಬಸ್ಥರ ಮನೆಗೆ ತೆರಳಿ ಸಾಂತ್ವನ ಹೇಳಲು ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರೀಕಾಂಕ ಗಾಂಧಿ ಅವರನ್ನು ದಾರಿ ಮಧ್ಯೆದಲ್ಲೇ ತಡೆದಿರುವುದಲ್ಲದೇ ಅವರನ್ನು ತಳ್ಳಾಡಿ ಅವಕಾಶ ನೀಡದೇ ಪೊಲೀಸರನ್ನು ಬಳಸಿ ಅಚಾತುರ್ಯ ಮೆರೆದಿರುವುದು ಖಂಡನೀಯ. ಕೇಂದ್ರ ಹಾಗೂ ಯುಪಿ ರಾಜ್ಯದ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆಗೆ ಮುಂದಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕರಿಲಿಂಗಪ್ಪ ನಾಡಗೌಡ, ವೇಣುಗೋಪಾಲ, ವಿನೋದ ಕುಮಾರ್, ತಿಮ್ಮಣ್ಣ ದಿವಾನ್, ಹುಸೆನಪ್ಪ, ಯಲ್ಲಪ್ಪ ಪೂಜಾರಿ ಸೇರಿ ಅನೇಕರಿದ್ದರು.