ರಾಯಚೂರು : ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಸೆ.15ರಿಂದ ಇಲಾಖೆಯ ಕಾರ್ಯಗಳ ಅನುಷ್ಠಾನ ವರದಿ ನೀಡದಿರಲು ಸಂಘಟನೆ ನಿರ್ಧರಿದೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದ್ರೂ ಸರ್ಕಾರ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.
ಹೀಗಾಗಿ ಸೆಪ್ಟಂಬರ್ 15 ರಿಂದ ಸೆ.21ರವರೆಗೆ ಇಲಾಖೆಯ ಕಾರ್ಯಗಳ ಅನುಷ್ಠಾನದ ವರದಿ ಸ್ಥಗಿತಗೊಳಿಸಿ, ಕೇವಲ ಆರೋಗ್ಯ ಸೇವೆ ನೀಡಲಾಗುವುದು. ಸೆ.21ರ ನಂತರ ತುರ್ತು ಸೇವೆ ಹೊರತುಪಡಿಸಿ, ಉಳಿದೆಲ್ಲಾ ಆರೋಗ್ಯ ಸೇವೆ ಸ್ಥಗಿತಗೊಳಿಸಲಾಗುವುದು.
ಹೀಗಾಗಿ, ಸರ್ಕಾರ ಕೂಡಲೇ ಎಚ್ಚೆತ್ತು ವೈದ್ಯರ ವೇತನ ಪರಿಷ್ಕರಣೆ ಸೇರಿ ಸರ್ಕಾರಿ ವೈದ್ಯರ ವಿವಿಧ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.