ರಾಯಚೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಈಟಿವಿ ಭಾರತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಹಾಡಿಸಿದ 'ವೈಷ್ಣವ ಜನತೋ' ಹಾಡಿಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![Congress leaders](https://etvbharatimages.akamaized.net/etvbharat/prod-images/4628165_collageasdasdsadasd.jpg)
ಗಾಂಧಿ ಜಯಂತಿ ಅಂಗವಾಗಿ ಖ್ಯಾತ ಗಾಯಕರ ಕಂಠದಿಂದ ಹೊರ ಬಂದಿರುವ ವೈಷ್ಣವ ಜನತೋ ಹಾಡು ಅತ್ಯಂತ ಸುಮಧುರವಾಗಿ ಮೂಡಿ ಬಂದಿದೆ. ಅವರ ಆದರ್ಶಗಳು ಪ್ರಸುತ್ತ ದಿನಮಾನಗಳಲ್ಲಿ ಆಳವಡಿಕೆ ಮಾಡಿಕೊಳ್ಳುವುದು ಅವಶ್ಯಕತೆಯಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
![Congress leaders](https://etvbharatimages.akamaized.net/etvbharat/prod-images/4628165_collageasdasd.jpg)
ಇನ್ನು, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್ ಹಾಗೂ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಸಹ ಟ್ವಿಟರ್ ಖಾತೆಯಲ್ಲಿ ಈ ಹಾಡನ್ನು ಶೇರ್ ಮಾಡಿಕೊಳ್ಳುವ ಮೂಲಕ ಈಟಿವಿ ಭಾರತದ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.