ETV Bharat / state

ಯಾರನ್ನೋ ಮೆಚ್ಚಿಸಲು ಗ್ರಾಮ ವಾಸ್ತವ್ಯ ಮಾಡ್ತಿಲ್ಲ: ಬಿಎಸ್​ವೈಗೆ ತಿರುಗೇಟು ನೀಡಿದ ಸಿಎಂ

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮದ ಗ್ರಾಮ ವಾಸ್ತವ್ಯದಲ್ಲಿದ್ದ ಕುಮಾರಸ್ವಾಮಿ ಜನತಾ ದರ್ಶನದ ಬಳಿಕ ಮಾತನಾಡಿ, ಯಾರನ್ನೋ ಮೆಚ್ಚಿಸಲು ಅಥವಾ ಅವರಿಂದ ಸರ್ಟಿಫಿಕೇಟ್​ ಪಡೆಯಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಜನರ ಸಮಸ್ಯೆ ಪರಿಹಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದರು.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ
author img

By

Published : Jun 27, 2019, 6:24 AM IST

ರಾಯಚೂರು : ಬಿಜೆಪಿಯಿಂದ ಸರ್ಟಿಫಿಕೇಟ್ ಪಡೆಯಲು ನಾನು ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ಕಾರ್ಯಕ್ರಮ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮದ ಗ್ರಾಮ ವಾಸ್ತವ್ಯದಲ್ಲಿದ್ದ ಕುಮಾರಸ್ವಾಮಿ ಜನತಾ ದರ್ಶನದ ಬಳಿಕ ಮಾತನಾಡಿ, ಯಾರನ್ನೋ ಮೆಚ್ಚಿಸಲು ಅಥವಾ ಅವರಿಂದ ಸರ್ಟಿಫಿಕೇಟ್​ ಪಡೆಯಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಜನರ ಸಮಸ್ಯೆ ಪರಿಹಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದರು.

ಈಗಿನ ಆಧುನಿಕತೆ ಯುಗದಲ್ಲಿ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಬಹುದು ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ನಾನು ಹಳ್ಳಿಯಿಂದ ಬಂದವನು, ಬಿಎಸ್‌ವೈ ಅವರಷ್ಟು ನೈಪುಣ್ಯತೆ ಇಲ್ಲ. ಜನರ ಬಳಿ ತೆರಳಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

ಸಾರ್ವಜನಿಕರಿಂದ ಸಲ್ಲಿಕೆಯಾದ ಸಾವಿರಾರು ಅಹವಾಲುಗಳಿಗೆ 15 ದಿನದಲ್ಲಿ ಪರಿಹಾರ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಸರ್ಕಾರ ಜನಸ್ನೇಹಿಯಾಗಿದೆ. ಸಮಸ್ಯೆಗೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಮೂಡಿಸುವ ಕೆಲಸವನ್ನು ಅಧಿಕಾರಿ ವರ್ಗ ಮಾಡಬೇಕು. ನೀರಾವರಿ ಇಲಾಖೆ ಭೂಸ್ವಾಧೀನ‌ ಮಾಡಿಕೊಂಡು ಹಣ ನೀಡದಿರುವ ಪ್ರಕರಣಗಳು ಕಂಡು ಬಂದಿದ್ದು ಇದರ ಬಗ್ಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಹೆಲಿಕ್ಯಾಪ್ಟರ್​​ ಮೂಲಕ ಬೀದರ್​ಗೆ ಹೋಗಲು 12 ಲಕ್ಷ ರೂ. ಖರ್ಚಾಗಲಿರುವ ಕಾರಣ 280 ಕಿ.ಮೀ ದೂರವನ್ನು ಕಾರಿನಲ್ಲಿಯೇ ಹೋಗುತ್ತಿದ್ದೇನೆ ಎಂದರು.

ಗಮನ ಸೆಳದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ:

ಇನ್ನು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ನೋಡಿ ಸಿಎಂ ಕುಮಾರಸ್ವಾಮಿ ಸಂತಸಗೊಂಡರು. ಈ ವೇಳೆ ಬಿವಿಆರ್ ಶಾಲೆಯ ವಿದ್ಯಾರ್ಥಿ ಮಾನವಿ, ಕುಮಾರಸ್ವಾಮಿ ವೇಷ ಭೂಷಣ ಧರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಅಣಕು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಉತ್ತರ ಕರ್ನಾಟಕದ ಊಟ ಸವಿದ ಸಿಎಂ

ಇನ್ನು ಜನತಾ ದರ್ಶನ ಮುಗಿದ ಬಳಿಕ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ ಸಿಎಂ ಮಕ್ಕಳೊಂದಿಗೆ ಉತ್ತರ ಕರ್ನಾಟಕ ಶೈಲಿಯ ಊಟ ಸವಿದರು. ಚಪಾತಿ, ಪುಂಡಿಪಲ್ಯ, ಚಟ್ನಿಪುಡಿ, ಬದನೆಕಾಯಿ ಪಲ್ಯ, ಚಿತ್ರಾನ್ನ, ಅನ್ನ, ಸಾಂಬರ್ ಸವಿದರು. ಭೋಜನದ ವೇಳೆ ಸಿಎಂಗೆ ಸಚಿವರಾದ ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ್, ಶಾಸಕರಾದ ಬಸವನಗೌಡ ದದ್ದಲ್, ರಾಜಾ ವೆಂಕಟಪ್ಪ ನಾಯಕ ಸಾಥ್​ ನೀಡಿದರು.

Intro:ಸ್ಲಗ್: ಸಿಎಂ ಗ್ರಾಮ‌ ವಾಸ್ತವ್ಯ ಜನತಾ ದರ್ಶನ ಅಂತ್ಯ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೬-೦೬-೨೦೧೯
ಸ್ಥಳ: ರಾಯಚೂರು

ಆಂಕರ್: ಬಿಜೆಪಿಯಿಂದ ಸರ್ಟಿಫಿಕೇಟ್ ಪಡೆಯಲು ನಾನು ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ಕಾರ್ಯಕ್ರಮ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.Body:ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮದ ಗ್ರಾಮ ವಾಸ್ತವ್ಯ, ಜನತಾ ದರ್ಶನ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದರು. ಜನರ ಸಮಸ್ಯೆ ಪರಿಹಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಹಮ್ಮಿಕೊಂಡು, ಜನರ ಬಾಳಿಗೆ ಸರಕಾರವನ್ನ ಕೊಂಡೊಯ್ಯುವುದಕ್ಕೆ ಜನರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಹೊರತು, ಯಾರನೋ ಮೆಚ್ಚಸಲೋ, ಅವರಿಂದ ಸರ್ಟಿಫಿಕೇಟ್ ಪಡೆಯಲು ಅಲ್ಲದ ಎಂದರು. ಈಗಿನ ಆಧುನಿಕತೆ ಯುಗದಲ್ಲಿ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಬಹುದು ಎಂದು ಬಿವೈಎಸ್ ಹೇಳುತ್ತಾರೆ. ನಾನು ಹಳ್ಳಿಯಿಂದ ಬಂದವನು, ಬಿಎಸ್‌ವೈ ಅವರಷ್ಟು ನೈಪುಣ್ಯತೆ ಇಲ್ಲ. ಜನರ ಬಳಿ ತೆರಳಿ ಕೆಲಸ ಮಾಡುತ್ತೇನೆ ಎಂದರು. ಸಾರ್ವಜನಿಕರಿಂದ ಸಲ್ಲಿಕೆಯಾದ ಸಾವಿರಾರು ಅಹವಾಲುಗಳಿಗೆ ೧೫ ದಿನದೊಳಗೆ ಕಾನೂನು ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಸರಕಾರ ಜನಸ್ನೇಹಿಯಾಗಿದೆ. ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಾರೆ ಎನ್ನುವ  ವಿಶ್ವಾಸ ಮೂಡಿಸುವ ಕೆಲಸವನ್ನು ಅಧಿಕಾರಿ ವರ್ಗ ಮಾಡಬೇಕು.
ನೀರಾವರಿ ಇಲಾಖೆ ಭೂಸ್ವಾಧೀನ‌ಮಾಡಿಕೊಂಡು ಹಣ ನೀಡದಿರುವ ಪ್ರಕರಣಗಳು ಕಂಡು ಬಂದಿದ್ದು, ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಸಮಯದಲ್ಲಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡ,‌ ಮೃತಪಟ್ಟ ಘಟನೆಗಳು ನಡೆದಿದ್ದು, ಮಾನವೀಯ ದೃಷ್ಡಿಯಿಂದ ಅಧಿಕಾರಿಗಳು ಅಂತಹ ಕುಟುಂಬಗಳ ನೆರವಿಗೆ ಬರಬೇಕು.
ಬೆಳಗ್ಗೆಯಿಂದ ಸಹಕರಿಸಿದ ಅಧಿಕಾರ ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದು, ನಾಳೆ ಹೆಲಿಕ್ಯಾಪ್ಟರ್ ಬೀದರ್ ಗೆ ಹೋಗಲು ೧೨ ಲಕ್ಷ ರೂ. ಖರ್ಚಾಗಲಿರುವ ಕಾರಣ ೨೮೦ ದೂರವನ್ನು ಕಾರ್ ನಲ್ಲಿಯೇ ಹೋಗುತ್ತಿದ್ದೇನೆ ಎಂದರು.

ತಾಳ್ಮೆಯಿಂದ ಅಹವಾಲು ಸ್ವೀಕರಿಸಿದ ಸಿಎಂ

ಹೆಚ್.ಡಿ.ಕುಮಾರಸ್ವಾಮಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಜೆ ೫:೩೦ರಿಂದ ರಾತ್ರಿ ೧೦ ಗಂಟೆಯವರೆಗೆ ಜನರಿಂದ ಖುದ್ದಾಗಿ ಅವಹಾಲು ಸ್ವೀಕರಿಸಿದ್ರು. ಆರಂಭದಲ್ಲಿ ವಿಕಲಚೇತನರಿಂದ ಬಳಿಕ ಸಾರ್ವಜನಿಕರಿಂದ ಸ್ವೀಕರಿಸುವ ಮೂಲಕ ನಿಮ್ಮ ಮನವಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ತಾಳ್ಮೆಯಿಂದ ಅಹವಾಲು ಗುಣಕ್ಕೆ ಹಲವಾರು ಮೆಚ್ಚುಗೆ ವ್ಯಕ್ತಪಡಿಸಿದರು ಜತೆಗೆ ಸಿಎಂಗೆ ಅಧಿಕಾರಿಗಳು ಸಾಥ್ ನೀಡಿದ್ರು.

ಗಮನ ಸೆಳದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ:

ಸಂಜೆ ವೇಳೆ‌ ಆರಂಭವಾಗಬೇಕಾಗಿದ್ದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜನತಾ ದರ್ಶನ ಮುಕ್ತಾಯ ಬಳಿಕ ಮಕ್ಕಳ ಸಾಂಸ್ಕೃತಿಕ ಕಲೆಯನ್ನ ವಿಕ್ಷೇಣೆ ಮಾಡಿ, ಮಕ್ಕಳಿಗೆ ಪ್ರೋತ್ಸಾಹಿಸಿದ್ರು. ಈ ವೇಳೆ ಮಾನವಿ ಬಿವಿಆರ್ ಶಾಲೆಯ ವಿದ್ಯಾರ್ಥಿಯೋರ್ವ ಕುಮಾರಸ್ವಾಮಿ ವೇಷ ಭೂಷಣ ಧರಿಸಿ, ಸಾರ್ವಜನಿಕ ಉದ್ದೇಶ ಮಾಡುವ ಭಾಷಣ ಗಮನ ಸೆಳೆಯಿತು.Conclusion:ಬೈಟ್.೧: ಹೆಚ್.ಡಿ.ಕುಮಾರಸ್ವಾಮಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.