ರಾಯಚೂರು : ಗಂಡಸರು ಹೊಡೆದಾಡಿದ್ರೆ ಗಂಡಸರನ್ನ ಕಳಿಸಬಹುದು, ಹೆಂಗಸರು ಹೊಡೆದಾಡಿದ್ರೆ ಹೆಂಗಸರನ್ನ ಕಳಿಸಬಹುದು. ಈ ಮಂಗಳಮುಖಿಯರು ಹೊಡೆದಾಡಿದ್ರೆ ಯಾರನ್ನ ಕಳುಹಿಸಲಿ?. ಬಿಜೆಪಿಯವರೇ ಮಂಗಳಮುಖಿಯರು, ಏನೋ ಬಸ್ಯಾ ಅಂತಾರೆ. ಬಿಜೆಪಿಯವರಿಗೆ ಏನಾದರು ಮಾನ ಇದೀಯಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಜ್ಞಾನವಾಪಿನು ಇಲ್ಲ, ಜ್ಞಾನಬಾಪಿನು ಇಲ್ಲ. ಅದು ನಮಗೆ ಸಂಬಂಧವಿಲ್ಲದ ವಿಷಯ. ನಮ್ಮದು ಕರ್ನಾಟಕ, ಯುಪಿಯಲ್ಲಿ ಏನು ನಡೆಯುತ್ತಿದೋ ನಮಗ್ಯಾಕೆ, ಅದರ ಕಡೆ ತಿರುಗಿ ನೋಡಲ್ಲ. ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ. ನಾವು ಆರೂವರೆ ಕೋಟಿ ಜನರು ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಒಡೆದ ಮನೆಯಾಗಿದೆ. ಬಿಜೆಪಿ 40, ಕಾಂಗ್ರೆಸ್ 20 ಪರ್ಸೆಂಟ್ ಕಮಿಷನ್‌ಗಾಗಿ ಜಗಳವಾಡುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಚಿಕ್ಕಪ್ಪ- ದೊಡ್ಡಪ್ಪನ ಮಕ್ಕಳಂತೆ. ಇವೆರಡು ಪಕ್ಷಗಳ ದುರಾಡಳಿತದಿಂದಾಗಿ ಈಗಾಗಲೇ ಜನ ಬೇಸತ್ತಿದ್ದು, ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ.
ಜೆಡಿಎಸ್ ಪ್ರಾದೇಶಿಕ ಪಕ್ಷ ಕಳೆದ 36 ವರ್ಷದಿಂದ ಇದೆ. ಜೆಡಿಎಸ್ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕನ್ನಡಿಗರು ಪ್ರಧಾನಿಯಾಗಿದ್ದ ಪಕ್ಷ ನಮ್ಮದು, ನಮ್ಮ ದೇವರನ್ನು ನಾವು ಯಾಕೆ ಕಡೆಗಣಿಸಬೇಕು ಎಂದರು. ಗುಜರಾತ್ ಮಾಡೆಲ್ ಪ್ರಚಾರಕ್ಕೆ ಟಾಂಗ್ ಕೊಟ್ಟ ಸಿಎಂ ಇಬ್ರಾಹಿಂ, ನಮ್ಮ ಊರಿನಲ್ಲಿ ಪಾನಿಪುರಿ ಮಾರುವವರೇ ಗುಜರಾತ್ನವರು.
ಕರ್ನಾಟಕದವರು ಗುಜರಾತ್ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ?, ಇಲ್ಲ. ನಮ್ಮ ರಾಜ್ಯದಲ್ಲಿ ಸ್ವಯಂ ಶಕ್ತಿಯಿದೆ. ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ಚಿತ್ರಣವೇ ಬದಲಾಗುತ್ತದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ. ದೆಹಲಿಗೆ ಬಾ, ಸೂಟ್ಕೇಸ್ ತಗೊಂಡ್ ಬಾ ಎಂಬುದು ನಮ್ಮಲ್ಲಿ ಇಲ್ಲ ಎಂದರು.
ಇದನ್ನೂ ಓದಿ: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ