ರಾಯಚೂರು: ಬೈಕ್ ಮೇಲೆ ಲಾರಿ ಹರಿದು, ಬೈಕ್ನಲ್ಲಿದ್ದ ಅಣ್ಣ-ತಂಗಿ ಇಬ್ಬರೂ ಸಾವನ್ನಪ್ಪಿ, ಒರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಟಿವಿಎಸ್ ಎಕ್ಸ್‌ಎಲ್ ಬೈಕ್‌ನಲ್ಲಿ ಅಣ್ಣ-ತಂಗಿ ಹಾಗೂ 8 ವರ್ಷದ ಬಾಲಕ ಟ್ರಾಫಿಕ್ ಸಿಗ್ನಿಲ್‌ನಿಂದ ಮುಂದೆ ತೆರಳುತ್ತಿದ್ದ ವೇಳೆ ಬೈಕ್ ಮೇಲೆ ಲಾರಿ ಹರಿದಿದೆ. ಈ ವೇಳೆ ಅಸ್ಕಿಹಾಳ ಗ್ರಾಮದ ಗೌರಿಶಂಕರ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಅಪಘಾತದಲ್ಲಿ ಗಂಭೀರ ಗಾಯಗೊಂಡ ಗೌರಿಶಂಕರ್ ತಂಗಿ ಕೀರ್ತಿ(೧೯) ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಇನ್ನು ಬೈಕ್ ಮುಂದೆ ಕುಳಿತಿದ್ದ 8 ವರ್ಷದ ಬಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೆರಿಗೆಯಾದ ಪತ್ನಿಗೆ ಬುತ್ತಿ ನೀಡಲು ತೆರಳುವಾತ ಮಸಣ ಸೇರಿದ!
ಗೌರಿಶಂಕರ್ ಪತ್ನಿಗೆ ಹೆರಿಗೆಯಾದ ಹಿನ್ನೆಲೆಯಲ್ಲಿ ರಿಮ್ಸ್ ಆಸ್ಪತ್ರೆಗೆ ಬುತ್ತಿ ನೀಡಲು ತೆರಳುವ ವೇಳೆ ಈ ಭೀಕರ ದುರಂತ ಸಂಭವಿಸಿದೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.