ETV Bharat / state

ಸರಕಾರದ ನಿಯಮ ಮೀರಿ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲು - ರಾಯಚೂರು ಪೊಲೀಸ್

ಸರಕಾರದ ನಿಯಮಗಳನ್ನ ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿರುವ ರಾಯಚೂರು ಜಿಲ್ಲೆಯ ವ್ಯಾಪಾರಿಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣವನ್ನ ದಾಖಲಿಸುತ್ತಿದೆ.

police
police
author img

By

Published : Jun 29, 2020, 11:57 AM IST

ರಾಯಚೂರು: ಕೋವಿಡ್-19 ಸಾಂಕ್ರಾಮಿಕ ರೋಗ ಹರಡವಿಕೆಯನ್ನ ತಡೆಗಟ್ಟಲು ಸರಕಾರ ನಿಯಮಗಳನ್ನು ರೂಪಿಸಿದ್ದು, ಅದನ್ನ ಪಾಲಿಸುವುದು ಕಡ್ಡಾಯವಾಗಿದೆ.

ಆದರೆ, ನಿಯಮ ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿರುವ ರಾಯಚೂರು ಜಿಲ್ಲೆಯ ವ್ಯಾಪಾರಸ್ಥರ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣವನ್ನ ದಾಖಲಿಸುತ್ತಿದೆ.

ನಿಯಮ ಮೀರಿದವರ ವಿರುದ್ಧ ಪ್ರಕರಣ ದಾಖಲು

ಗುಂಪಾಗಿ ಸೇರಿದ ಜನರು, ಮಾಸ್ಕ್ ಧರಿಸದವರು, ಸಾಮಾಜಿಕ ಅಂತರವನ್ನ ಕಾಯ್ದುಕೊಳದೇ ಇರುವವರು, ಸ್ಯಾನಿಟೈಸರ್ ಉಪಯೋಗಿಸದೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಬೇಕರಿ, ಹೋಟೆಲ್​​​, ಟೀ ಅಂಗಡಿ, ಕಿರಾಣಿ ಅಂಗಡಿ, ಬಟ್ಟೆ ಅಂಗಡಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

case filed
ನಿಯಮ ಮೀರಿದವರ ವಿರುದ್ಧ ಪ್ರಕರಣ ದಾಖಲು

ಇದುವರೆಗೆ 26 ಅಂಗಡಿ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಬೈಕ್ ಸವಾರರು ಹಾಗೂ ಮಾಸ್ಕ್ ಇಲ್ಲದೇ ಓಡಾಡುತ್ತಿರುವವರ ವಿರುದ್ದ ದಂಡ ವಿಧಿಸಿ, ಮಾಸ್ಕ್ ವಿತರಣೆ ಮಾಡಿ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.