ರಾಯಚೂರು: ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಸತತವಾಗಿ 5 ಬಾರಿ ಜಯ ಸಾಧಿಸಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರ ಪಂಚಾಯಿತಿ ವ್ಯಾಪ್ತಿಗೆ ಬರುವ ವಾರ್ಡ್ 4 ರಿಂದ ಸ್ಪರ್ಧಿಸಿದ ಗೋಪಿನಿಡಿ ಕೃಷ್ಣ ಎನ್ನುವವರು ಸತತವಾಗಿ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿದ್ದಾರೆ. 4 ಬಾರಿ ಜಯಭೇರಿ ಬಾರಿಸಿದ್ದ ಗೋಪಿನಿಡಿ ಕೃಷ್ಣ ಈ ಬಾರಿಯೂ ಸ್ಪರ್ಧಿಸಿ ಗೆದ್ದಿದ್ದಾರೆ.
ಓದಿ: ಮತ ಎಣಿಕೆ ಕೇಂದ್ರಕ್ಕೆ ಬಂದವರು ಮದುವೆ ಮನೆಗೆ ನುಗ್ಗಿ ಅವಾಂತರ; ಕುಟುಂಬಸ್ಥರು ಹೈರಾಣ
ನಾಲ್ಕು ಬಾರಿ ಜಯಗಳಿಸಿದ ಅವಧಿಯಲ್ಲಿ ಎರಡು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸತತ 5 ಬಾರಿ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿದ್ದಾರೆ.